ಸಿನಿಮಾ ಚಿತ್ರೀಕರಣ ಪುನರ್ ಪ್ರಾರಂಭಕ್ಕೆ ಕೇಂದ್ರದಿಂದ ನಿಯಮಾವಳಿ
ಕೊರೊನಾ ಕಾರಣಕ್ಕೆ ಸ್ಥಬ್ಧವಾಗಿರುವ ಚಿತ್ರೋದ್ಯಮಕ್ಕೆ ತುಸು ಚಲನೆ ನೀಡುವ ದೃಷ್ಟಿಯಿಂದ ಕೇಂದ್ರವು ಸಿನಿಮಾ ಚಿತ್ರೀಕರಣ ಪುನರ್ ಪ್ರಾರಂಭಕ್ಕೆ ಕಾರ್ಯಚರಣಾ ವಿಧಾನವನ್ನು ಬಿಡುಗಡೆ ಮಾಡಲಿದೆ. ನಿಂತು ಹೋಗಿರುವ ಚಿತ್ರೀಕರಣವನ್ನು ಪುನಃ ಪ್ರಾರಂಭಿಸಲು ನಿಯಮಗಳನ್ನು ಕೇಂದ್ರ ಬಿಡುಗಡೆ ಮಾಡಲಿದ್ದು, ಆ ನಿಯಮಗಳ ಅಡಿಯಲ್ಲಿಯೇ ಚಿತ್ರೀಕರಣ ಪುನರ್ ಪ್ರಾರಂಭ ಮಾಡಬೇಕಿದೆ.
Recommended Video
ಇಂದು ಮಾತನಾಡಿರುವ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಪ್ರಕಾಶ್ ಜಾವಡೇಕರ್, 'ಭಾರತದಲ್ಲಿ ಕೊರೊನಾ ಸಮಯದಲ್ಲಿ ಚಿತ್ರೀಕರಣ ಮಾಡಲು ಕಾರ್ಯನಿರ್ವಹಣಾ ನಿಯಮಾವಳಿಗಳನ್ನು ರೂಪಿಸುತ್ತಿದೆ' ಎಂದು ಹೇಳಿದ್ದಾರೆ. ಈಗ ಸ್ಥಗಿತಗೊಂಡಿರುವ ಸಿನಿಮಾ ಚಟುವಟಿಕೆಗಳನ್ನು ಪುನರ್ ಪ್ರಾರಂಭ ಮಾಡಲು ಕೆಲವು ನಿಯಮಾವಳಿಗಳನ್ನು ತಜ್ಞರು ರೂಪಿಸುತ್ತಿದ್ದಾರೆ ಅದರ ಅಡಿಯಲ್ಲಿಯೇ ಚಿತ್ರೀಕರಣ ನಡೆಯಬೇಕಿದೆ ಎಂದು ಜಾವಡೇಕರ್ ಹೇಳಿದ್ದಾರೆ.

ಸಿನಿಮಾ ಮಾತ್ರವಲ್ಲದೆ, ಧಾರಾವಾಹಿಗಳು, ಸಿನಿಮಾಗಳ ಪ್ರೀ ಪ್ರೊಡಕ್ಷನ್, ಅನಿಮೇಶನ್ ಸಿನಿಮಾಗಳು, ಗೇಮಿಂಗ್ ಎಲ್ಲದಕ್ಕೂ ಸಂದರ್ಭಕ್ಕೆ ಅನುಗುಣವಾದ ನಿಯಮಗಳ ರಚನೆ ಆಗುತ್ತಿದೆ ಎಂದು ಸಚಿವರು ಹೇಳಿದ್ದಾರೆ.


Click it and Unblock the Notifications











