For Quick Alerts
  ALLOW NOTIFICATIONS  
  For Daily Alerts

  ಅನ್‌ಲಾಕ್‌ 3.0: ಚಿತ್ರಮಂದಿರಗಳ ಬಾಗಿಲು ತೆರೆಯಲು ಸಿಗಲಿಲ್ಲ ಅನುಮತಿ

  |

  ಕೊರೊನಾ ಎರಡನೇ ಅಲೆಯನ್ನು ನಿಯಂತ್ರಿಸಲು ಸರ್ಕಾರ ಹೇರಿದ್ದ ಲಾಕ್‌ಡೌನ್‌ಗಳನ್ನು ಒಂದಾದಾಗಿ ಸಡಿಸಿಲುತ್ತಿದ್ದು ಇಂದು ಮೂರನೇ ಅನ್‌ಲಾಕ್ ಮಾರ್ಗಸೂಚಿಗಳನ್ನು ಸರ್ಕಾರ ಹೊರಡಿಸಿದೆ.

  ಹೊಸ ಮಾರ್ಗಸೂಚಿಯಲ್ಲಿ ಹಲವು ವ್ಯಾಪಾರ ವಹಿವಾಟು, ಸಾರಿಗೆ ಸಂಚಾರಗಳಿಗೆ ಅನುಮತಿ ನೀಡಲಾಗಿದೆ. ರಾಜ್ಯದಾದ್ಯಂತ ಹೇರಲಾಗಿದ್ದ ರಾತ್ರಿ ಕರ್ಫ್ಯೂವನ್ನು ತೆರವು ಮಾಡಲಾಗಿದೆ. ಆದರೆ ಚಿತ್ರರಂಗಕ್ಕೆ ಮಾತ್ರ ಹೊಸ ಮಾರ್ಗಸೂಚಿಯಿಂದ ನಿರಾಸೆಯಾಗಿದೆ. ಕಾರಣ, ಚಿತ್ರಮಂದಿರಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿಲ್ಲ.

  ಮಾಲ್‌ಗಳನ್ನು ತೆರೆಯಲು ಅವಕಾಶ ನೀಡಿರುವ ಸರ್ಕಾರ ಮಾಲ್‌ಗಳೊಳಗಿನ ಮಲ್ಟಿಫ್ಲೆಕ್ಸ್‌ಗಳು ತೆರೆಯುವಂತಿಲ್ಲ ಎಂದು ಹೇಳಿದೆ. ಮಲ್ಟಿಫ್ಲೆಕ್ಸ್‌ಗಳು ಮಾತ್ರವಲ್ಲದೇ ಯಾವುದೇ ಸಿಂಗಲ್ ಸ್ಕ್ರೀನ್‌ ಥಿಯೇಟರ್‌ಗಳು ಸಹ ಮುಂದಿನ ಆದೇಶದವರೆಗೆ ಕಾರ್ಯ ನಿರ್ವಹಿಸುವಂತಿಲ್ಲ.

  ಏಪ್ರಿಲ್ 3 ರಿಂದ ಎಲ್ಲ ಚಿತ್ರಮಂದಿರಗಳಲ್ಲಿ 50% ಪ್ರೇಕ್ಷಕರಿಗಷ್ಟೆ ಅವಕಾಶ ನೀಡಲಾಗಿತ್ತು. ಆ ನಂತರ ಪುನೀತ್ ರಾಜ್‌ಕುಮಾರ್ ಹಾಗೂ ಇತರರ ಮನವಿ ಮೇರೆಗೆ ಏಪ್ರಿಲ್ 7 ರ ಬಳಿಕ 50% ಪ್ರೇಕ್ಷಕರಿಗೆ ಅವಕಾಶ ನೀಡಲಾಯಿತು. ನಂತರ ಮತ್ತೆ ಹೊಸ ಆದೇಶ ಹೊರಡಿಸಿ ಏಪ್ರಿಲ್ 21 ರಿಂದ ರಾಜ್ಯದಾದ್ಯಂತ ಎಲ್ಲ ಚಿತ್ರಮಂದಿರಗಳನ್ನು ಬಂದ್ ಮಾಡುವಂತೆ ಆದೇಶಿಸಲಾಯಿತು. ಅಂದಿನಿಂದಲೂ ರಾಜ್ಯದಾದ್ಯಂತ ಎಲ್ಲ ಚಿತ್ರಮಂದಿರಗಳು ಬಂದ್ ಆಗಿವೆ.

  ಮೂರನೇ ಅನ್‌ಲಾಕ್‌ ನಲ್ಲಿ ಚಿತ್ರಮಂದಿರಗಳು ಪುನಃ ಕಾರ್ಯನಿರ್ವಹಿಸಲು ಅವಕಾಶ ನೀಡಬಹುದು ಎಂದು ಎಣಿಸಲಾಗಿತ್ತು. ಆದರೆ ನಿರೀಕ್ಷೆ ಹುಸಿಯಾಗಿದೆ. ಚಿತ್ರಮಂದಿರಗಳು ತೆರೆಯಲು ಇನ್ನಷ್ಟು ದಿನ ಕಾಯಬೇಕಾಗುತ್ತದೆ.

  ಇಂದು ಹೊರಡಿಸಿರುವ ಮಾರ್ಗಸೂಚಿಯಂತೆ ಯಾವುದೇ ಸಾರ್ವಜನಿಕ ಕಾರ್ಯಕ್ರಮಕ್ಕೆ ಸಹ ಅನುಮತಿ ನೀಡಲಾಗಿಲ್ಲ. ಹಾಗಾಗಿ ಆಡಿಯೋ ಪಂಕ್ಷನ್‌ಗಳು ಇತರೆ ಸಿನಿಮಾ ಸಂಬಂಧಿ ಕಾರ್ಯಕ್ರಮಗಳನ್ನು ಸಹ ಮಾಡುವಹಾಗಿಲ್ಲ.

  KGF 2 ನ ಎಲ್ಲಾ ಭಾಷೆಯ ಆಡಿಯೋ ಹಕ್ಕು ಖರೀದಿಸಿದ ಲಹರಿ ಸಂಸ್ಥೆ | Filmibeat Kannada

  ಆದರೆ ಈ ಹಿಂದಿನ ಆದೇಶದಲ್ಲಿ ಜೂನ್ 21 ರಿಂದ ಹೊರಾಂಗಣ ಚಿತ್ರೀಕರಣಕ್ಕೆ ಸರ್ಕಾರವು ಅನುಮತಿ ನೀಡಿತ್ತು. ಕೆಲವು ಸಿನಿಮಾಗಳು ಈಗಾಗಲೇ ಚಿತ್ರೀಕರಣ ಆರಂಭಿಸಿವೆ.

  English summary
  Government did not gave permission to open theaters in its unlock guidelines. Theaters will remain shut till July 19.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X