ಚಿತ್ರೀಕರಣ ಬೇಡ, ಡಬ್ಬಿಂಗ್ ಮಾಡಿಕೊಳ್ಳಿ: ಚಿತ್ರರಂಗಕ್ಕೆ ಸರ್ಕಾರ ಸೂಚನೆ

ಚಿತ್ರೀಕರಣ ಬಂದ್ ಆಗಿ ಒಂದೂವರೆ ತಿಂಗಳಾಯಿತು. ನಿರ್ಮಾಪಕರು, ಚಿತ್ರೀಕರಣ ನಂಬಿಕೊಂಡಿರುವ ಸಣ್ಣ-ಪುಟ್ಟ ಕಲಾವಿದರು, ತಂತ್ರಜ್ಞರು, ದಿನಗೂಲಿ ನೌಕರರು ಆಕಾಶ ನೋಡುವಂತಾಗಿದೆ.

Recommended Video

ನಮ್ಮನ್ನು ರಕ್ಷಿಸುತ್ತಿರುವವರನ್ನು ಗೌರವಿಸೋಣ ಎಂದ ಶಿವಣ್ಣ | Shivanna | Corona Warriors

ಹಾಗಾಗಿ ಚಿತ್ರರಂಗದ ಪ್ರಮುಖರು ನಿನ್ನೆ ಸಿಎಂ ಅವರನ್ನು ಭೇಟಿ ಮಾಡಿ, ಚಿತ್ರೀಕರಣ ಪುನರ್‌ ಆರಂಭಿಸಲು ಅವಕಾಶ ನೀಡುವಂತೆ ಮನವಿ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಕಂದಾಯ ಸಚಿವ ಆರ್.ಅಶೋಕ್, ಚಿತ್ರೀಕರಣ ಮಾಡುವುದು ಬೇಡ, ಬೇಕಾದರೆ ಡಬ್ಬಿಂಗ್ ಮಾಡಿಕೊಳ್ಳಿ' ಎಂದು ಹೇಳಿದ್ದಾರೆ.

ಧಾರಾವಾಹಿ ಚಿತ್ರೀಕರಣಕ್ಕೆ ಅವಕಾಶ ಸಿಕ್ಕ ಬೆನ್ನಲ್ಲೇ ತಮಗೂ ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಸಿನಿಮಾ ಮಂದಿಗೆ ಭಾರಿ ನಿರಾಸೆಯೇ ಆಗಿದೆ.

ಆರ್.ಅಶೋಕ್ ಹೇಳಿದ್ದು ಹಾಗಲ್ಲ

ಆರ್.ಅಶೋಕ್ ಹೇಳಿದ್ದು ಹಾಗಲ್ಲ

ಬೇರೆ ಭಾಷೆಯ ಸಿನಿಮಾಗಳನ್ನು ಕನ್ನಡಕ್ಕೆ ಡಬ್ ಮಾಡಿ ಎಂಬರ್ಥದಲ್ಲಿ ಸಚಿವ ಆರ್.ಅಶೋಕ್ 'ಡಬ್ಬಿಂಗ್ ಮಾಡಿಕೊಳ್ಳಿ' ಎಂದು ಹೇಳಿಲ್ಲ. ಬದಲಿಗೆ ಚಿತ್ರೀಕರಣ ಆಗಿರುವ ಸಿನಿಮಾಗಳ ಡಬ್ಬಿಂಗ್ ಅಥವಾ ಮಾತಿನ ಭಾಗ ಸೇರಿಸುವ ಕಾರ್ಯ ಮಾಡಿಕೊಳ್ಳಿ ಎಂದು.

ಎಡಿಟಿಂಗ್-ಡಬ್ಬಿಂಗ್ ಮಾಡಿಕೊಳ್ಳಬಹುದು

ಎಡಿಟಿಂಗ್-ಡಬ್ಬಿಂಗ್ ಮಾಡಿಕೊಳ್ಳಬಹುದು

ಚಿತ್ರೀಕರಣ ಬಿಟ್ಟು ಇತರೆ ತಾಂತ್ರಿಕ ಕಾರ್ಯಗಳಾದ ಎಡಿಟಿಂಗ್, ಡಬ್ಬಿಂಗ್ ಬೇಕಾದರೆ ಮಾಡಿಕೊಳ್ಳಿ, ಅದನ್ನೂ ಸಹ ಕೇವಲ 5-6 ಮಂದಿ ಮಾತ್ರ ಇರುವಂತೆ ನೋಡಿಕೊಳ್ಳಿ, ಸೀಮಿತ ಜನರನ್ನು ಮಾತ್ರವೇ ಬಳಸಿ ಕೆಲಸ ಮಾಡಿ ಎಂದು ಆರ್.ಅಶೋಕ್ ಚಿತ್ರರಂಗಕ್ಕೆ ನಿರ್ದೇಶನ ನೀಡಿದ್ದಾರೆ.

ಮನವಿ ಸಲ್ಲಿಸಿದ್ದ ಚಿತ್ರ ನಿರ್ಮಾಪಕರು

ಮನವಿ ಸಲ್ಲಿಸಿದ್ದ ಚಿತ್ರ ನಿರ್ಮಾಪಕರು

ನಿನ್ನೆ ಚಲನಚಿತ್ರಗಳ ನಿರ್ಮಾಪಕರು ಸಿಎಂ ಅವರನ್ನು ಭೇಟಿ ಮಾಡಿ, ಚಿತ್ರರಂಗದ ಸಂಕಷ್ಟಗಳು, ಚಿತ್ರರಂಗದ ದಿನಗೂಲಿ ನೌಕರರು, ಸಿನಿಮಾ ಕಾರ್ಮಿಕರ ಸಂಕಷ್ಟಗಳು, ನಿರ್ಮಾಪಕರ ಸಂಕಷ್ಟಗಳನ್ನು ವಿವರಿಸಿ ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ಕೇಳಿದ್ದರು.

ಧಾರಾವಾಹಿಗಳಿಗೆ ಸರ್ಕಾರ ಅನುಮತಿ ನೀಡಿದೆ

ಧಾರಾವಾಹಿಗಳಿಗೆ ಸರ್ಕಾರ ಅನುಮತಿ ನೀಡಿದೆ

ಧಾರಾವಾಹಿ ಚಿತ್ರೀಕರಣ ಮಾಡಲು ಕೆಲವು ದಿನಗಳ ಹಿಂದಷ್ಟೆ ಸರ್ಕಾರ ಅನುಮತಿ ನೀಡಿದೆ. ಸೀಮಿತ ಜನರನ್ನು ಬಳಸಿಕೊಂಡು ಮೇ 21 ರಿಂದ ಧಾರಾವಾಹಿ ಚಿತ್ರೀಕರಣ ಪ್ರಾರಂಭ ಮಾಡಲಿವೆ. ಒಳಾಂಗಣದಲ್ಲಿ ಮಾತ್ರವೇ ಚಿತ್ರೀಕರಣ ಮಾಡುವಂತೆ ಷರತ್ತು ವಿಧಿಸಲಾಗಿದೆ. ಆದರೆ ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ನೀಡಿಲ್ಲ.

More from Filmibeat

English summary
Karnataka government refuses to give permission for filming movies. Minister R Ashok said we will not give permission.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X