ಅದ್ಧೂರಿ ಸೆಟ್.. 1000 ಮಂದಿ ಡ್ಯಾನ್ಸರ್ಸ್; 'ಕೆಡಿ' ಚಿತ್ರದ 'ಶಿವ- ಶಿವ' ಸಾಂಗ್ ಮೇಕಿಂಗ್ ಹೇಗಿತ್ತು?- ವಿಡಿಯೋ

ಜೋಗಿ ಪ್ರೇಮ್ ನಿರ್ದೇಶನದಲ್ಲಿ ಧ್ರುವ ಸರ್ಜಾ ನಟನೆಯ 'ಕೆಡಿ' ಸಿನಿಮಾ ನಾನಾ ಕಾರಣಗಳಿಂದ ಸುದ್ದಿ ಆಗ್ತಿದೆ. ಇತ್ತೀಚೆಗೆ ಚಿತ್ರದ ಸ್ಪೆಷಲ್ ಸಾಂಗ್ ವಿವಾದಕ್ಕೀಡಾಗಿತ್ತು. ಬಳಿಕ ಎಲ್ಲದಕ್ಕೂ ತೆರೆ ಬಿದ್ದಿತ್ತು. ಇದೀಗ ಸಿನಿಮಾ ಪ್ರಮೋಷನ್ ಆರಂಭಿಸಿದೆ ಚಿತ್ರತಂಡ. ಚಿತ್ರದ 'ಶಿವನೇ ನಿನ್ನಾಟ ಬಲ್ಲವರು ಯಾರ್ಯಾರೊ' ಸಾಂಗ್ ಮೇಕಿಂಗ್ ಝಲಕ್ ರಿಲೀಸ್ ಆಗಿದೆ.

ಭಜರಂಗಿ ಮೋಹನ್ ಕೊರಿಯೋಗ್ರಫಿಯಲ್ಲಿ ಬಹಳ ಅದ್ಧೂರಿಯಾಗಿ ಈ ಸಾಂಗ್ ಚಿತ್ರೀಕರಣ ನಡೆದಿದೆ. ಬರೋಬ್ಬರಿ 1000 ಮಂದಿ ಡ್ಯಾನ್ಸರ್ಸ್ ಬಳಸಿಕೊಂಡು ಡ್ಯಾನ್ಸ್ ಕಂಪೋಸ್ ಮಾಡಿದ್ದಾರೆ. ಅರ್ಜುನ್ ಜನ್ಯಾ ಸಂಗೀತದಲ್ಲಿ ಚಿತ್ರದ ಲಿರಿಕಲ್ ಸಾಂಗ್ ಈಗಾಗಲೇ ಹಿಟ್ ಆಗಿದೆ. ಅದರ ಮೇಕಿಂಗ್ ಹೇಗಿತ್ತು ಎನ್ನುವುದು ಈಗ ರಿವೀಲ್ ಆಗಿದೆ. ಧ್ರುವ ಸರ್ಜಾ ಜೊತೆ ನಾಯಕಿ ರೀಷ್ಮಾ ನಾಣಯ್ಯ ಸಹ ಬಿಂದಾಸ್ ಆಗಿ ಹೆಜ್ಜೆ ಹಾಕಿ ರಂಗೇರಿಸಿದ್ದಾರೆ.

Grand 1000-Dancer Spectacle Prem and Dhruva s KD film Shiva Song Making Stuns Fans

ಪ್ರೇಮ್ ಹಾಗೂ ಮಂಜುನಾಥ್ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಪ್ರೇಮ್ ಜೊತೆ ಸೇರಿ ಕೈಲಾಶ್ ಖೇರ್ ಹಾಡು ಹಾಡಿದ್ದಾರೆ. ಲಿರಿಕಲ್ ವೀಡಿಯೊ ಸಾಂಗ್ ಬಂದಾಗಲೇ "ದೌಲತ್ತಲ್ ಮೆರದೋರೆಲ್ಲ ಹಿಸ್ಟರಿ ಲಿ ಉಳಿದೆಯಿಲ್ಲ.. ಕಾಲೇಳೆಯೋಕ್ ಬಂದೋರೆಲ್ಲ ಕಾಲ ಕೆಳ್ಗೆ ಉಳ್ದೊದ್ರಲ್ಲ.. ಬಕೇಟಾ ಹಿಡಿಯೋರ್ನೆಲ್ಲ ಸೈಡಿಟ್ಟು ಹೋಯ್ತಯೀರ್ಲಾ" .. ಎನ್ನುವ ಸಾಲುಗಳು ಗಮನ ಸೆಳೆದಿತ್ತು. ಸಿಗ್ನೇಚರ್ ಸ್ಟೆಪ್ ನೋಡೊಕೆ ಕಷ್ಟ ಅನ್ನಿಸ್ತು.. ಆದರೆ ಬಳಿಕ ಬಹಳ ಸುಲಭವಾಗಿ ಮಾಡಿಬಿಟ್ಟೆ ಎಂದು ಧ್ರುವ ಹೇಳಿದ್ದಾರೆ.

ಧ್ರುವ ಒಳ್ಳೆ ಡ್ಯಾನ್ಸರ್.. ಅವರೊಟ್ಟಿಗೆ ಡ್ಯಾನ್ಸ್ ಮಾಡುವುದು ಬಹಳ ಖುಷಿಯಾಯಿತು ಎಂದು ನಾಯಕಿ ರೀಷ್ಮಾ ಹೇಳಿದ್ದಾರೆ. 1000 ಜನ ಡ್ಯಾನ್ಸರ್ಸ್ ಜೊತೆ ಕೊರಿಯೋಗ್ರಫಿ ಮಾಡಲು ಅವಕಾಶ ಮಾಡಿಕೊಟ್ಟ ತಂಡಕ್ಕೆ ಭಜರಂಗಿ ಮೋಹನ್ ಧನ್ಯವಾದ ತಿಳಿಸಿದ್ದಾರೆ. ಮೇಕಿಂಗ್ ಝಲಕ್ ಇಷ್ಟು ಅದ್ಭುತವಾಗಿದ್ರೆ, ತೆರೆಮೇಲೆ ಕಂಪ್ಲೀಟ್ ಸಾಂಗ್ ನೋಡಲು ಮತ್ತಷ್ಟು ಕಿಕ್ ಕೊಡುವುದು ಗ್ಯಾರಂಟಿ.

ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ 'ಕೆಡಿ' ಸಿನಿಮಾ ನಿರ್ಮಾಣ ಮಾಡಿದೆ. ಅರ್ಜುನ್ ಜನ್ಯಾ ಸಂಗೀತದಲ್ಲಿ ಚಿತ್ರದ ಹಾಡುಗಳು ಹಿಟ್ ಆಗಿದೆ. 4 ವರ್ಷಗಳ ಹಿಂದೆ ಶುರುವಾಗಿದ್ದ ಸಿನಿಮಾ ಅಂತೂ ಇಂತೂ ಏಪ್ರಿಲ್ 30ಕ್ಕೆ ತೆರೆಗೆ ಬರ್ತಿದೆ. ಐಪಿಎಲ್ ಆರ್ಭಟದ ನಡುವೆಯೂ ಸಿನಿಮಾ ಬಿಡುಗಡೆ ಮಾಡುವ ಧೈರ್ಯ ಮಾಡಿದೆ ಚಿತ್ರತಂಡ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

ನಿರ್ಮಾಪಕ ವೆಂಕಟ್ ಕೊನಂಕಿ ಕೂಡ ಸೆಟ್‌ಗೆ ಭೇಟಿ ನೀಡಿ ಸಿನಿಮಾ ಮೇಕಿಂಗ್ ಬಗ್ಗೆ ಗಮನ ಹರಿಸಿದ್ದಾರೆ. ಕೆವಿಎನ್ ಸಂಸ್ಥೆ ನಿರ್ಮಾಣದ 'ಟಾಕ್ಸಿಕ್' ಹಾಗೂ 'ಜನ ನಾಯಗನ್' ಸಿನಿಮಾಗಳ ಬಿಡುಗಡೆ ಪದೇ ಪದೆ ಮುಂದಕ್ಕೆ ಹೋಗ್ತಿದೆ. ಹಾಗಾಗಿ ಸದ್ಯಕ್ಕೆ 'ಕೆಡಿ' ಚಿತ್ರವನ್ನೇ ನಿರ್ಮಾಪಕರು ನೆಚ್ಚಿಕೊಳ್ಳುವಂತಾಗಿದೆ. ಅಂದಾಜು 100 ಕೋಟಿ ರೂ. ಬಜೆಟ್‌ನಲ್ಲಿ ಆಕ್ಷನ್ ಥ್ರಿಲ್ಲರ್ ಸಿನಿಮಾ ನಿರ್ಮಾಣವಾಗಿದೆ. ಬಾಲಿವುಡ್ ನಟ ಸಂಜಯ್ ದತ್ ಹಾಗೂ ನಟಿ ಶಿಲ್ಪಾ ಶೆಟ್ಟಿ ಕೂಡ ಚಿತ್ರದ ತಾರಾಗಣದಲ್ಲಿದ್ದಾರೆ. ರವಿಚಂದ್ರನ್ ಹಾಗೂ ರಮೇಶ್ ಅರವಿಂದ್ ಕೂಡ ನಟಿಸಿರುವುದು ನಿರೀಕ್ಷೆ ಹೆಚ್ಚಿಸಿದೆ.

ಕಳೆದ ವರ್ಷವೇ 'ಕೆಡಿ' ಸಿನಿಮಾ ರಿಲೀಸ್ ಪ್ರಯತ್ನ ನಡೆದಿತ್ತು. ಆದರೆ ಸಾಧ್ಯವಾಗಿರಲಿಲ್ಲ. ಪ್ರೇಮ್ ಹಾಗೂ ಧ್ರುವ ಇಬ್ಬರಿಗೂ ದೊಡ್ಡ ಬ್ರೇಕ್ ಬೇಕಿದೆ. ಹಾಗಾಗಿ ದೊಡ್ಡಮಟ್ಟದಲ್ಲಿ ಸಿನಿಮಾ ಪ್ರಮೋಷನ್ ಮಾಡಿ ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ನಡೀತಿದೆ. ಈವರೆಗೆ ಲಿರಿಕಲ್ ವೀಡಿಯೋ ಸಾಂಗ್ಸ್ ಹಾಗೂ ಎರಡು ಟೀಸರ್ ಮಾತ್ರ ಬಂದಿದೆ. ಶೀಘ್ರದಲ್ಲೇ ಟ್ರೈಲರ್ ರಿಲೀಸ್ ಮಾಡಲು ತಯಾರಿ ನಡೀತಿದೆ. ಚಿತ್ರದಲ್ಲಿ 70ರ ದಶಕದ ಕತೆಯನ್ನು ಹೇಳುತ್ತಿದ್ದಾರೆ.

More from Filmibeat

Read more about: prem kd dhruva sarja
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X