twitter
    For Quick Alerts
    ALLOW NOTIFICATIONS  
    For Daily Alerts

    ಸಿನಿಮಾ ನಿರ್ಮಾಪಕರಿಗೆ ಗೃಹ ಸಚಿವ ಆರಗ ಜ್ಞಾನೆಂದ್ರ ಅಭಯ

    |

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಸಿನಿಮಾ ನಿರ್ಮಾಪಕರಿಗೆ ಅಭಯ ನೀಡಿದರು.

    ''ಸಿನಿಮಾ ನಿರ್ಮಾಪಕರ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ನಿರ್ಮಾಪಕರ ಸಮಸ್ಯೆಗಳ ಕುರಿತಂತೆ ಸಿಎಂ ಜೊತೆ ಚರ್ಚೆ ನಡೆಸುತ್ತೇನೆ. ನಾನೂ ಸಹ ಚಿತ್ರರಂಗದೊಂದಿಗೆ ನಿಕಟ ಸಂಪರ್ಕದಲ್ಲಿರುತ್ತೇನೆ'' ಎಂದರು.

    ''ಕನ್ನಡ ಪ್ರತಿಭೆಗಳು ಹೆಚ್ಚು-ಹೆಚ್ಚು ಬೆಳೆಯಬೇಕು. ಕನ್ನಡ ಚಿತ್ರರಂಗ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸಬೇಕು ಎಂಬುದು ಸರ್ಕಾರದ ಆಸೆ ಸಹ. ಅದಕ್ಕೆ ತಕ್ಕುದಾದ ನೆರವು ಸರ್ಕಾರದ ಕಡೆಯಿಂದ ಇರುತ್ತದೆ'' ಎಂದರು.

    Government Is With Movie Producers: Home Minister Araga Jnanendra

    ''ನಾನು ಹೆಚ್ಚು ಸಿನಿಮಾ ನೋಡಿದವನಲ್ಲ ಆದರೆ ರಾಜ್‌ಕುಮಾರ್ ಅಭಿಮಾನಿಯಾಗಿದ್ದವನು. ರಾಜ್‌ಕುಮಾರ್ ನಂತರ ಮತ್ಯಾರು ಎಂದು ನೋಡುವ ಸಮಯವಿತ್ತು, ಆದರೆ ಕನ್ನಡ ಚಿತ್ರರಂಗದಲ್ಲಿ ಅದ್ಭುತ ಪ್ರತಿಭೆಗಳು ಆ ನಂತರವೂ ಬಂದರು. ಕನ್ನಡ ಚಿತ್ರರಂಗ ಕೆಲವು ಅತ್ಯುತ್ತಮ ಪ್ರತಿಭೆಗಳನ್ನು ರಾಜ್ಯಕ್ಕೆ, ರಾಷ್ಟ್ರಕ್ಕೆ ನೀಡಿದೆ. ಚಿತ್ರರಂಗದ ಕೊಡುಗೆಯನ್ನು ಮರೆಯುವಂತಿಲ್ಲ'' ಎಂದರು.

    ''ಈಗಾಗಲೇ ಸರ್ಕಾರ ಕೆಲವು ಕ್ರಮಗಳನ್ನು ಕೈಗೊಂಡಿದೆ. ಕೋವಿಡ್‌ನಿಂದ ಆಗಿರುವ ನಷ್ಟ ಸರಿತೂಗಿಸುವ ಬಗ್ಗೆ ಚರ್ಚಿಸಲಾಗುವುದು. ಈಗಾಗಲೇ ಚಿತ್ರಮಂದಿರಗಳ ಕೆಲವು ತೆರಿಗೆಗಳನ್ನು ಮನ್ನಾ ಮಾಡುವ ಕಾರ್ಯ ಆಗಿದೆ. ಕಲಾವಿದರಿಗೆ ನೆರವನ್ನೂ ನೀಡಲಾಗಿದೆ'' ಎಂದರು.

    ಪೈರಸಿ ಸಮಸ್ಯೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ''ಆನ್‌ಲೈನ್ ಗೇಮಿಂಗ್ ನಿಷೇಧ ಕಾಯ್ದೆಯನ್ನು ನಮ್ಮ ಸರ್ಕಾರ ಕೆಲ ದಿನಗಳ ಹಿಂದಷ್ಟೆ ತಂದಿದೆ. ಭಾರಿ ಒತ್ತಡ ಇದ್ದರೂ ನಾವು ಕಾಯ್ದೆ ತಂದು ಅನಿಷ್ಟ ಹೊರಗೆ ಹಾಕಿದ್ದೇವೆ. ಹಾಗೆಯೇ ಪೈರಸಿ ವಿರುದ್ಧ ಕಾಯ್ದೆ ತರಬೇಕಾದ ಪರಿಸ್ಥಿತಿ ಬಂದರೆ ಖಂಡಿತ ನಾವು ಹಿಂಜರಿಯುವುದಿಲ್ಲ'' ಎಂದು ಭರವಸೆ ನೀಡಿದರು.

    ''ನಮ್ಮ ಸೈಬರ್ ಸೆಲ್ ಬಹಳ ಶಕ್ತವಾಗಿದೆ. ತರಬೇತಿ ಪಡೆದವರನ್ನೇ ನೇಮಕ ಮಾಡಿಕೊಂಡಿದ್ದೇವೆ. ಗುಜರಾತ್ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡು ನಮ್ಮ ಕೆಲವು ಅಧಿಕಾರಿಗಳನ್ನು ತರಬೇತಿಗೆಂದೇ ಅಲ್ಲಿಗೆ ಕಳಿಸಿದ್ದೇವೆ. ಆಧುನಿಕ ತಂತ್ರಜ್ಞಾನ ಹೊಂದಿದ ಘಟಕವನ್ನು ಅನ್ನು ನಾವು ಹೊಂದಿದ್ದೇವೆ. ತಂತ್ರಜ್ಞಾನದ ವಿಷಯದಲ್ಲಿ ಇನ್ಫೋಸಿಸ್ ದೊಡ್ಡ ಸಹಾಯವನ್ನು ನಮಗೆ ಮಾಡಿದೆ'' ಎಂದರು ಆರಗ ಜ್ಞಾನೇಂದ್ರ.

    ''ಚಿತ್ರಮಂದಿರ ಹಾಗೂ ಮಲ್ಟಿಫ್ಲೆಕ್ಸ್‌ಗಳ ಸಮಸ್ಯೆ ಬಗೆಹರಿಸುವ ಬಗ್ಗೆ ಮುಂದಿನ ದಿನಗಳಲ್ಲಿ ಕಾರ್ಯಪ್ರವೃತ್ತವಾಗುತ್ತೇವೆ. ನನಗೆ ಚಿತ್ರೋದ್ಯಮ ಹೊಸದು. ನಾನು ರೈತರ ಮಗ, ನಮಗೆ ಪರದೆಯ ಮೇಲೆ ನಟಿಸುವ ಕಲಾವಿದರಷ್ಟೆ ಕಾಣುತ್ತಾರೆ. ಅದರ ಹಿಂದಿನ ನಿರ್ಮಾಪಕ, ತಂತ್ರಜ್ಞರು ಕಾಣುವುದಿಲ್ಲ. ನಾನೂ ಸಹ ಸಾಕಷ್ಟು ಅಧ್ಯಯನ ಮಾಡಬೇಕಿದೆ. ನಮ್ಮ ಅಧಿಕಾರಿಗಳ ಸಹಾಯದಿಂದ ಇನ್ನಷ್ಟು ಮಾಹಿತಿ ಪಡೆದುಕೊಳ್ಳುತ್ತೇನೆ. ಅಧಿಕಾರಿಗಳನ್ನು ಬೇಕಿದ್ದರೆ ಚಿತ್ರರಂಗದ ಪ್ರಮುಖರೊಂದಿಗೆ ಮುಖಾ-ಮುಖಿ ಮಾಡಿಸಿ ನಮ್ಮಿಂದ ಆಗಬೇಕಾದ ಸಹಾಯಗಳ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚೆ ನಡೆಸೋಣ'' ಎಂದರು.

    English summary
    Home minister Araga Jnanendra said government will support movie producers. Also said we have powerful cyber cell and will take effective measures to stop movie piracy.
    Wednesday, October 20, 2021, 13:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X