For Quick Alerts
  ALLOW NOTIFICATIONS  
  For Daily Alerts

  ಕೆಜಿಎಫ್ ಚಾಪ್ಟರ್ 2 ಕಥೆ ಬಗ್ಗೆ ಹೀಗೊಂದು ಚರ್ಚೆ, ಇದು ನಿಜ ಆದ್ರೆ.?

  |
  KGF Kannada Movie : ಪ್ರೇಕ್ಷಕ ರೆಡಿ ಮಾಡಿದ್ದಾನೆ ಕೆಜಿಎಫ್ 2 ಚಾಪ್ಟರ್ ಕಥೆ..! | FILMIBEAT KANNADA

  ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 1 ಸೂಪರ್ ಹಿಟ್ ಆಗಿದೆ. ಚಿತ್ರದ ಮೇಕಿಂಗ್, ಕಥೆ ವಿಚಾರದಲ್ಲಿ ಎಲ್ಲರಿಂದಲೂ ಭೇಷ್ ಎನಿಸಿಕೊಂಡಿದೆ. ಇದೀಗ, ಚಾಪ್ಟರ್ 2 ಕೂಡ ಆರಂಭವಾಗಿದೆ. ಮಾರ್ಚ್ 13 ರಂದು ಕೆಜಿಎಫ್ ಚಾಪ್ಟರ್ 2 ಶುರುವಾಗಿದೆ.

  ಈಗ ಎಲ್ಲೆಲ್ಲೂ ಕೆಜಿಎಫ್ ಚಿತ್ರದ ಕಥೆ ಬಗ್ಗೆಯೇ ಮಾತು. ಗರುಡನನ್ನು ಕೊಲ್ಲುವ ಸುಪಾರಿ ಪಡೆದುಕೊಂಡಿದ್ದ ರಾಕಿ ಭಾಯ್ ಅಂತಿಮವಾಗಿ ಅವನನ್ನು ಕೊಲ್ಲುವಲ್ಲಿ ಯಶಸ್ಸು ಕಂಡಿದ್ದಾನೆ. ಅಲ್ಲಿಗೆ ಮೊದಲ ಭಾಗವನ್ನ ಮುಗಿಸಲಾಗಿದೆ. ಗರುಡ ಸತ್ತ ಮಾತ್ರಕ್ಕೆ ಕಥೆ ಮುಗಿದಿಲ್ಲ. ಚಾಪ್ಟರ್ 2 ನಲ್ಲಿ ಅಸಲಿ ಕಥೆ ಆರಂಭವಾಗಲಿದೆ.

  ವಿಮರ್ಶೆ-2: 'ಕೆಜಿಎಫ್' ಇಷ್ಟವಾಗೋದು ಈ ಎರಡೇ ಕಾರಣಕ್ಕೆ.!

  ಕೆಜಿಎಫ್ ನಿಜವಾದ ಕಥೆ ಆರಂಭವಾಗುವುದೇ ಚಾಪ್ಟರ್ 2 ನಲ್ಲಿ. ಇದನ್ನ ಸ್ವತಃ ಅನಂತ್ ನಾಗ್ ಕೂಡ ಮೊದಲ ಭಾಗದ ಅಂತ್ಯದಲ್ಲಿ ಹೇಳಿದ್ದರು. ಇದೀಗ, ಮುಂದುವರೆದ ಭಾಗದಲ್ಲಿ ಕಥೆ ಹೀಗಿರಬಹುದು ಎಂಬ ಚರ್ಚೆ ಶುರುವಾಗಿದೆ. ಅದು ಹಾಗೆ, ಅದು ಹೀಗೆ ಅಂತೆ-ಕಂತೆಗಳು ಸದ್ದು ಮಾಡ್ತಿದೆ. ಪ್ರೇಕ್ಷಕರ ಪ್ರಕಾರ ಕೆಜಿಎಫ್ 2 ಕಥೆ ಹೀಗಿರಬಹುದು.! ಮುಂದೆ ಓದಿ.....

  ಕೆಜಿಎಫ್ ಗೆ ರಾಕಿ ಭಾಯ್ ಸುಲ್ತಾನ

  ಕೆಜಿಎಫ್ ಗೆ ರಾಕಿ ಭಾಯ್ ಸುಲ್ತಾನ

  ಗರುಡನನ್ನ ಕೊಲ್ಲುವ ಸುಪಾರಿ ಪಡೆದು ಬಂದಿದ್ದ ರಾಕಿ ಭಾಯ್, ಕೆಜಿಎಫ್ ನ ನಿಜವಾದ ಹಿನ್ನಲೆ ಮತ್ತು ಅಲ್ಲಿ ಬೆಲೆ ಬಾಳುವ ಆಸ್ತಿಯ ಬಗ್ಗೆ ತಿಳಿದ ಬಳಿಕ, ಅಲ್ಲಿಗೆ ನಾನೇ ಕಿಂಗ್ ಆಗಬೇಕು ಆಸೆಯಿಂದ ಅಲ್ಲಿಯೇ ಉಳಿದುಕೊಳ್ಳಬಹುದು. ಅಂದ್ರೆ, ಗರುಡನ ನಂತರದ ಸ್ಥಾನಕ್ಕೆ ರಾಕಿ ಭಾಯ್ ಎಂಟ್ರಿ.

  ಕನ್ನಡ ಇಂಡಸ್ಟ್ರಿಯ ದಿಕ್ಕು ಬದಲಿಸಿದ 'ಕೆಜಿಎಫ್' ಚಿತ್ರದ '21' ಅಂಶಗಳು

  ಸುಪಾರಿ ಕೊಟ್ಟವರು ತಿರುಗಿಬೀಳಬಹುದು

  ಸುಪಾರಿ ಕೊಟ್ಟವರು ತಿರುಗಿಬೀಳಬಹುದು

  ಅದ್ಯಾವಾಗ ರಾಕಿ ಭಾಯ್ ಕೆಜಿಎಫ್ ನಿಯಂತ್ರಣ ಮಾಡಲು ಮುಂದಾಗ್ತಾನೋ ಆಗ, ರಾಕಿಗೆ ಸುಪಾರಿ ಕೊಟ್ಟ ದೇಸಾಯಿ ಅಂಡ್ ಟೀಂ ತಿರುಗಿ ಬೀಳಬಹುದು. ರಾಕಿಯನ್ನ ಹೊಡೆಯಲು ಬೇರೆ ಹುಡುಗರನ್ನ ಕಳುಹಿಸಬಹುದು.

  'ಕೆಜಿಎಫ್' ದಾಖಲೆ ಮುರಿಯೋಕೆ ಹತ್ತಿರ ಬಂದೇ ಬಿಟ್ಟ 'ಯಜಮಾನ'

  ಅಧೀರ ವರ್ಸಸ್ ರಾಕಿ ಭಾಯ್

  ಅಧೀರ ವರ್ಸಸ್ ರಾಕಿ ಭಾಯ್

  ಗರುಡಾ ಇರೋವರೆಗೂ ನಾನು ಬರಲ್ಲ ಎಂದಿದ್ದ ಅಧೀರ, ಕೆಜಿಎಫ್ ಗೆ ಬರಲು ಮುಂದಾಗಬಹುದು. ಈ ವೇಳೆ ರಾಕಿ ಭಾಯ್ ಮತ್ತು ಅಧೀರನ ನಡುವೆ ಫೈಟ್ ಆಗಬಹುದು. ಅಲ್ಲಿಗೆ ದೇಸಾಯಿ ಅಂಡ್ ಟೀಂ, ಅಧೀರ ಒಟ್ಟಾಗಿ ರಾಕಿಗೆ ಎದುರಾಗಬಹುದು. ಇವರಿಬ್ಬರಿಗೆ ದುಬೈನಲ್ಲಿರುವ ಇನಾಯತ್ ಅಲಿ ಸಾಥ್ ನೀಡಬಹುದು.

  ಕೆಜಿಎಫ್ 2 ಬಗ್ಗೆ ಕಾಡುತ್ತಿರುವ ಪ್ರಶ್ನೆಗಳು: ಅಚ್ಚರಿಯಾದ್ರೂ ನಂಬಲೇಬೇಕು.!

  ಅತಿ ಶ್ರೀಮಂತ ಮತ್ತು ಪ್ರಬಲ ವ್ಯಕ್ತಿ

  ಅತಿ ಶ್ರೀಮಂತ ಮತ್ತು ಪ್ರಬಲ ವ್ಯಕ್ತಿ

  ತಾಯಿಗೆ ಕೊಟ್ಟ ಮಾತಿನಂತೆ ರಾಕಿ ಭಾಯ್, ಅತಿ ಪ್ರಬಲ ವ್ಯಕ್ತಿ ಮತ್ತು ಶ್ರೀಮಂತನಾಗಬಹುದು. ಕೆಜಿಎಫ್ ವಶಪಡಿಸಿಕೊಂಡ ನಂತರ ಇಡೀ ಇಂಡಿಯಾಗೆ ಡಾನ್ ಆಗಿ ಮೆರೆಯಬಹುದು. ಅದಕ್ಕೆ ತಕ್ಕಂತೆ ಚಾಪ್ಟರ್ 1 ರಲ್ಲೇ ಕೆಲವು ದೃಶ್ಯಗಳನ್ನ ತೋರಿಸಿದ್ದಾರೆ.

  'ಕೆಜಿಎಫ್ ಚಾಪ್ಟರ್-2' ಚಿತ್ರಕ್ಕೆ ಬರ್ತಾರಂತೆ ಬಾಲಿವುಡ್ ಖ್ಯಾತ ನಟಿ.?

  ಪ್ರೈಮ್ ಮಿನಿಸ್ಟರ್ ಆರ್ಡರ್

  ಪ್ರೈಮ್ ಮಿನಿಸ್ಟರ್ ಆರ್ಡರ್

  ರೌಡಿಗಳಿಂದ ರಾಕಿಯನ್ನ ಮಟ್ಟಹಾಕಲು ಸಾಧ್ಯವಾಗದೇ ಇದ್ದಾಗ ರಾಜಕೀಯವಾಗಿ ರಾಕಿ ಮೇಲೆ ಅಟ್ಯಾಕ್ ಮಾಡಬಹುದು. ಅಂದಿನ ಪ್ರೈಮ್ ಮಿನಿಸ್ಟರ್ ಮೂಲಕ ರಾಕಿ, ದೇಶದ ಅತಿ ದೊಡ್ಡ ಕ್ರಿಮಿನಲ್ ಎಂದು ಘೋಷಿಸಿ ಸೈನ್ಯದಿಂದ ಮಟ್ಟಹಾಕಬಹುದು.

  'ಕೆಜಿಎಫ್' ಹಿಟ್ ಆದ್ಮೇಲೆ ನಮ್ ಇಂಡಸ್ಟ್ರಿಯಲ್ಲಾದ 5 ಬದಲಾವಣೆ.!

  English summary
  The second chapter of upcoming Kannada action-drama 'KGF', starring Yash in the lead, had its official launch yesterday (march 13th). guess the kgf 2 story?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X