»   » 'GST' ಬಳಿಕ ಕನ್ನಡ ಚಿತ್ರರಂಗದ ಲಾಭ ನಷ್ಟದ ಲೆಕ್ಕಾಚಾರ

'GST' ಬಳಿಕ ಕನ್ನಡ ಚಿತ್ರರಂಗದ ಲಾಭ ನಷ್ಟದ ಲೆಕ್ಕಾಚಾರ

Posted By:
Subscribe to Filmibeat Kannada

'GST' (goods and services tax) ಜುಲೈ 1 ರಿಂದ ದೇಶಾದ್ಯಂತ ಜಾರಿಗೆ ಬರಲಿದೆ. ಏಕರೂಪ ತೆರಿಗೆಯಿಂದ ಚಿತ್ರರಂಗದಲ್ಲಿ ಏನೇನು ಬದಲಾವಣೆ ಬರಬಹುದು ಎಂಬ ಲಾಭ ನಷ್ಟದ ಲೆಕ್ಕಾಚಾರ ಈಗಾಗಲೇ ಶುರುವಾಗಿದೆ.

ಸ್ಯಾಂಡಲ್ ವುಡ್ ನಿಂದ ಬಾಲಿವುಡ್ ವರೆಗೂ ಬಹುತೇಕ ಎಲ್ಲ ಚಿತ್ರರಂಗಗಳಲ್ಲಿಯೂ ಈ ಬಗ್ಗೆ ಚರ್ಚೆಗಳು ನಡೆದಿದೆ. 'GST' ನಿಯಮದ ಪ್ರಕಾರ ಟಿಕೆಟ್ ದರ 100 ರೂಪಾಯಿಗಿಂತ ಕಡಿಮೆ ಇರುವ ಚಿತ್ರಮಂದಿರಗಳಲ್ಲಿ 18% ತೆರಿಗೆ ಮತ್ತು 100 ರೂಪಾಯಿಗಿಂತ ಹೆಚ್ಚು ಟಿಕೆಟ್ ದರ ಇರುವ ಚಿತ್ರಮಂದಿರಗಳಲ್ಲಿ 28% ತೆರಿಗೆಯನ್ನು ವಿಧಿಸಲಾಗುವುದು.

ಜೂನ್ 27ಕ್ಕೆ GST ಕುರಿತು ಚಲನಚಿತ್ರೋದ್ಯಮ ವಿಶ್ಲೇಷಣೆ

'GST' ನಿಯಮದಿಂದ ಅತ್ತ ಚಿತ್ರರಂಗದವರದ್ದು ಒಂದು ರೀತಿಯ ಚಿಂತೆ ಆದರೆ, ಇತ್ತ ಪ್ರೇಕ್ಷಕರಲ್ಲಿ ಟಿಕೆಟ್ ದರ ಜಾಸ್ತಿ ಆಗುವುದಾ ಎಂಬ ಆತಂಕ ಮೂಡಿದೆ. ಮುಂದೆ ಓದಿ...

ಟಿಕೆಟ್ ದರ ಹೆಚ್ಚು

ಇಷ್ಟು ದಿನ ಚಲನಚಿತ್ರ ಟಿಕೆಟ್ ಬೆಲೆ ಆ ರಾಜ್ಯ ಸರ್ಕಾರ ವಿಧಿಸುವ ಮನರಂಜನೆ ತೆರಿಗೆಯನ್ನು ಆಧರಿಸಿತ್ತು. ಸದ್ಯ ರಾಜ್ಯಗಳಲ್ಲಿ ಸೊನ್ನೆಯಿಂದ 110% ವರೆಗೆ ಮನರಂಜನೆ ತೆರಿಗೆಯನ್ನು ವಿಧಿಸಲಾಗುತ್ತಿದೆ. ಈಗ 'GST' ಇಂದಾಗಿ ಸಿನಿಮಾ ಟಿಕೆಟ್ ದರ ಬಹುತೇಕ ರಾಜ್ಯಗಳಲ್ಲಿ ಹೆಚ್ಚಾಗಲಿದೆ. ಆದರೆ, ಜಾರ್ಖಂಡ್ ಮತ್ತು ಉತ್ತರ ಪ್ರದೇಶದಲ್ಲಿ ಟಿಕೆಟ್ ಬೆಲೆ ಕಡಿಮೆ ಆಗಲಿದೆ.

9000 ಸಾವಿರಕ್ಕೂ ಅಧಿಕ ಚಿತ್ರಮಂದಿರ

ಭಾರತದಲ್ಲಿ ಸದ್ಯ 9000 ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಿದ್ದು 'GST' ನಿಯಮದ ಪ್ರಕಾರ ಟಿಕೆಟ್ ದರ 100 ರೂಪಾಯಿಗಿಂತ ಕಡಿಮೆ ಇರುವ ಚಿತ್ರಮಂದಿರಗಳಲ್ಲಿ 18% ತೆರಿಗೆ ಮತ್ತು 100 ರೂಪಾಯಿಗಿಂತ ಹೆಚ್ಚು ಟಿಕೆಟ್ ದರ ಇರುವ ಚಿತ್ರಮಂದಿರಗಳಲ್ಲಿ 28% ತೆರಿಗೆಯನ್ನು ವಿಧಿಸಲಾಗುವುದು.

ಕರ್ನಾಟಕದಲ್ಲಿ..?

ಕರ್ನಾಟಕದಲ್ಲಿ ಮನರಂಜನೆ ತೆರಿಗೆ ಮೇಲೆ ಸಂಪೂರ್ಣ ವಿನಾಯಿತಿ ನೀಡಲಾಗಿತ್ತು. ಆದರೆ ಈಗ 'GST' ಬರುವುದರಿಂದ ಜುಲೈ 1 ರಿಂದ ಸಾಮಾನ್ಯವಾಗಿಯೇ ಟಿಕೆಟ್ ಬೆಲೆಯಲ್ಲಿ ಏರಿಕೆ ಆಗಲಿದೆ.

ಇತರ ಭಾಷೆ ಚಿತ್ರಕ್ಕೆ ಲಾಭ

ಸದ್ಯ ಕರ್ನಾಟಕದಲ್ಲಿ ಪ್ರದರ್ಶನವಾಗುವ ಪರಭಾಷೆಯ ಸಿನಿಮಾಗಳಿಗೆ 30% ವರೆಗೆ ಮನರಂಜನೆ ತೆರಿಗೆ ವಿಧಿಸಲಾಗುತ್ತಿತ್ತು. ಈಗ 'GST' 28% ಇದ್ದು, ಪರಭಾಷೆಯ ಸಿನಿಮಾಗಳ ತೆರಿಗೆ ಶೇಕಡ 2% ರಷ್ಟು ಕಡಿಮೆ ಆಗಲಿದೆ.

ಮಲ್ಟಿಪ್ಲೆಕ್ಸ್ ನಲ್ಲಿ ದರ ಬದಲಾವಣೆ

ರಾಜ್ಯ ಸರ್ಕಾರ ಕೆಲ ತಿಂಗಳುಗಳ ಹಿಂದಷ್ಟೇ ಮಲ್ಟಿಪ್ಲೆಕ್ಸ್ ನಲ್ಲಿ 200 ರೂಪಾಯಿಗಿಂತ ಹೆಚ್ಚು ಟಿಕೆಟ್ ದರ ಮಾಡಬಾರದು ಎಂದು ನಿಯಮ ರೂಪಿಸಿತ್ತು. ಆದರೆ ಈಗ ಮಲ್ಟಿಪ್ಲೆಕ್ಸ್ ನಲ್ಲಿ ಎಲ್ಲಾ ಭಾಷೆಯ ಚಿತ್ರಗಳಿಗೆ ಒಂದೇ ರೀತಿಯ ತೆರಿಗೆ ಇರುವುದರಿಂದ ಟಿಕೆಟ್ ದರ ಹೆಚ್ಚಾಗುವ ಸಾಧ್ಯತೆ ಇದೆ.

ಸರ್ಕಾರಕ್ಕೆ ಮನವಿ

ಈಗಾಗಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಸಾ.ರಾ.ಗೋವಿಂದು ರಾಜ್ಯ ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದಾರೆ. 'GST' ಇಂದ ಕನ್ನಡ ಚಿತ್ರರಂಗದ ಮೇಲೆ ಆಗುವ ಪರಿಣಾಮಗಳ ಬಗ್ಗೆ ತಿಳಿಸಿದ್ದಾರೆ.

English summary
'GST' (28%) Entertainment Tax will have significant impact on Kannada Film Industry

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada