ಫೋಟೋ ನೋಡಿ ಶಿವಣ್ಣನ ಮುಂದಿನ ಸಿನಿಮಾದ ಪಾತ್ರ ಊಹಿಸಿ
ನಟ ಶಿವರಾಜ್ ಕುಮಾರ್ ತಮ್ಮ ಇಷ್ಟು ವರ್ಷದ ಚಿತ್ರರಂಗದ ಜರ್ನಿಯಲ್ಲಿ ಬೇರೆ ಬೇರೆ ಪಾತ್ರಗಳನ್ನು ಮಾಡಿಕೊಂಡು ಬಂದಿದ್ದಾರೆ. ಇದೀಗ ಮತ್ತೊಂದು ಪಾತ್ರದ ತಯಾರಿಯಲ್ಲಿ ಶಿವರಾಜ್ ಕುಮಾರ್ ಇದ್ದಾರೆ.
ತಮ್ಮ ಮುಂದಿನ ಸಿನಿಮಾದಲ್ಲಿ ತಾವು ನಿರ್ವಹಿಸುತ್ತಿರುವ ಪಾತ್ರ ಯಾವುದು ಎಂದು ಅಭಿಮಾನಿಗಳಿಗೆ ಊಹಿಸಲು ಶಿವಣ್ಣ ಪ್ರಶ್ನೆ ಕೇಳಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಒಂದು ಫೋಟೋ ಹಂಚಿಕೊಂಡಿದ್ದಾರೆ.
ಫೋಟೋ ನೋಡಿ ಅನೇಕರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಶಿವಣ್ಣನ ಫೋಟೋ ನೋಡಿ ನೇವಿ ಅಧಿಕಾರಿ ಪಾತ್ರ ಎಂದು ಕೆಲವರು ಊಹಿಸಿದ್ದಾರೆ. ಶಿವಣ್ಣ ತಲೆಯ ಮೇಲೆ ಇರುವ ಟೋಪಿ ಗಮನಿಸಿದರೆ, ನೇವಿ ಅಧಿಕಾರಿ ಪಾತ್ರವೇ ಇರಬಹುದು ಎನ್ನುವ ಕುತೂಹಲ ಹೆಚ್ಚಾಗಿದೆ.

'ಆರ್ ಡಿ ಎಕ್ಸ್' ಸೇರಿದಂತೆ, ಈಗಾಗಲೇ ಶಿವರಾಜ್ ಕುಮಾರ್ ಅವರ ಕೆಲವು ಸಿನಿಮಾಗಳು ಘೋಷಣೆ ಆಗಿದ್ದು, ಇದು ಆ ಸಿನಿಮಾಗಳ ಪಾತ್ರವೋ, ಅಥವಾ ಹೊಸ ಸಿನಿಮಾವೊಂದರ ಪಾತ್ರವೋ ಎನ್ನುವ ಪ್ರಶ್ನೆ ಮೂಡಿದೆ.

ಈ ಹಿಂದೆ 'ಟುವ್ವಿ ಟುವ್ವಿ ಟುವ್ವಿ' ಎಂಬ ಸಿನಿಮಾದಲ್ಲಿ ನಟ ರಾಘವೇಂದ್ರ ರಾಜ್ ಕುಮಾರ್ ನೇವಿ ಅಧಿಕಾರಿ ಕಾಣಿಸಿಕೊಂಡಿದ್ದರು. ಇದೀಗ ಶಿವಣ್ಣ ಆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.


Click it and Unblock the Notifications











