ಸಿನಿ ರಸಿಕರಿಗೆ ಗುಡ್ ನ್ಯೂಸ್; ಸಿನಿಮಾಗಳಲ್ಲಿ ಕೊಳ್ಳುವ ತಿನಿಸು, ಪಾನೀಯಗಳ ಮೇಲಿನ ಜಿಎಸ್‌ಟಿಯಲ್ಲಿ ಇಳಿಕೆ!

ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸುವವರ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ ಎಂಬ ಬೇಸರದ ಸಂಗತಿ ತಿಳಿದಿರುವುದೇ. ಅದರಲ್ಲಿಯೂ ಓಟಿಟಿ ಯುಗ ಆರಂಭವಾದ ನಂತರವಂತೂ ಚಿತ್ರಮಂದಿರಗಳಿಗೆ ಜನರು ಭೇಟಿ ನೀಡುವುದನ್ನು ಬಹುತೇಕ ಕಡಿಮೆ ಮಾಡಿಬಿಟ್ಟರು.

ಕುಟುಂಬವೊಂದು ಚಿತ್ರಮಂದಿರಕ್ಕೆ ತೆರಳಿ ಸಿನಿಮಾವೊಂದನ್ನು ವೀಕ್ಷಿಸಿದರೆ ಸಾವಿರಾರು ರೂಪಾಯಿ ಪರ್ಸಿನಿಂದ ಖಾಲಿಯಾಗುವದಂತೂ ಪಕ್ಕಾ. ಇನ್ನು ಅಲ್ಲಿನ ಫುಡ್ ಅಂಡ್ ಬೆವರೇಜಸ್ ಬೆಲೆಯಂತೂ ಟಿಕೆಟ್‌ಗಿಂತ ದುಬಾರಿ. ಓಟಿಟಿಯಲ್ಲಿ ಸಿನಿಮಾಗಳು ತೆರೆಕಂಡ ಕೆಲವೇ ದಿನಗಳಲ್ಲಿ ಸ್ಟ್ರೀಮ್ ಆಗಲು ಆರಂಭಿಸಿದ ನಂತರ ಚಿತ್ರಮಂದಿರಗಳಿಗೆ ಬರುತ್ತಿದ್ದ ಹಲವಾರು ಸಿನಿ ರಸಿಕರು ಚಿತ್ರಮಂದಿರಕ್ಕೆ ಬರುವುದನ್ನು ನಿಲ್ಲಿಸಲು ಈ ಟಿಕೆಟ್ ಹಾಗೂ ಪಾಪ್‌ಕಾರ್ನ್ ಮತ್ತು ಕೂಲ್‌ ಡ್ರಿಂಕ್ಸ್ ಬೆಲೆ ದುಬಾರಿ ಎಂಬ ಕಾರಣದಿಂದಲೇ.

food-and-beverages

ಹೌದು, ಕುಟುಂಬವೊಂದರ ಸಿನಿಮಾ ಟಿಕೆಟ್, ಅಲ್ಲಿನ ತಿನಿಸುಗಳ ದರವನ್ನೆಲ್ಲಾ ಸೇರಿಸಿದರೆ ಓಟಿಟಿ ಅಪ್ಲಿಕೇಶನ್ ಒಂದರ ವಾರ್ಷಿಕ ಚಂದಾದಾರರತ್ವದ ಮೊತ್ತಕ್ಕಿಂತ ದುಪ್ಪಟ್ಟಾಗಲಿದೆ. ಹೀಗೆ ದಿನವೊಂದಕ್ಕೆ ಸಾವಿರಕ್ಕಿಂತ ಹೆಚ್ಚು ಹಣವನ್ನು ಒಂದು ಸಿ‌ನಿಮಾಗಾಗಿ ಖರ್ಚು ಮಾಡುವುದಕ್ಕಿಂತ ಓಟಿಟಿ ಚಂದಾದಾರರಾದರೆ ವರ್ಷವಿಡೀ ಸಿನಿಮಾ ವೀಕ್ಷಿಸಬಹುದು ಎಂಬ ನಿರ್ಧಾರಕ್ಕೆ ಹಲವಾರು ಮಂದಿ ಬಂದರು.

ಹೀಗಾಗಿಯೇ ಚಿತ್ರಮಂದಿರಗಳ ಕಡೆ ಸಿನಿ ರಸಿಕರ ಆಗಮನ ಕಡಿಮೆಯಾಗಿದೆ. ಇನ್ನು ಚಿತ್ರಮಂದಿರಗಳಲ್ಲಿನ ಟಿಕೆಟ್ ದರ ಹಾಗೂ ಅಲ್ಲಿನ ಫುಡ್ ಅಂಡ್ ಬೆವರೇಜಸ್ ದರಗಳ ಬಗ್ಗೆ ಈ ಹಿಂದಿನಿಂದಲೂ ಸಹ ಟ್ರೋಲ್‌ಗಳು ಹರಿದಾಡುತ್ತಿದ್ದವು. ಅದರಲ್ಲಿಯೂ ಮಲ್ಟಿಪ್ಲೆಕ್ಸ್‌ಗಳಲ್ಲಿನ ಪಾಪ್ ಕಾರ್ನ್ ದರದ ಬಗ್ಗೆ ಈ ಹಿಂದಿನಿಂದಲೂ ದೊಡ್ಡ ಮಟ್ಟದ ಟೀಕೆಗಳಿವೆ.

ಇಷ್ಟು ಚರ್ಚೆಗಳಿಗೆ ಒಳಗಾಗಿರುವ ಪಾಪ್‌ಕಾರ್ನ್ ಹಾಗೂ ತಿಂಡಿಗಳ ದರಗಳ ಬಗ್ಗೆ ಇದೀಗ ಕೊಂಚ ಸಿಹಿ ಎನಿಸುವ ಸುದ್ದಿಯನ್ನು ಜಿಎಸ್‌ಟಿ ಕೌನ್ಸಿಲ್ ಆಫ್ ಇಂಡಿಯಾ ನೀಡಿದೆ. ಹೌದು, ಚಿತ್ರಮಂದಿರಗಳಲ್ಲಿ ಮಾರಾಟ ಮಾಡುವ ಪಾಪ್‌ಕಾರ್ನ್, ತಂಪು ಪಾನೀಯ ಹಾಗೂ ಇತರೆ ತಿನಿಸುಗಳ ಮೇಲಿನ ಜಿಎಸ್‌ಟಿ ದರವನ್ನು 18%ನಿಂದ 5%ಗೆ ಇಳಿಸುವುದಾಗಿ ಜಿಎಸ್‌ಟಿ ಕೌನ್ಸಿಲ್ ಆಫ್ ಇಂಡಿಯಾ ತಿಳಿಸಿದೆ.

ಈ ಮೂಲಕ ಚಿತ್ರಮಂದಿರಗಳಿಗೆ ತೆರಳಿ ಸಿನಿಮಾ ವೀಕ್ಷಿಸುವ ಸಿನಿ ರಸಿಕರಿಗೆ ಜಿಎಸ್‌ಟಿ ಕೌನ್ಸಿಲ್ ಸಿಹಿ ಸುದ್ದಿಯನ್ನು ನೀಡಿದೆ. ಈ ಹೊಸ ನಿಯಮ ಇದೇ ಮಂಗಳವಾರ ( ಜುಲೈ 11 ) ಜಾರಿಗೆ ಬರಲಿದೆ.

ಇನ್ನು ಈ ಸುದ್ದಿಯ ಕುರಿತೂ ಸಹ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಆರಂಭಗೊಂಡಿದ್ದು, ಹೀಗೆ ನಿರ್ಧಾರಗಳನ್ನು ತೆಗೆದುಕೊಂಡರೂ ಸಹ ಚಿತ್ರಮಂದಿರಗಳ ಹಾಗೂ ಮಲ್ಟಿಪ್ಲೆಕ್ಸ್‌ಗಳ ಮಾಲೀಕರು ಮೊದಲಿದ್ದ ದರದಲ್ಲಿಯೇ ತಿನಿಸುಗಳನ್ನು ಮಾರಾಟ ಮಾಡಲಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇಷ್ಟು ದರವನ್ನು ಇಳಿಸಿದರೂ ಸಹ ಅವುಗಳು ದುಬಾರಿಯೇ ಎಂದೂ ಸಹ ಹಲವಾರು ಮಂದಿ ಕಾಮೆಂಟ್ ಮಾಡಿದ್ದಾರೆ.

More from Filmibeat

English summary
GST council of India to reduce tax on theatre food and beverages from 18 to 5%. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X