ವಿನಯ್ ರಾಜ್ ಕುಮಾರ್ ಗಾಗಿ ಗಾಜನೂರಿಗೆ ಬಂದ ಐಯ್ಯರ್ ಬೆಡಗಿ !
Recommended Video

ವಿನಯ್ ರಾಜ್ ಕುಮಾರ್ ಸದ್ಯ ಬೆಂಗಳೂರಿಗೆ ಬಾಯ್ ಹೇಳಿ ಗಾಜನೂರು ಸೇರಿಕೊಂಡಿದ್ದಾರೆ. ಕೇವಲ ವಿನಯ್ ಮಾತ್ರವಲ್ಲದೆ ರಾಘವೇಂದ್ರ ರಾಜ್ ಕುಮಾರ್ ಹಾಗೂ ಮಂಗಳ ರಾಘವೇಂದ್ರ ಕೂಡ ಒಂದು ವಾರದಿಂದ ಗಾಜನೂರಿನಲ್ಲಿ ಬೀಡು ಬಿಟ್ಟಿದ್ದಾರೆ.
ರಾಘವೇಂದ್ರ ರಾಜ್ ಕುಮಾರ್ ಫ್ಯಾಮಿಲಿ ಬೆಂಗಳೂರು ಬಿಟ್ಟು ಗಾಜನೂರು ಸೇರಿದ್ಯಾಕೆ ಅಂತ ಯೋಚನೆ ಮಾಡಬೇಡಿ. ವಿನಯ್ ರಾಜ್ ಕುಮಾರ್ ಅಭಿನಯದ 'ಗ್ರಾಮಾಯಣ' ಸಿನಿಮಾದ ಚಿತ್ರೀಕರಣಕ್ಕಾಗಿ ಇಡೀ ಕುಟುಂಬ ಗಾಜನೂರಿನಲ್ಲಿ ಉಳಿದುಕೊಂಡಿದೆ.

ಇನ್ನು ಗ್ರಾಮಾಯಣ ಸಿನಿಮಾಗೆ ನಾಯಕಿಯಾಗಿ ಅಮೃತ ಐಯ್ಯರ್ ಎನ್ನುವ ನಾಯಕಿ ಆಯ್ಕೆ ಆಗಿದ್ದಾರೆ. ಅಮೃತ ಐಯ್ಯರ್ ಈಗಾಗಲೇ ತಮಿಳಿನ ಚಿತ್ರದಲ್ಲಿ ಅಭಿನಯ ಮಾಡಿದ್ದು 'ಗ್ರಾಮಾಯಣ'ದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಡುತ್ತಿದ್ದಾರೆ.

ಸದ್ಯ ಗಾಜನೂರಿನಲ್ಲಿ ಚಿತ್ರದ ಟೀಸರ್ ಚಿತ್ರೀಕರಣ ಮಾಡಿ ಮುಗಿಸಿದ್ದು ಚಿತ್ರಕ್ಕೆ ದೇವನೂರು ಚಂದ್ರು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಎನ್ ಆರ್ ಮೂರ್ತಿ ಗ್ರಾಮಾಯಣ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ವಿನಯ್ ರಾಜ್ ಕುಮಾರ್ ಲುಕ್ ರಿವಿಲ್ ಮಾಡದ ಚಿತ್ರತಂಡ ವರಮಹಾಲಕ್ಷ್ಮಿ ಹಬ್ಬಕ್ಕೆ ಚಿತ್ರದ ಟೀಸರ್ ರಿಲೀಸ್ ಮಾಡಲಿದೆ.


Click it and Unblock the Notifications











