twitter
    For Quick Alerts
    ALLOW NOTIFICATIONS  
    For Daily Alerts

    ಸಿನಿಮಾ-ಧಾರಾವಾಹಿ ಚಿತ್ರೀಕರಣ ಆರಂಭ: ನಿರ್ಧಾರ ಪ್ರಕಟಿಸಲಿರುವ ಸರ್ಕಾರ

    |

    ಕೊರೊನಾ ಕಾರಣದಿಂದಾಗಿ ಸಿನಿಮಾ-ಧಾರಾವಾಹಿ ಸೇರಿದಂತೆ ಎಲ್ಲಾ ರೀತಿಯ ಚಿತ್ರೀಕರಣಗಳ ಮೇಲೆ ಸರ್ಕಾರ ನಿರ್ಬಂಧ ಹೇರಿತ್ತು.

    Recommended Video

    ಕೊರೊನಾದಿಂದ ಜನಪ್ರಿಯ ಸೀರಿಯಲ್ ಪ್ರಸಾರ ಸ್ಟಾಪ್!! | Gattimela | Jote Joteyali

    ಸುಮಾರು 44 ದಿನಗಳಿಂದಲೂ ಯಾವೊಂದು ಸಿನಿಮಾ, ಧಾರಾವಾಹಿ ಸಂಬಂಧಿ ಚಿತ್ರೀಕರಣಗಳು ನಡೆದಿರಲಿಲ್ಲ. ಆದರೆ ಈಗ ಚಿತ್ರೀಕರಣ ಆರಂಭಕ್ಕೆ ಅನುಮತಿ ನೀಡಲು ಸರ್ಕಾರ ನಿರ್ಧಾರ ಮಾಡಿದೆ.

     ಚಿತ್ರೀಕರಣ ಆರಂಭಿಸಲು ಅನುಮತಿ ನೀಡುವಂತೆ ಸಿಎಂ ಗೆ ಮನವಿ ಚಿತ್ರೀಕರಣ ಆರಂಭಿಸಲು ಅನುಮತಿ ನೀಡುವಂತೆ ಸಿಎಂ ಗೆ ಮನವಿ

    ಹಂತ-ಹಂತವಾಗಿ ಲಾಕ್‌ಡೌನ್ ತೆಗೆಯಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಅದರಂತೆ ಇಂದು ಬಾರ್‌ಗಳನ್ನು ತೆರೆಯಲು ಅನುಮತಿ ನೀಡಿದೆ. ಅದರ ಬೆನ್ನಲ್ಲೇ ಈಗ ಚಿತ್ರೀಕರಣಕ್ಕೂ ಅನುಮತಿ ನೀಡುವ ಬಗ್ಗೆ ನಿರ್ಧಾರ ಮಾಡಿದೆ ಎನ್ನಲಾಗಿದೆ.

    ಸುಳಿವು ನೀಡಿರುವ ಕಂದಾಯ ಸಚಿವ ಆರ್.ಅಶೋಕ್

    ಸುಳಿವು ನೀಡಿರುವ ಕಂದಾಯ ಸಚಿವ ಆರ್.ಅಶೋಕ್

    ಈ ಬಗ್ಗೆ ಕಂದಾಯ ಸಚಿವ ಆರ್.ಅಶೋಕ್ ಅವರು ಸುಳಿವು ನೀಡಿದ್ದು, ಚಿತ್ರೀಕರಣ ಆರಂಭ ಮಾಡಲು ಅನುಮತಿ ನೀಡುವ ಬಗ್ಗೆ ಸಿಎಂ ಜೊತೆ ಚರ್ಚಿಸಿ ನಾಳೆ (ಏಪ್ರಿಲ್ 05) ತೀರ್ಮಾನ ಪ್ರಟಿಸುತ್ತೇವೆ ಎಂದು ಹೇಳಿದ್ದಾರೆ.

    ಹಲವು ಮನವಿಗಳನ್ನು ಸಲ್ಲಿಸಲಾಗಿದೆ

    ಹಲವು ಮನವಿಗಳನ್ನು ಸಲ್ಲಿಸಲಾಗಿದೆ

    ಚಿತ್ರೀಕರಣ ಆರಂಭಕ್ಕೆ ಅನುಮತಿ ನೀಡುವಂತೆ ಈಗಾಗಲೇ ಸಿಎಂ ಅವರಿಗೆ ಮನವಿಗಳನ್ನು ಸಲ್ಲಿಸಲಾಗಿದೆ. ಚಿತ್ರೀಕರಣ ಆರಂಭಕ್ಕೆ ಅನುಮತಿ ನೀಡುವಂತೆ ನಿರ್ಮಾಪಕರುಗಳು ಒತ್ತಾಯ ಸಹ ಹೇರಿದ್ದಾರೆ ಎನ್ನಲಾಗಿದೆ. ಹಾಗಾಗಿ ನಾಳೆಯೇ ಈ ಬಗ್ಗೆ ನಿರ್ಧಾರ ಪ್ರಕಟವಾಗಲಿದೆ.

    ಹಳೆಯ ಎಪಿಸೋಡ್‌ಗಳ ಪ್ರಸಾರ

    ಹಳೆಯ ಎಪಿಸೋಡ್‌ಗಳ ಪ್ರಸಾರ

    ಧಾರಾವಾಹಿ ಚಿತ್ರೀಕರಣ ಸಹ ಬಂದ್ ಆಗಿದ್ದ ಕಾರಣ, ಧಾರಾವಾಹಿಗಳ ಹಳೆಯ ಎಪಿಸೋಡ್‌ಗಳನ್ನೇ ಟಿವಿಗಳು ಪ್ರಸಾರ ಮಾಡುತ್ತಿದ್ದವು. ಚಂದನವು ರಾಮಾಯಣ, ಮಹಾಭಾರತವನ್ನು ಸಹ ಪ್ರಸಾರ ಮಾಡಿತು.

    ನಿರ್ಮಾಪಕರ ಮೇಲೆ ಸಾಲದ ಹೊರೆ

    ನಿರ್ಮಾಪಕರ ಮೇಲೆ ಸಾಲದ ಹೊರೆ

    ಚಿತ್ರೀಕರಣಗಳು ಬಂದ್ ಆಗಿರುವ ಕಾರಣ ನಿರ್ಮಾಪಕರ ಮೇಲೆ ಸಾಲದ ಒತ್ತಡ ಹೆಚ್ಚಾಗುತ್ತಿದೆ. ಸಿನಿಮಾ ನಿರ್ಮಾಣಕ್ಕೆಂದು ತಂದ ಸಾಲದ ಬಡ್ಡಿ ಬೆಳೆಯುತ್ತಲೇ ಇದೆ. ಅಷ್ಟೆ ಅಲ್ಲದೆ, ಸಿನಿಮಾ ಉದ್ಯಮದ ಬೆನ್ನೆಲುಬಾದ ದಿನಗೂಲಿ ನೌಕರರ ಪಾಡು ಸಹ ಹೇಳತೀರದಾಗಿದೆ.

    English summary
    Karnataka government may order to re start filming of serials and movies very soon.
    Monday, May 4, 2020, 21:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X