For Quick Alerts
  ALLOW NOTIFICATIONS  
  For Daily Alerts

  ಸುಳಿವು ಬಳಸಿಕೊಂಡು ಈ ಚಿತ್ರದ ಟೈಟಲ್ ಊಹಿಸಬಲ್ಲೀರಾ?

  |

  ಸಿನಿಮಾ ಎಂಬುದೇ ಹಾಗೆ. ಯಾವುದೇ ಕ್ಷೇತ್ರದಲ್ಲಿದ್ದರೂ ಕೈಬೀಸಿ ಕರೆಯುತ್ತೆ. ಇದೀಗ, ಸಾಫ್ಟ್ ವೇರ್ ಕ್ಷೇತ್ರದಲ್ಲಿ ದುಡಿಯುತ್ತಿರುವ ಒಂದು ಸಿನಿ ಉತ್ಸಾಹಿ ತಂಡ ತಮ್ಮ ಸ್ನೇಹಿತರನ್ನ ಸೇರಿಸಿ ಸಿನಿಮಾ ತಯಾರಿಸಿದ್ದಾರೆ.

  ಈಗ ಚಿತ್ರದ ಟೈಟಲ್ ಹೇಳುವ ಅವಕಾಶ ನಿಮಗೆ ಸಿಕ್ಕಿದೆ. ಹೌದು, ಚಿತ್ರದ ಪೋಸ್ಟರ್ ಒಂದನ್ನ ಬಿಡುಗಡೆ ಮಾಡಿರುವ ಚಿತ್ರತಂಡ ನಮ್ಮ ಸಿನಿಮಾದ ಶೀರ್ಷಿಕೆ ಊಹಿಸಿ ಎಂದು ಟಾಸ್ಕ್ ಕೊಟ್ಟಿದ್ದಾರೆ.

  ಅದಕ್ಕೆ ನಿಮಗೊಂದು ಸುಳಿವು ಕೂಡ ನೀಡಲಾಗಿದೆ. 'He is K.N.P' ಎಂದು ಕ್ಲೂ ಕೊಟ್ಟಿದ್ದು, ಇದರ ಹಿಂದೆ ಒಂದು ಟೈಟಲ್ ಇದೆಯಂತೆ. ಅದು ಏನು ಎಂದು ಸಾಧ್ಯವಾದರೇ ಗುರುತಿಸಿ ಕಾಮೆಂಟ್ ಮಾಡಿ. ಈ ಪೋಸ್ಟರ್ ಗಮನಿಸಿದ್ರೆ ಹೆಚ್ಚಿನ ಸುಳಿವು ಸಿಗುತ್ತೆ.

  ಅಂದ್ಹಾಗೆ, ಈ ಚಿತ್ರವನ್ನ ಇದೇ‌ ಮೊದಲ ಬಾರಿಗೆ ಕ್ರಿಶ್ ಎಂಬುವವರು ಕಥೆ ಚಿತ್ರಕಥೆ ಬರೆದು ನಿರ್ದೇಶನ‌ ಮಾಡಿದ್ದಾರೆ. ಸ್ಕ್ರಿಪ್ಟ್ ಕೆಲಸದಲ್ಲಿ ಇವರಿಗೆ ಇನ್ನಿಬ್ಬರು ಸಾಥ್ ನೀಡುತ್ತಿದ್ದಾರೆ. ಇನ್ನು ಈ ಚಿತ್ರದ ಹೀರೋ ಎಂಬುದು ಸದ್ಯಕ್ಕೆ ಗೌಪ್ಯವಾಗಿದೆ. ಮೊದಲು ಟೈಟಲ್ ಅನೌನ್ಸ್ ಮಾಡಿದ ನಂತರ ನಾಯಕನಟನ ಬಗ್ಗೆ ಮಾಹಿತಿ ನೀಡಲಾಗುವುದಂತೆ.

  ವಿಶೇಷ ಅಂದ್ರೆ, ಈಗಾಗಲೇ ಸಿನಿರಂಗದ ಕೆಲವು ಅನುಭವಿಗಳು ಈ ಚಿತ್ರವನ್ನ ನೋಡಿ ಮೆಚ್ಚಿದ್ದಾರೆ. ಅವರ ಸಲಹೆ ಸ್ವೀಕರಿಸಿ ಚಿತ್ರವನ್ನು ಇನ್ನಷ್ಟು ಪಾಲಿಶ್ ಮಾಡಿದ್ದಾರಂತೆ ನಿರ್ದೇಶಕರು. ಇನ್ನೆರಡು ತಿಂಗಳಲ್ಲಿ ಈ ಸಿನಿಮಾ ತೆರೆಗೆ ಬರಬಹುದು. ಈ ಸಂತಸದ ಸಮಯದಲ್ಲಿ ಯಶಸ್ವಿ‌ ಪ್ರದರ್ಶನ ಕಾಣ್ತಿರುವ ಕೆಜಿಎಫ್ ಚಿತ್ರಕ್ಕೆ ಕೆ.ಎನ್.ಪಿ. ತಂಡ ಅಭಿನಂದಿಸಿ ಶುಭಕೋರಿದೆ.

  English summary
  Unnamed movie first poster has released. now, Assume the title using the hints given.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X