Don't Miss!
- News
ಹಾಸನ ಜಿಲ್ಲೆಯಲ್ಲಿ ಮುಂದುವರೆದ ಕಾಡಾನೆ ದಾಳಿ: ಕಾಫಿ, ಮೆಣಸು, ಭತ್ತ ಬೆಳೆ ನಾಶ
- Sports
ಟಿ20 ವಿಶ್ವಕಪ್ನ ಭಾರತ ತಂಡಕ್ಕೆ ಆಯ್ಕೆಯಾಗುವ ಮೂವರು ಕ್ರಿಕೆಟಿಗರನ್ನು ಹೆಸರಿಸಿದ ಕೈಫ್
- Technology
ಒಪ್ಪೋ ರೆನೋ 8 ಸ್ಮಾರ್ಟ್ಫೋನ್ ಬಿಡುಗಡೆ! 33W ಚಾರ್ಜಿಂಗ್ ವಿಶೇಷ!
- Lifestyle
ಆ. 17ಕ್ಕೆ ಸಿಂಹ ರಾಶಿಯಲ್ಲಿ ಸೂರ್ಯ ಸಂಚಾರ: 4 ರಾಶಿಗಳಿಗೆ ಅದೃಷ್ಟ, 3 ರಾಶಿಯವರು ಹುಷಾರು
- Automobiles
ಆಕರ್ಷಕ ವಿನ್ಯಾಸದ 2022ರ ಹ್ಯುಂಡೈ ಟ್ಯೂಸಾನ್ ಎಸ್ಯುವಿಯ ವಿಶೇಷತೆಗಳು
- Education
Distance Education Courses And Colleges : ದೂರ ಶಿಕ್ಷಣ ಮೂಲಕ ಅಧ್ಯಯನಕ್ಕೆ ಉತ್ತಮ ಕೋರ್ಸ್ ಮತ್ತು ಕಾಲೇಜುಗಳ ವಿವರ
- Finance
5 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದ ಸಗಟು ಹಣದುಬ್ಬರ: ಜುಲೈನಲ್ಲಿ ಶೇ. 13.93 ದಾಖಲು
- Travel
ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲ್ ಆನೆಗಳ ಶಿಬಿರಕ್ಕೆ ಭೇಟಿ ಕೊಡಿ
ಗುಬ್ಬಿ ವೀರಣ್ಣ ಪುತ್ರಿ, ಹಿರಿಯ ನಟಿ ಹೇಮಲತಾ ನಿಧನ
ಗುಬ್ಬಿ ವೀರಣ್ಣ ಮೊಮ್ಮಗಳು, ಕನ್ನಡ ಚಿತ್ರರಂಗದ ಹಿರಿಯ ನಟಿ ಹೇಮಲತಾ ಇಂದು ನಿಧನಹೊಂದಿದ್ದಾರೆ. ಅವರಿಗೆ 75 ವರ್ಷಕ್ಕೂ ಹೆಚ್ಚು ವಯಸ್ಸಾಗಿತ್ತು ಎನ್ನಲಾಗಿದೆ.
ಹೇಮಲತಾ ಅವರು ಡಾ ರಾಜ್ಕುಮಾರ್, ಉದಯ್ ಕುಮಾರ್ ಸೇರಿದಂತೆ ಹಲವು ಸ್ಟಾರ್ ನಟರೊಟ್ಟಿಗೆ ನಟಿಸಿದ್ದಾರೆ. ಗುಬ್ಬಿ ವೀರಣ್ಣ ಅವರ ಪುತ್ರಿಯಾಗಿದ್ದ ಹೇಮಲತಾ ದೊಡ್ಡಬಳ್ಳಾಪುರದ ಸೋಮೇಶ್ವರ ಬಡವಾಣೆಯಲ್ಲಿ ವಾಸವಾಗಿದ್ದರು.
ಶುಕ್ರವಾರ ಅವರಿಗೆ ಲಘು ಹೃದಯಾಘಾತವಾಗಿತ್ತು, ಕೂಡಲೇ ಅವರನ್ನು ದೊಡ್ಡಬಳ್ಳಾಪುರ ಬಳಿಯ ಬಾಶೆಟ್ಟಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಶನಿವಾರ ಬೆಳಿಗ್ಗೆ ನಿಧನರಾದರು. ಹೇಮಲತಾ ಅವರಿಗೆ ಶಾಮ, ಜಯೇಶ್ ಎಂಬ ಗಂಡು ಮಕ್ಕಳು, ಶಿಲ್ಪಾ ಹೆಸರಿನ ಓರ್ವ ಪುತ್ರಿ ಇದ್ದರು.
'ಎಮ್ಮೆ ತಮ್ಮಣ್ಣ', 'ಕಲಾವತಿ' ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಹೇಮಲತಾ ನಟಿಸಿದ್ದಾರೆ. ಅವರ ತಂದೆ ಗುಬ್ಬಿ ವೀರಣ್ಣ ಜೊತೆಗೆ ಕೆಲವು ನಾಟಕಗಳಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದರು. ಜೊತೆಗೆ ಅತ್ಯುತ್ತಮ ನೃತ್ಯಗಾರ್ತಿಯೂ ಆಗಿದ್ದರು ಹೇಮಲತಾ.
ಸಂಬಂಧಿಗಳಿಗೆ ಪ್ರೀತಿಯ ಲತಾ ಅಕ್ಕ ಆಗಿದ್ದ ಹೇಮಲತಾ, ಕಾಲವಾದ ಗುಬ್ಬಿ ವೀರಣ್ಣ ಅವರ ಕೊನೆಯ ಮಗಳಾಗಿದ್ದರು. ಹೇಮಲತಾ ನಿಧನದಿಂದ ಗುಬ್ಬಿ ವೀರಣ್ಣರ ಎಲ್ಲ ಮಕ್ಕಳು ಕಾಲವಾದಂತಾಗಿದೆ.
ಹೇಮಲತಾ ಅವರ ಹತ್ತಿರದ ಸಂಬಂಧಿ ಸುಶ್ಮಾ ವೀರ್ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ಆಂಟಿಯನ್ನು ಬಹಳ ಮಿಸ್ ಮಾಡಿಕೊಳ್ಳುವುದಾಗಿ ಬರೆದುಕೊಂಡಿದ್ದಾರೆ. ಆಕೆ ದೊಡ್ಡ ಹೃದಯದ, ಸದಾ ಸಕ್ರಿಯವಾಗಿದ್ದ ಹೆಣ್ಣಾಗಿದ್ದರು. ನನ್ನ ಕಷ್ಟದ ಸಮಯದಲ್ಲಿ ನನ್ನ ಬೆನ್ನಿಗೆ ನಿಂತು, ನನ್ನ ವ್ಯಕ್ತಿತ್ವ ರೂಪಿಸಿ, ನಾನು ಇಂದೇನಾಗಿದ್ದೇನೊ ಅದಕ್ಕೆ ಕಾರಣ ಅವರಾಗಿದ್ದಾರೆ'' ಎಂದು ಸುಶ್ಮಾ ವೀರ್ ಬರೆದುಕೊಂಡಿದ್ದಾರೆ. ಜೊತೆಗೆ ಹೇಮಲತಾರ ಕೆಲವು ಅಪರೂಪದ ಚಿತ್ರಗಳನ್ನು ಸಹ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.