twitter
    For Quick Alerts
    ALLOW NOTIFICATIONS  
    For Daily Alerts

    ಸರ್ಕಾರದ ಅಚಾನಕ್ ನಿರ್ಧಾರ ಚಿತ್ರರಂಗಕ್ಕೆ ಆಘಾತ: ಸಿನಿಮಾ ಬಿಡುಗಡೆ ಮುಂದೂಡಿಕೆ?

    |

    ರಾಜ್ಯ ಸರ್ಕಾರದ ಅಚಾನಕ್ ನಿರ್ಧಾರದಿಂದ ಚಿತ್ರರಂಗ ಆಘಾತಕ್ಕೆ ಒಳಗಾಗಿದೆ. ಕೊರೊನಾ ಪ್ರಕರಣಗಳು ಹೆಚ್ಚಳವಾಗುತ್ತಿರುವ ಕಾರಣ ಸರ್ಕಾರವು ಹೊರಡಿಸುವ ಹೊಸ ಮಾರ್ಗಸೂಚಿಯಲ್ಲಿ ಚಿತ್ರಮಂದಿರಗಳಲ್ಲಿ 50% ಪ್ರೇಕ್ಷಕರಿಗಷ್ಟೆ ಅವಕಾಶ ನೀಡಬೇಕು ಎಂದು ಆದೇಶಿಸಲಾಗಿದೆ.

    ಬಹುತೇಕ ಒಂದು ವರ್ಷದಿಂದ ಬಾಗಿಲು ಮುಚ್ಚಿದ್ದ ಚಿತ್ರಮಂದಿರಗಳು ಕೆಲ ತಿಂಗಳಿನಿಂದಷ್ಟೆ ಪೂರ್ಣವಾಗಿ ಕಾರ್ಯಾರಂಭ ಮಾಡಿವೆ. ಚಿತ್ರರಂಗ ಮರಳಿ ಹಾದಿಗೆ ಬಂದಿತು ಎಂದುಕೊಳ್ಳುವಷ್ಟರಲ್ಲಿ ಸರ್ಕಾರ ಮತ್ತೆ ಚಿತ್ರಮಂದಿರಗಳ ಮೇಲೆ ನಿರ್ಬಂಧ ಹೇರಿದೆ.

    ಪುನೀತ್ ರಾಜ್‌ಕುಮಾರ್ ನಟನೆಯ 'ಯುವರತ್ನ' ಸಿನಿಮಾ ಬಿಡುಗಡೆ ಆಗಿ ಎರಡು ದಿನವಷ್ಟೆ ಆಗಿದೆ. ಸಿನಿಮಾದ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬರುತ್ತಿದ್ದು, ಉತ್ತಮ ಸಂದೇಶವುಳ್ಳ ಈ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡಲಿದೆ ಎನ್ನಲಾಗುತ್ತಿತ್ತು. ಈ ವಾರಾಂತ್ಯದಲ್ಲಿ ಒಳ್ಳೆಯ ಕಲೆಕ್ಷನ್ ಆಗಬಹುದು, ಕೌಟುಂಬಿಕ ಸಿನಿಮಾವನ್ನು ವಾರಾಂತ್ಯದಲ್ಲಿ ಕುಟುಂಬ ಸಮೇತರಾಗಿ ಬಂದು ಜನ ನೋಡಬಹುದು ಎಂಬ ನಿರೀಕ್ಷೆಯಲ್ಲಿ ಚಿತ್ರತಂಡ ಇರುವಾಗಲೆ ಸರ್ಕಾರ ಬರ ಸಿಡಿಲನ್ನೇ ಸಿಡಿಸಿದೆ.

    Government New Order About Theaters: Sandalwood In Shock

    ಸರ್ಕಾರದ ಈ ಅಚಾನಕ್ ನಿರ್ಧಾರದಿಂದ ಈ ತಿಂಗಳು ಬಿಡುಗಡೆ ಆಗಬೇಕಿದ್ದ ಇನ್ನಿತರ ಸಿನಿಮಾಗಳ ಬಿಡುಗಡೆ ಮುಂದೂಡಲ್ಪಡುವ ಸಾಧ್ಯತೆ ಇದೆ.

    ಈ ತಿಂಗಳಲ್ಲಿ ದುನಿಯಾ ವಿಜಯ್ ನಿರ್ದೇಶಿಸಿ, ನಟಿಸಿರುವ 'ಸಲಗ' ಸಿನಿಮಾ ಬಿಡುಗಡೆ ಆಗುವುದಿತ್ತು ಅದು ಮುಂದಕ್ಕೆ ಹೋಗುವ ಸಾಧ್ಯತೆ ಇದೆ. ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾ ಸಹ ಇದೇ ತಿಂಗಳು ಬಿಡುಗಡೆ ಆಗುವುದರಲ್ಲಿತ್ತು ಅದೂ ಸಹ ಮುಂದೂಡಲ್ಪಡುವ ಸಾಧ್ಯತೆ ಇದೆ.

    ಪ್ರಜ್ವಲ್ ದೇವರಾಜ್ ನಟನೆಯ 'ಅರ್ಜುನ್ ಗೌಡ' ಸಿನಿಮಾ ಸಹ ಇದೇ ತಿಂಗಳು ಬಿಡುಗಡೆ ಆಗಲಿತ್ತು, ಸರ್ಕಾರದ ನಿರ್ಣಯದಿಂದ ಅದೂ ಸಹ ಮುಂದೂಡಲ್ಪಡುವ ಸಾಧ್ಯತೆ ಇದೆ.

    ಚಿತ್ರರಂಗ ಇನ್ನೇನು ಹಳಿಗೆ ಮರಳಿತು ಎನ್ನುವಾಗಲೇ ಸರ್ಕಾರದ ದಿಢೀರ್ ಆದೇಶ ಚಿತ್ರರಂಗವನ್ನು ತೀವ್ರ ಆತಂಕಕ್ಕೆ ತಳ್ಳಿದೆ. ಇಂದು ಮಾಧ್ಯಮಗಳೊಟ್ಟಿಗೆ ಮಾತನಾಡಿದ ಪುನೀತ್ ರಾಜ್‌ಕುಮಾರ್, 'ಸರ್ಕಾರವು ಕೆಲವು ದಿನಗಳ ಹಿಂದಷ್ಟೆ ಟ್ವೀಟ್ ಮಾಡಿ ಚಿತ್ರಮಂದಿರ ಮುಚ್ಚುವುದಿಲ್ಲ ಎಂದಿತ್ತು, ಅದೇ ಹೇಳಿಕೆ ನಂಬಿ ನಾವು ಸಿನಿಮಾ ಬಿಡುಗಡೆ ಮಾಡಿದೆವು ಆದರೆ ಈಗ ಹಠಾತ್ತಾಗಿ ಈ ಆದೇಶ ಹೊರಡಿಸಿದ್ದಾರೆ, ಇದು ಸೂಕ್ತವಾದ ಆದೇಶ ಅಲ್ಲ' ಎಂದಿದ್ದಾರೆ. ಅವರ ಮಾತುಗಳಲ್ಲಿ ತೀವ್ರ ಆತಂಕ ಇದ್ದದ್ದು ಸ್ಪಷ್ಟ.

    Recommended Video

    ಸರ್ಕಾರದ ನಿರ್ಧಾರಕ್ಕೆ ಕಿಚ್ಚ ಸುದೀಪ್ ಹೇಳಿದ್ದೇನು? | Filmibeat Kannada

    'ಈಗಾಗಲೇ ಶನಿವಾರ, ಭಾನುವಾರದ ಶೋಗಳಿಗೆ ಟಿಕೆಟ್ ವಿತರಿಸಿ ಆಗಿದೆ. ಆ ಪ್ರೇಕ್ಷಕರಿಗೆ ಉತ್ತರ ಕೊಡುವುದು ಹೇಗೆ?' ಎಂಬ ಮೌಲಿಕ ಪ್ರಶ್ನೆಯನ್ನೂ ಪುನೀತ್ ರಾಜ್‌ಕುಮಾರ್ ಕೇಳಿದ್ದಾರೆ.

    English summary
    Government impose restriction over theaters. Kannada movies may postpone their release date.
    Saturday, April 3, 2021, 9:00
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X