For Quick Alerts
  ALLOW NOTIFICATIONS  
  For Daily Alerts

  'ಗುಡ್ಡದ ಭೂತ' ಖ್ಯಾತಿಯ ಉದ್ಯಾವರ ಮಾಧವ ಆಚಾರ್ಯ ನಿಧನ

  |

  ಕನ್ನಡದ ಹಿರಿಯ ರಂಗಕರ್ಮಿ, ಕಿರುತೆರೆ ನಟ ಉದ್ಯಾವರ ಮಾಧವ ಆಚಾರ್ಯ ಅವರು ಇಂದು ನಿಧನರಾಗಿದ್ದಾರೆ.

  79 ವರ್ಷದ ಉದ್ಯಾವರ ಮಾಧವ ಆಚಾರ್ಯ ಅವರು ಕಳೆದ ಹಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಉಡುಪಿ ಮೂಲದ ಆಚಾರ್ಯ ಅವರು ಐವತ್ತಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ.

  ಬೆಂಗಾಲಿ ನಟ ಮೊನು ಮುಖರ್ಜಿ ನಿಧನ: ಮಮತಾ ಬ್ಯಾನರ್ಜಿ ಸಂತಾಪ

  ಕಥೆಗಾರರಾಗಿ, ಕವಿಯಾಗಿ, ನಿರ್ದೇಶಕರಾಗಿ, ನಟರಾಗಿ ಮನರಂಜನಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು. ಕಿರುತೆರೆಯ ಸೂಪರ್ ಹಿಟ್ ಧಾರಾವಾಹಿ ಗುಡ್ಡದ ಭೂತದಲ್ಲಿ ನಟಿಸಿದ್ದರು. ದೇಶ-ವಿದೇಶಗಳಲ್ಲಿ ನಾಟಕಗಳನ್ನು ಪ್ರದರ್ಶಿಸಿದ್ದಾರೆ.

  ರಂಗಭೂಮಿಗೆ ಉದ್ಯಾವರ ಮಾಧವ ಆಚಾರ್ಯ ಅವರ ಕೊಡುಗೆ ಗೌರವಿಸಿದ ರಾಜ್ಯ ಸರ್ಕಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದರು. ಇದರ ಜೊತೆಗೆ ಹಲವು ಪ್ರಶಸ್ತಿ ಸಹ ಲಭಿಸಿದೆ.

  KGF 2 ವಿಲ್ಲನ್ ಲುಕ್ ರಿವೀಲ್ ಮಾಡಿದ ರಾಕಿಂಗ್ ಸ್ಟಾರ್ Yash | Filmibeat Kannada

  ಇನ್ನು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿ, ಉಂದಾಪುರದ ಬಿಪಿ ಶೆಟ್ಟಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ.

  English summary
  Guddada Bhootha Fame Veteran Actor Udyavara Madhav Acharya Passes Away.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X