Don't Miss!
- News
Breaking: ಕರ್ನಾಟಕದಲ್ಲಿ 2000 ಗಡಿ ದಾಟಿದ ಕೊರೊನಾ ವೈರಸ್!
- Sports
ಮಹಾರಾಜ ಟ್ರೋಫಿ: ಮಯಾಂಕ್ ಶತಕ; 15.4 ಓವರ್ಗಳಲ್ಲಿ 176 ರನ್ ಚಚ್ಚಿ ಗೆದ್ದ ಬೆಂಗಳೂರು ಬ್ಲಾಸ್ಟರ್ಸ್!
- Lifestyle
Surya Gochar 2022 : ಆ. 17ಕ್ಕೆ ಸಿಂಹದಲ್ಲಿ ಸೂರ್ಯ ಸಂಚಾರ: ದ್ವಾದಶ ರಾಶಿಗಳ ಮೇಲೆ ಬೀರುವ ಪ್ರಭಾವವೇನು?
- Finance
ಕ್ರಿಪ್ಟೋ ವಹಿವಾಟು: 370 ಕೋಟಿ ರೂಪಾಯಿ ಜಪ್ತಿ ಮಾಡಿದ ಇಡಿ
- Automobiles
ವ್ಯಾಗನ್ಆರ್ ಕಾರಿಗೆ ಸೆಡ್ಡು ಹೊಡೆಯಲಿದೆ 2022ರ ಕಿಯಾ ರೇ ಫೇಸ್ಲಿಫ್ಟ್
- Technology
ರೆಡ್ಮಿ K50 ಅಲ್ಟ್ರಾ ಮತ್ತು ಶಿಯೋಮಿ ಪ್ಯಾಡ್ 5 ಪ್ರೊ 12.4 ಬಿಡುಗಡೆ! ವಿಶೇಷತೆ ಏನು?
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
ಗುಬ್ಬಿ ವೀರಣ್ಣ ಪುತ್ರಿ, ಹಿರಿಯ ನಟಿ ಹೇಮಲತಾ ನಿಧನ
ಗುಬ್ಬಿ ವೀರಣ್ಣ ಮೊಮ್ಮಗಳು, ಕನ್ನಡ ಚಿತ್ರರಂಗದ ಹಿರಿಯ ನಟಿ ಹೇಮಲತಾ ಇಂದು ನಿಧನಹೊಂದಿದ್ದಾರೆ. ಅವರಿಗೆ 75 ವರ್ಷಕ್ಕೂ ಹೆಚ್ಚು ವಯಸ್ಸಾಗಿತ್ತು ಎನ್ನಲಾಗಿದೆ.
ಹೇಮಲತಾ ಅವರು ಡಾ ರಾಜ್ಕುಮಾರ್, ಉದಯ್ ಕುಮಾರ್ ಸೇರಿದಂತೆ ಹಲವು ಸ್ಟಾರ್ ನಟರೊಟ್ಟಿಗೆ ನಟಿಸಿದ್ದಾರೆ. ಗುಬ್ಬಿ ವೀರಣ್ಣ ಅವರ ಪುತ್ರಿಯಾಗಿದ್ದ ಹೇಮಲತಾ ದೊಡ್ಡಬಳ್ಳಾಪುರದ ಸೋಮೇಶ್ವರ ಬಡವಾಣೆಯಲ್ಲಿ ವಾಸವಾಗಿದ್ದರು.
ಶುಕ್ರವಾರ ಅವರಿಗೆ ಲಘು ಹೃದಯಾಘಾತವಾಗಿತ್ತು, ಕೂಡಲೇ ಅವರನ್ನು ದೊಡ್ಡಬಳ್ಳಾಪುರ ಬಳಿಯ ಬಾಶೆಟ್ಟಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಶನಿವಾರ ಬೆಳಿಗ್ಗೆ ನಿಧನರಾದರು. ಹೇಮಲತಾ ಅವರಿಗೆ ಶಾಮ, ಜಯೇಶ್ ಎಂಬ ಗಂಡು ಮಕ್ಕಳು, ಶಿಲ್ಪಾ ಹೆಸರಿನ ಓರ್ವ ಪುತ್ರಿ ಇದ್ದರು.
'ಎಮ್ಮೆ ತಮ್ಮಣ್ಣ', 'ಕಲಾವತಿ' ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಹೇಮಲತಾ ನಟಿಸಿದ್ದಾರೆ. ಅವರ ತಂದೆ ಗುಬ್ಬಿ ವೀರಣ್ಣ ಜೊತೆಗೆ ಕೆಲವು ನಾಟಕಗಳಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದರು. ಜೊತೆಗೆ ಅತ್ಯುತ್ತಮ ನೃತ್ಯಗಾರ್ತಿಯೂ ಆಗಿದ್ದರು ಹೇಮಲತಾ.
ಸಂಬಂಧಿಗಳಿಗೆ ಪ್ರೀತಿಯ ಲತಾ ಅಕ್ಕ ಆಗಿದ್ದ ಹೇಮಲತಾ, ಕಾಲವಾದ ಗುಬ್ಬಿ ವೀರಣ್ಣ ಅವರ ಕೊನೆಯ ಮಗಳಾಗಿದ್ದರು. ಹೇಮಲತಾ ನಿಧನದಿಂದ ಗುಬ್ಬಿ ವೀರಣ್ಣರ ಎಲ್ಲ ಮಕ್ಕಳು ಕಾಲವಾದಂತಾಗಿದೆ.
ಹೇಮಲತಾ ಅವರ ಹತ್ತಿರದ ಸಂಬಂಧಿ ಸುಶ್ಮಾ ವೀರ್ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ಆಂಟಿಯನ್ನು ಬಹಳ ಮಿಸ್ ಮಾಡಿಕೊಳ್ಳುವುದಾಗಿ ಬರೆದುಕೊಂಡಿದ್ದಾರೆ. ಆಕೆ ದೊಡ್ಡ ಹೃದಯದ, ಸದಾ ಸಕ್ರಿಯವಾಗಿದ್ದ ಹೆಣ್ಣಾಗಿದ್ದರು. ನನ್ನ ಕಷ್ಟದ ಸಮಯದಲ್ಲಿ ನನ್ನ ಬೆನ್ನಿಗೆ ನಿಂತು, ನನ್ನ ವ್ಯಕ್ತಿತ್ವ ರೂಪಿಸಿ, ನಾನು ಇಂದೇನಾಗಿದ್ದೇನೊ ಅದಕ್ಕೆ ಕಾರಣ ಅವರಾಗಿದ್ದಾರೆ'' ಎಂದು ಸುಶ್ಮಾ ವೀರ್ ಬರೆದುಕೊಂಡಿದ್ದಾರೆ. ಜೊತೆಗೆ ಹೇಮಲತಾರ ಕೆಲವು ಅಪರೂಪದ ಚಿತ್ರಗಳನ್ನು ಸಹ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.