ದರ್ಶನ್ ಜೊತೆ ನಟಿಸಿದ್ದ ಈ ನಟಿ ಯಾರು? ಸುಳಿವು ಇಲ್ಲಿದೆ ಊಹಿಸಿ?
ನವೆಂಬರ್ 14 ಮಕ್ಕಳ ದಿನಾಚರಣೆ....ಈ ವಿಶೇಷ ದಿನದಂತೆ ಹಲವರು ತಮ್ಮ ಬಾಲ್ಯದ ಫೋಟೋಗಳನ್ನ ಹಂಚಿಕೊಂಡು ಹಳೆಯ ದಿನವನ್ನ ನೆನಪಿಸಿಕೊಂಡಿದ್ದಾರೆ. ಸಿನಿಮಾ ಇಂಡಸ್ಟ್ರಿಯಲ್ಲಿ ನಟ-ನಟಿಯರು ಶೇರ್ ಮಾಡಿರುವ ಬಾಲ್ಯದ ಫೋಟೋಗಳು ಹೆಚ್ಚು ಗಮನ ಸೆಳೆದಿದೆ.
ಈ ಸ್ಟೋರಿಯಲ್ಲಿ ನೀವು ನೋಡುತ್ತಿರುವ ಫೋಟೋ ಯಾವ ನಟಿಯದ್ದು ಎಂದು ಗುರುತಿಸಿ. ಈ ನಟಿ ಯಾರು ಎಂದು ನೀವು ಗುರುತಿಸಲು ಕಷ್ಟವಾದರೆ ಮುಂದೆ ನೀಡಿರುವ ಸುಳಿವು ಬಳಸಿಕೊಳ್ಳಿ.
ಶೀರ್ಷಿಕೆಯಲ್ಲಿ ಹೇಳಿರುವ ಪ್ರಕಾರ ಈ ನಟಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಡಿ ಬಾಸ್ ಗೆ ದೊಡ್ಡ ಬ್ರೇಕ್ ಕೊಟ್ಟಿತ್ತು. ದರ್ಶನ್ ಜೊತೆ ಎರಡು ಸಿನಿಮಾ ಮಾಡಿದ್ದಾರೆ.

ಈಗಲೂ ಗುರುತಿಸಲು ಕಷ್ಟವಾಯ್ತಾ? ಸರಿ ಇನ್ನೊಂದು ಸುಳಿವು ಇಲ್ಲಿದೆ. ದರ್ಶನ್ ಜೊತೆ ಮಾತ್ರವಲ್ಲ, ವಿಷ್ಣುವರ್ಧನ್, ಶಿವರಾಜ್ ಕುಮಾರ್, ರವಿಚಂದ್ರನ್ ಸಿನಿಮಾದಲ್ಲಿ ನಟಿಸಿದ್ದಾರೆ.
ಈಗಲೂ ಕಷ್ಟವಾಗಿದ್ದರೆ ಮತ್ತೊಂದು ಸುಳಿವು ಓದಿ. ಈಕೆ ಕನ್ನಡದ ನಟಿಯಲ್ಲ. ಮೂಲತಃ ಮಲಯಾಳಂ ಇಂಡಸ್ಟ್ರಿಯ ನಟಿ. ಕನ್ನಡದಲ್ಲಿ ಮಾಡಿರುವುದು ಕೇವಲ ಐದು ಸಿನಿಮಾ ಮಾತ್ರ. ಕೊನೆಯ ಕನ್ನಡ ಸಿನಿಮಾ ಮಾಡಿದ್ದು 2014ರಲ್ಲಿ.
ಈ ನಟಿ ಯಾರು ಎಂದು ಗುರುತಿಸಿದವರಿಗೆ ಶುಭಾಶಯ. ಗೊತ್ತಿಲ್ಲದವರಿಗೆ ಉತ್ತರ ಇಲ್ಲಿದೆ. ಈ ಫೋಟೋದಲ್ಲಿರುವ ನಟಿ ನವ್ಯ ನಾಯರ್. ದರ್ಶನ್ ಜೊತೆ 'ಗಜ' ಹಾಗೂ 'ಬಾಸ್' ಸಿನಿಮಾದಲ್ಲಿ ನಟಿಸಿದ್ದರು. ವಿಷ್ಣುವರ್ಧನ್ ಜೊತೆ ನಂಯಜಮಾನ್ರು, ಶಿವಣ್ಣ ಜೊತೆ ಭಾಗ್ಯದ ಬಳೆಗಾರ, ರವಿಚಂದ್ರನ್ ಜೊತೆ ದೃಶ್ಯ ಸಿನಿಮಾದಲ್ಲಿ ಅಭಿನಯಿಸಿದ್ದರು.


Click it and Unblock the Notifications











