ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ ಅವಧಿ ವಿಸ್ತರಣೆ

By Rajendra

ತಾಂತ್ರಿಕ ಶಿಕ್ಷಣ ಇಲಾಖೆಯ ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯ ವತಿಯಿಂದ 2014-15 ನೇ ಸಾಲಿನ ಡಿಪ್ಲ್ಲೊಮಾ ಸಿನೆಮಾಟೊಗ್ರಫಿ ಮತ್ತು ಸೌಂಡ್ ರೆಕಾರ್ಡಿಂಗ್ ಅಂಡ್ ಇಂಜಿನಿಯರಿಂಗ್ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ಅರ್ಜಿಗಳನ್ನು ನೀಡುವ ಮತ್ತು ಸ್ವೀಕರಿಸುವ ದಿನಾಂಕವನ್ನು ವಿಸ್ತರಿಸಲಾಗಿದೆ.

ಸರ್ಕಾರಿ ಆದೇಶದ ಪ್ರಕಾರ ಹೊರ ರಾಜ್ಯದ ಅಭ್ಯರ್ಥಿಗಳಿಗೆ ಶೇಕಡಾ 5೦ ರಷ್ಟು ಪ್ರವೇಶಾವಕಾಶ ಕಲ್ಪಿಸಲಾಗಿದೆ. ಅಭ್ಯರ್ಥಿಗಳು ಕರ್ನಾಟಕ ದ್ವಿತೀಯ ಪಿ.ಯು.ಸಿ. ವಿಜ್ಞಾನ (ಪಿ.ಸಿ.ಎಂ. ವಿಷಯಗಳಲ್ಲಿ) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಹಾಗೂ ಹೊರ ರಾಜ್ಯಗಳ ಅಭ್ಯರ್ಥಿಗಳು 10 + 2 (ಪಿ.ಸಿ.ಎಂ. ವಿಷಯಗಳಲ್ಲಿ) ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ ಒಟ್ಟಾರೆಯಾಗಿ ಕನಿಷ್ಠ ಶೇಕಡಾ 35 ರಷ್ಟು ಅಂಕಗಳನ್ನು ಪಡೆದು ತೇರ್ಗಡೆಯಾಗಿರಬೇಕು.

Govt.Film and Television Institute
ಅರ್ಜಿಗಳನ್ನು ಪ್ರಾಂಶುಪಾಲರ ಕಚೇರಿ, ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ, ಹೆಸರಘಟ್ಟ ಅಂಚೆ, ಬೆಂಗಳೂರು - 88, ಇಲ್ಲಿಂದ ರೂ 3೦೦/- (ಎಸ್‌ಸಿ/ಎಸ್‌ಟಿ ಮತ್ತು ಪ್ರವರ್ಗ -1 ರ ಅಭ್ಯರ್ಥಿಗಳು ರೂ. 25೦/-) ಗಳನ್ನು ಪಾವತಿಸಿ ಖುದ್ದಾಗಿ ಪಡೆಯಬಹುದು.

ಅರ್ಜಿಗಳನ್ನು ನೀಡುವ ಹಾಗೂ ಭರ್ತಿಮಾಡಿದ ಅರ್ಜಿಗಳನ್ನು ಸ್ವೀಕರಿಸುವ ಕೊನೆಯ ದಿನಾಂಕವನ್ನು ಜುಲೈ 18 ರವರೆಗೆ ವಿಸ್ತರಿಸಲಾಗಿದೆ. ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ 080 - 28466768, 28446672 website : www.filminstitutebangalore.com ಸಂಪರ್ಕಿಸಬಹುದಾಗಿದೆ. (ಒನ್ಇಂಡಿಯಾ ಕನ್ನಡ)

More from Filmibeat

English summary
The last date for submission of Application Form to various Diploma Courses in Govt. Film and Television Institute has been extended till 18th July 2014. Applications will be issued from 16th May 2013 at Govt. Film and Television Institute, Hesaraghatta, Bangalore-88. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X