»   » ಹುಚ್ಚ ವೆಂಕಟ್ ಚಿತ್ರಕ್ಕೆ 'ಬಿಗ್ ಬಾಸ್' ಗೌತಮಿ ಹೀರೋಯಿನ್!

ಹುಚ್ಚ ವೆಂಕಟ್ ಚಿತ್ರಕ್ಕೆ 'ಬಿಗ್ ಬಾಸ್' ಗೌತಮಿ ಹೀರೋಯಿನ್!

Posted By:
Subscribe to Filmibeat Kannada

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಿ.ವಿಜಯ್ ಕುಮಾರ್, ಯೂಟ್ಯೂಬ್ ಸ್ಟಾರ್ ಹುಚ್ಚ ವೆಂಕಟ್ ಗಾಗಿ ಒಂದು ಸಿನಿಮಾ ನಿರ್ಮಾಣ ಮಾಡ್ತಿದ್ದಾರೆ ಅಂತ ನಾವೇ ನಿಮಗೆ ಹೇಳಿದ್ವಿ.

ಆ ಚಿತ್ರಕ್ಕೆ 'ಡಿಕ್ಟೇಟರ್' ಅಂತ ಶೀರ್ಷಿಕೆ ಇಡಲಾಗಿದ್ದು, 'ಕಲಾಸಾಮ್ರಾಟ್' ಎಸ್.ನಾರಾಯಣ್ ನಿರ್ದೇಶನ ಮಾಡಲಿದ್ದಾರೆ ಎನ್ನುವ ಸುದ್ದಿ ನಿಮಗೂ ಗೊತ್ತಿದೆ. ['ಡಿಕ್ಟೇಟರ್' ಆದ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್]

huccha-venkat

ಈಗ 'ಡಿಕ್ಟೇಟರ್' ಅಡ್ಡದಿಂದ ಬಂದಿರುವ ಖಾಸ್ ಖಬರ್ ಪ್ರಕಾರ, ಚಿತ್ರದಲ್ಲಿ ಹುಚ್ಚ ವೆಂಕಟ್ ಜೊತೆ ಡ್ಯುಯೆಟ್ ಹಾಡುವುದು 'ಬಿಗ್ ಬಾಸ್' ಖ್ಯಾತಿಯ ನಟಿ ಗೌತಮಿ ಗೌಡ. [ವೆಂಕಟ್ 'ಡಿಕ್ಟೇಟರ್'ಗೆ ಎಸ್.ನಾರಾಯಣ್ ಆಕ್ಷನ್-ಕಟ್]

ಈ ಹಿಂದೆ 'ಚಿ.ಸೌ.ಸಾವಿತ್ರಿ' ಧಾರಾವಾಹಿಯಲ್ಲಿ ನಟಿಸಿದ್ದ ಗೌತಮಿ ಗೌಡ, 'ಮುತ್ತಿನ ಪಲ್ಲಕ್ಕಿ' ಚಿತ್ರದಲ್ಲೂ ಅಭಿನಯಿಸಿದ್ದಾರೆ. ಈಗ ಹುಚ್ಚ ವೆಂಕಟ್ ನಾಯಕನಾಗಿರುವ ಚಿತ್ರದಲ್ಲಿ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಫೆಬ್ರವರಿ 24 ರಂದು, 'ಡಿಕ್ಟೇಟರ್' ಮುಹೂರ್ತ ನಡೆಯಲಿದೆ.

English summary
Kannada Actress Gowthami Gowda is selected to play lead opposite YouTube Star Huccha Venkat in 'Dictator', which is produced by B.Vijay Kumar, Ex President of KFCC and directed by S.Narayan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada