ದುನಿಯಾ ವಿಜಯ್ ಜೊತೆ ಇರೋ ಈ ಹುಡುಗಿ ಯಾರಿರಬಹುದು?
ಗಾಂಧಿನಗರದಲ್ಲಿ ಬಹಳ ನಿರೀಕ್ಷೆ ಹುಟ್ಟಿಸಿರುವ ದುನಿಯಾ ವಿಜಯ್ ಅವರ 'ಮಾಸ್ತಿ ಗುಡಿ' ಚಿತ್ರ ದಿನದಿಂದ ದಿನಕ್ಕೆ ಒಂದಲ್ಲಾ ಒಂದು ವಿಷಯದ ಮೂಲಕ ಸುದ್ದಿಯಾಗುತ್ತಲೇ ಇದೆ. ಈಗಾಗಲೇ ಚಿತ್ರದ ಭರ್ಜರಿ ತಯಾರಿಯಲ್ಲಿ ದುನಿಯಾ ವಿಜಯ್ ಅವರು ಬ್ಯುಸಿಯಾಗಿದ್ದಾರೆ.
'ಸಂಜು ವೆಡ್ಸ್ ಗೀತಾ', 'ಮೈನಾ' ಖ್ಯಾತಿಯ ನಿರ್ದೇಶಕ ನಾಗಶೇಖರ್ ಅವರು ನಿರ್ದೇಶನ ಮಾಡುತ್ತಿರುವ 'ಮಾಸ್ತಿ ಗುಡಿ' ಚಿತ್ರಕ್ಕೆ ಸಾಧು ಕೋಕಿಲಾ ಅವರು ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ.[ವಿಜಿ 'ಮಾಸ್ತಿ ಗುಡಿ'ಯಿಂದ ಮತ್ತೊಂದು ಬ್ರೇಕಿಂಗ್ ನ್ಯೂಸ್]
ಅಂದಹಾಗೆ ಈ ನಡುವೆ ಚಿತ್ರಕ್ಕಾಗಿ ವರ್ಕೌಟ್ ಮಾಡುತ್ತಿರುವ ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ಅವರು ಒಂದು ಹುಡುಗಿಯೊಂದಿಗೆ ಫೊಟೋ ಹಾಕಿಕೊಂಡಿದ್ದಾರೆ. ಆ ಹುಡುಗಿ ಮುಖ ಕಾಣದ ರೀತಿಯಲ್ಲಿ ಮಂಕಿ ಕ್ಯಾಪ್ ಹಾಕಿಕೊಂಡಿದ್ದು, ಇದೀಗ ಆ ಹುಡುಗಿ ಯಾರು ಅಂತ ಎಲ್ಲರೂ ತಲೆಕೆಡಿಸಿಕೊಂಡಿದ್ದಾರೆ.
ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ 'ಮಾಸ್ತಿ ಗುಡಿ' ಚಿತ್ರಕ್ಕೆ ಅಮೂಲ್ಯ ಮತ್ತು ಕೃತಿ ಕರಬಂಧ ಎಂಬ ಇಬ್ಬರು ನಾಯಕಿಯರು ಆಯ್ಕೆಯಾಗಿದ್ದಾರೆ. ಆದರೆ ಈ ಹೊಸ ಹುಡುಗಿ ಯಾರು ಅಂತ ಎಲ್ಲರ ಪ್ರಶ್ನೆ.[ದುನಿಯಾ ವಿಜಿ 'ಮಾಸ್ತಿ ಗುಡಿ' ವಿಲನ್ ಬಗ್ಗೆ ನಿಮಗೆಷ್ಟು ಗೊತ್ತು?]
ಇದೀಗ ಚಿತ್ರತಂಡದವರು ಆ ಹುಡುಗಿಯ ಹೆಸರು ಮತ್ತು ಆಕೆಯ ಸಂಫೂರ್ಣ ಮಾಹಿತಿಯನ್ನು ನೀಡಿದ್ದಾರೆ. ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

ನಟಿ ಸುಷ್ಮಾ
ಚಿತ್ರತಂಡದವರು ಮಂಕಿ ಕ್ಯಾಪ್ ತೊಟ್ಟಿದ್ದ ಹುಡುಗಿಯ ಹೆಸರು ಸುಷ್ಮಾ ಅಂತಾರೆ. ಕೆಲವಾರು ರಿಯಾಲಿಟಿ ಶೋಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಸುಷ್ಮಾ ಅವರನ್ನು ಹಲವರು 'ಲೇಡಿ ಟೈಗರ್' ಅಂತ ಕರೆಯುತ್ತಾರಂತೆ. (ಚಿತ್ರಕೃಪೆ: ದುನಿಯಾ ವಿಜಿ ಫೇಸ್ ಬುಕ್)['ಮಾಸ್ತಿ ಗುಡಿ'ಯಲ್ಲಿ ದುನಿಯಾ ವಿಜಯ್ ಜೊತೆ ಅಮೂಲ್ಯ ಬೇಬಿ?]

ಹುಲಿ ಬೇಟೆಯಾಡಲಿದ್ದಾರೆ
ನಟಿ ಸುಷ್ಮಾ ಅವರು ದುನಿಯಾ ವಿಜಿ ಅವರ ವಿಭಿನ್ನ ಸಿನಿಮಾ 'ಮಾಸ್ತಿ ಗುಡಿ'ಯಲ್ಲಿ ಪ್ರಮುಖವಾದ ಪಾತ್ರ ಮಾಡುತ್ತಿದ್ದಾರಂತೆ. ಅಂದಹಾಗೆ ಈ ಚಿತ್ರದಲ್ಲಿ ಸುಷ್ಮಾ ಅವರದು ಹುಲಿ ಬೇಟೆಯಾಡುವ ಪಾತ್ರವಂತೆ.

ದುನಿಯಾ ವಿಜಿ ತರಬೇತಿ
ಹುಲಿ ಹಿಡಿಯುವ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸುಷ್ಮಾ ಅವರೂ ಚಿತ್ರದಲ್ಲಿ ಫೈಟ್ ಮಾಡಲಿರುವುದರಿಂದ, ಅವರಿಗೆ ಖುದ್ದು ದುನಿಯಾ ವಿಜಿ ಅವರೇ ತರಬೇತಿ ನೀಡುತ್ತಿದ್ದಾರೆ.

ವೈರಲ್ ಆದ ಫೋಟೋ
ಇತ್ತೀಚಿಗೆ ದುನಿಯಾ ವಿಜಿ ಅವರು ಸುಷ್ಮಾ ಅವರಿಗೆ ತರಬೇತಿ ನೀಡುತ್ತಿದ್ದ ಸಂದರ್ಭದಲ್ಲಿ ಕ್ಲಿಕ್ಕಿಸಿದ ಪೊಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ದುನಿಯಾ ವಿಜಿ ಮೇಕಪ್ಪ್ ಮ್ಯಾನ್
'ಮಾಸ್ತಿ ಗುಡಿ' ಚಿತ್ರದಲ್ಲಿ ದುನಿಯಾ ವಿಜಿ ಅವರು 4 ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು 75 ವರ್ಷದ ಮುದುಕನ ಪಾತ್ರದಲ್ಲೂ ಮಿಂಚಲಿರುವುದರಿಂದ ಅವರನ್ನು ಪಕ್ಕಾ ಮುದುಕನನ್ನಾಗಿ ಮಾಡುವುದು ಮೇಕಪ್ಪ್ ಮ್ಯಾನ್ ಪ್ರಕಾಶ್ ಅವರ ಜವಾಬ್ದಾರಿ.

ಶುಭ ಹಾರೈಸಿದ ಶಿವಣ್ಣ
ದುನಿಯಾ ವಿಜಿ ಅವರ 'ಮಾಸ್ತಿ ಗುಡಿ' ಚಿತ್ರಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಶುಭ ಹಾರೈಸಿದ್ದಾರೆ. ಶಿವಣ್ಣ ಅವರು ಇತ್ತೀಚೆಗೆ ದುನಿಯಾ ವಿಜಿ ಅವರನ್ನು ಭೇಟಿ ಮಾಡಿದ್ದರು.


Click it and Unblock the Notifications











