For Quick Alerts
  ALLOW NOTIFICATIONS  
  For Daily Alerts

  ಈ ಫೋಟೋದಲ್ಲಿರುವ ನಟ ಯಾರೆಂದು ಕಂಡುಹಿಡಿಯಲು ಸಾಧ್ಯವೇ ಇಲ್ಲ

  By Bharath Kumar
  |
  Natasaarvabhowma : ನಟ ಸಾರ್ವಭೌಮ ಸಿನಿಮಾದಿಂದ ಬಂತು ಎಕ್ಸ್‌ಕ್ಲೂಸಿವ್ ಫೋಟೋ..! | Filmibeat Kannada

  ಗುರುತು ಸಿಗದಂತ ಮುಖ.....ಕಾಫಿ ಬಣ್ಣದ ಸೂಟು.....ಸತ್ತು ಬಿದ್ದಿರುವಂತೆ ಫೋಸ್....ಬದುಕಿದ್ದಾರಾ ಅಥವಾ ಸತ್ತಿದ್ದಾನಾ ಎಂಬುದು ಗೊತ್ತಿಲ್ಲ....ಹೀಗೆ ವಿಚಿತ್ರವಾಗಿರುವ ವ್ಯಕ್ತಿ ಯಾರು...? ಸಾಧ್ಯವಾದ್ರೆ ಕಂಡುಹಿಡಿಯಿರಿ ನೋಡೋಣ ಎಂದು ನಿರ್ದೇಶಕ ಪವನ್ ಒಡೆಯರ್ ಟ್ವಿಟ್ಟರ್ ನಲ್ಲಿ ಫೋಟೋ ಪೋಸ್ಟ್ ಮಾಡಿದ್ದಾರೆ.

  ಪವನ್ ಒಡೆಯರ್ ಹಾಕಿರುವ ಈ ಫೋಟೋವನ್ನ ಆಳವಾಗಿ ಗಮನಿಸಿ ಇದು ಯಾರು ಎಂದು ಕಂಡುಹಿಡಿಯಲು ಹೋದವರೆಲ್ಲಾ ಸೋತು ಸುಮ್ಮನಾಗಿದ್ದಾರೆ. ಯಾಕಂದ್ರೆ, ಯಾರಿಗೂ ಇದು ಯಾರು ಎಂಬ ಸಣ್ಣ ಸುಳಿವು ಕೂಡ ಗೊತ್ತಾಗುತ್ತಿಲ್ಲ.

  ಆದ್ರೆ, ಊಹೆ ಮಾಡುತ್ತಿರುವವರು ಮಾತ್ರ ಹಲವರ ಹೆಸರನ್ನ ಸೂಚಿಸುತ್ತಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಚಿಕ್ಕಣ್ಣ, ರವಿಶಂಕರ್, ಅನುಪಮಾ ಪರಮೇಶ್ವರನ್, ಅನಂತ್ ನಾಗ್ ಅಂತ ಗೆಸ್ ಮಾಡ್ತಿದ್ದಾರೆ.

  ಖಚಿತವಾದ ಉತ್ತರ ಯಾರಿಂದಲೂ ಇಲ್ಲ. ಇದನ್ನ ನಿರ್ದೇಶಕ ಕೂಡ ಬಹಿರಂಗಪಡಿಸಿಲ್ಲ. ನಟಸಾರ್ವಭೌಮ ಚಿತ್ರದ ಶೂಟಿಂಗ್ ಫೋಟೋ ಎನ್ನುವುದು ನಿಜ. ಮತ್ತು ಇದೊಂದು ದೆವ್ವ ಎನ್ನುವುದು ಖಾತ್ರಿಯಾಗಿದೆ.

  ಈ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್, ರಚಿತಾ ರಾಮ್, ಅನುಪಮಾ ಪರಮೇಶ್ವರನ್ ಅಭಿನಯಿಸುತ್ತಿದ್ದಾರೆ. ಪವನ್ ಒಡೆಯರ್ ನಿರ್ದೇಶನ ಮಾಡ್ತಿದ್ದಾರೆ. ಅಂದ್ಹಾಗೆ, ಈ ಸಿನಿಮಾ ಹಾರರ್ ಕಾಮಿಡಿ ಎಂಟರ್ ಟೈನ್ ಮೆಂಟ್ ಎಂದು ಹೇಳಲಾಗುತ್ತಿದೆ.

  ಕೊನೆಯದಾಗಿ ಈ ಫೋಟೋದಲ್ಲಿರುವ ವ್ಯಕ್ತಿ ಯಾರೆಂದು ನಿಮಗೆ ಗೊತ್ತಿದ್ರೆ ಈ ಸ್ಟೋರಿಯ ಕೆಳಗೆ ಕಾಮೆಂಟ್ ಮಾಡಿ, ನಿಮ್ಮ ಅಭಿಪ್ರಾಯ ತಿಳಿಸಿ.

  English summary
  kannada director pawan wadeyar has taken his twitter share one shooting pic of natasarwabouma. Guess who's this actor.?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X