For Quick Alerts
  ALLOW NOTIFICATIONS  
  For Daily Alerts

  ಯಶ್ ಚಿತ್ರಕ್ಕಾಗಿ ಸಿದ್ದವಾಯ್ತು '80' ರ ದಶಕದ ಸೆಟ್

  By Pavithra
  |
  ಯಶ್ ಚಿತ್ರಕ್ಕಾಗಿ ಸಿದ್ದವಾಯ್ತು '80' ರ ದಶಕದ ಸೆಟ್ | Filmibeat Kannada

  ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆ ಜಿ ಎಫ್' ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ಸಿನಿಮಾತಂಡ ಎಲ್ಲಾ ಕೆಲಸಗಳನ್ನ ಬದಿಗಿಟ್ಟು ಚಿತ್ರದ ಕೊನೆಯ ಹಂತದ ಶೂಟಿಂಗ್ ನಲ್ಲಿ ಬ್ಯುಸಿ ಆಗಿದೆ. ಬೆಂಗಳೂರಿನ ಮಿನರ್ವಾ ಮಿಲ್ ನಲ್ಲಿ ಚಿತ್ರಕ್ಕಾಗಿ ಅದ್ಧೂರಿ ಸೆಟ್ ರೆಡಿಯಾಗಿದ್ದು ಯಶ್ ಅವರ ಇಂಟ್ರಡಕ್ಷನ್ ಸಾಂಗ್ ಶೂಟ್ ಆಗುತ್ತಿದೆ.

  ಕಳೆದ ತಿಂಗಳಲ್ಲಿ 'ಕೆ ಜಿ ಎಫ್' ಚಿತ್ರದ ಸಾಹಸ ದೃಶ್ಯಗಳನ್ನ ಶೂಟ್ ಮಾಡುವಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಬ್ಯುಸಿ ಆಗಿದ್ದರು. ಏರ್ಪಿಲ್ ನಲ್ಲಿ ಸಿನಿಮಾ ತೆರೆಗೆ ಬರುತ್ತೆ ಎಂದು ಸುದ್ದಿಗಳು ಹರಿದಾಡಿತ್ತು. ವರ್ಷಗಳಿಂದ ಅಭಿಮಾನಿಗಳು ಕಾತುರದಿಂದ ಕಾದಿರುವ ಕಾರಣ ಸಿನಿಮಾ ಟೀಂ ಆದಷ್ಟು ಬೇಗ ಚಿತ್ರೀಕರಣ ಮುಗಿಸಲು ಹಗಲು ರಾತ್ರಿ ಶ್ರಮ ಪಡುತ್ತಿದೆ.

  ತಮಿಳು ನಟ ಆರ್ಯ ಪಾಲಿಗೆ ಯಶ್ 'ಸ್ಟೈಲ್ ಐಕಾನ್'!ತಮಿಳು ನಟ ಆರ್ಯ ಪಾಲಿಗೆ ಯಶ್ 'ಸ್ಟೈಲ್ ಐಕಾನ್'!

  ರಾಕಿಂಗ್ ಸ್ಟಾರ್ ಸಿನಿಮಾಗಳಲ್ಲಿ ಹಾಡುಗಳಿಗೆ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಅದೇ ರೀತಿಯಲ್ಲಿ ಕೆ ಜಿ ಎಫ್ ಚಿತ್ರದ ಹಾಡಿನ ಚಿತ್ರೀಕರಣಕ್ಕೆ ಸ್ಪೆಷಲ್ ಆಗಿರುವ ಸೆಟ್ ಹಾಕಲಾಗಿದೆ. ಸೆಟ್ ಫೋಟೋವನ್ನು ನಿರ್ಮಾಪಕ ಕಾರ್ತಿಕ್ ಗೌಡ ಹಾಗೂ ಕ್ಯಾಮೆರಾ ಮ್ಯಾನ್ ಭುವನ್ ಗೌಡ ಸಾಮಾಜಿಕ ಜಾತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.

  ಸಿನಿಮಾ ನೋಡಲು ಕಾತುರರಾಗಿರುವ ಅಭಿಮಾನಿಗಳು ಫೋಟೋ ನೋಡಿದ ತಕ್ಷಣ ಸಿನಿಮಾ ಯಾವಾಗ ಬಿಡುಗಡೆ ಮಾಡುತ್ತೀರಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಒಟ್ಟಾರೆ ಆದಷ್ಟು ಬೇಗ ಚಿತ್ರ ತೆರೆ ಮೇಲೆ ಬಂದರೆ ಸಾಕು ಎನ್ನುತ್ತಿದ್ದಾರೆ ವಿತರಕರು ಹಾಗೂ ಥಿಯೇಟರ್ ಮಾಲೀಕರು.

  ಈ ಬಾರಿಯಾದ್ರೂ ಸೃಜನ್ ಮನೆ ಹೊಸಿಲು ತುಳಿಯುತ್ತಾರಾ 3 ಬಿಗ್ ಸ್ಟಾರ್ ಗಳು ? Rಈ ಬಾರಿಯಾದ್ರೂ ಸೃಜನ್ ಮನೆ ಹೊಸಿಲು ತುಳಿಯುತ್ತಾರಾ 3 ಬಿಗ್ ಸ್ಟಾರ್ ಗಳು ? R

  English summary
  A grand set up of 80s has been Minerva Mill for shooting of KGF film Yash's introduction song is about to begin. Yash, Srinidhi Shetty acted in the film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X