For Quick Alerts
  ALLOW NOTIFICATIONS  
  For Daily Alerts

  ಆರ್‌ಸಿಬಿ ಬಳಿಕ ಮತ್ತೊಂದು ಐಪಿಎಲ್‌ ತಂಡದಿಂದ 'ಕೆಜಿಎಫ್ 2' ವೀಕ್ಷಣೆ

  |

  'ಕೆಜಿಎಫ್ 2' ಸಿನಿಮಾ ದೊಡ್ಡ ಹವಾ ಎಬ್ಬಿಸಿದೆ. ಸಾಮಾನ್ಯ ಪ್ರೇಕ್ಷಕರು ಮಾತ್ರವೇ ಅಲ್ಲ ಕನ್ನಡ ಸಿನಿಮಾಗಳಿಂದ ದೂರವೇ ಉಳಿದಿದ್ದ ಕಾರ್ಪೊರೇಟ್ ಮಂದಿ ಸಹ ಮುಗಿಬಿದ್ದ ಸಿನಿಮಾ ವೀಕ್ಷಿಸುತ್ತಿದ್ದಾರೆ.

  ಇದೀಗ ಐಪಿಎಲ್ ನಡೆಯುತ್ತಿದ್ದು, ಕೆಲವು ದಿನಗಳ ಹಿಂದಷ್ಟೆ 'ಆರ್‌ಸಿಬಿ' ತಂಡವು 'ಕೆಜಿಎಫ್ 2' ಸಿನಿಮಾವನ್ನು ವೀಕ್ಷಿಸಿ ಬಹುವಾಗಿ ಮೆಚ್ಚಿಕೊಂಡಿತ್ತು. 'ಆರ್‌ಸಿಬಿ' ನಾಯಕ ಫಾಫ್‌ ಡುಪ್ಲಿಸಿಸ್ ಸೇರಿದಂತೆ ಹಲವು ಆರ್‌ಸಿಬಿ ಆಟಗಾರರು 'ಕೆಜಿಎಫ್ 2' ಸಿನಿಮಾದ ಫ್ಲೆಕ್ಸ್‌ಗಳು, ಪೋಸ್ಟರ್‌ಗಳೊಟ್ಟಿಗೆ ಚಿತ್ರಗಳನ್ನು ತೆಗೆಸಿಕೊಂಡು ಖುಷಿ ಪಟ್ಟರು.

  ಇದೀಗ ಐಪಿಎಲ್‌ನ ಮತ್ತೊಂದು ತಂಡ 'ಕೆಜಿಎಫ್ 2' ಸಿನಿಮಾವನ್ನು ವೀಕ್ಷಿಸಿದ್ದಾರೆ. ಹಾರ್ದಿಕ್ ಪಾಂಡ್ಯಾ ನಾಯಕತ್ವದ ಗುಜರಾತ್ ಟೈಟನ್ಸ್ ತಂಡವು ಇದೀಗ 'ಕೆಜಿಎಫ್ 2' ಸಿನಿಮಾವನ್ನು ವೀಕ್ಷಿಸಿದ್ದಾರೆ. ಆಟಗಾರರ ಪತ್ನಿಯರು ಸಹ ಸಿನಿಮಾ ವೀಕ್ಷಿಸಿದ್ದಾರೆ.

  ಬಯೋ ಬಬಲ್‌ನಲ್ಲಿ 'ಕೆಜಿಎಫ್ 2' ಸಿನಿಮಾದ ವಿಶೇಷ ಸ್ಕ್ರೀನಿಂಗ್ ಅನ್ನು ವ್ಯವಸ್ಥೆ ಮಾಡಲಾಗಿತ್ತು. ನಾಯಕ ಹಾರ್ದಿಕ್ ಪಟೇಲ್ ಸೇರಿದಂತೆ ಎಲ್ಲ ಆಟಗಾರರು ತದೇಕಚಿತ್ತದಿಂದ ಸಿನಿಮಾವನ್ನು ವೀಕ್ಷಿಸಿದ್ದಾರೆ. ವಿದೇಶಿ ಆಟಗಾರರು ಸಹ 'ಕೆಜಿಎಫ್ 2' ಸಿನಿಮಾ ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ.

  ಸಿನಿಮಾ ವೀಕ್ಷಿಸಿದ ಬಳಿಕ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ ಆಟಗಾರರು. ಸಿನಿಮಾ ವೀಕ್ಷಣೆ ಸಮಯದಲ್ಲಿಯೇ ಶಿಳ್ಳೆಗಳನ್ನು ಹೊಡೆಯುತ್ತಾ ಬಹಳ ಎಂಜಾಯ್ ಮಾಡಿದ್ದಾರೆ. ಆರಂಭದಿಂದಲೂ ಫುಲ್‌ ಜೋಶ್‌ನಲ್ಲಿ ಸಿನಿಮಾ ನೋಡಿದ ನಾಯಕ ಹಾರ್ದಿಕ್ ಪಟೇಲ್, 'ಲವ್ಡ್ ಇಟ್' ಎನ್ನುವ ಮೂಲಕ ಸಿನಿಮಾಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿನಿಮಾದ ಕ್ಲೈಮ್ಯಾಕ್ಸ್ ನೋಡಿ ಅಂತೂ ಬಹಳ ಥ್ರಿಲ್ ಆಗಿದ್ದಾರೆ ಹಾರ್ದಿಕ್ ಪಾಂಡ್ಯಾ.

  Gujarat Titans IPL Team Watched KGF 2 Movie In Special Screening

  ಗುಜರಾತ್ ಟೈಟನ್ಸ್ ತಂಡದಲ್ಲಿ ಅಭಿನವ್ ಮನೋಹರ್ ಹೆಸರಿನ ಕರ್ನಾಟಕದ ಆಟಗಾರ ಒಬ್ಬರಿದ್ದಾರೆ. ಇನ್ನುಳಿದವರೆಲ್ಲ ಬೇರೆ ರಾಜ್ಯ ಹಾಗೂ ವಿದೇಶದ ಆಟಗಾರರಷ್ಟೆ. ಆದರೂ ಎಲ್ಲರೂ ಕನ್ನಡದ ಸಿನಿಮಾ 'ಕೆಜಿಎಫ್ 2' ವೀಕ್ಷಿಸಿ ಥ್ರಿಲ್ ಆಗಿದ್ದಾರೆ. ತಂಡದ ಸ್ಟಾರ್ ಆಟಗಾರ ಅಫ್ಘಾನಿಸ್ಥಾನದ ರಶೀದ್ ಖಾನ್, ಡೇವಿಡ್ ಮಿಲ್ಲರ್, ಲೂಕಿ ಫರ್ಗೂಸನ್, ಮೊಹಮ್ಮದ್ ಶಮಿ ಇನ್ನೂ ಹಲವರು ಸಿನಿಮಾವನ್ನು ವೀಕ್ಷಿಸಿ ಖುಷಿ ಪಟ್ಟಿದ್ದಾರೆ.

  'ಕೆಜಿಎಫ್ 2' ಸಿನಿಮಾವನ್ನು ಹಿಂದಿಯಲ್ಲಿ ಆಟಗಾರರು ನೋಡಿದ್ದು, ಸಿನಿಮಾ ನೋಡಿದ ಮರುದಿನ ಅಂದರೆ ಏಪ್ರಿಲ್ 30 ರಂದು ನಡೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್‌ನವರು ಆರ್‌ಸಿಬಿ ವಿರುದ್ಧ ಜಯಗಳಿಸಿದ್ದಾರೆ.

  ಆಟಗಾರರು ಸಿನಿಮಾ ನೋಡಿರುವುದು ಮಾತ್ರವೇ ಅಲ್ಲ, ಚಿತ್ರತಂಡದವರು ಸಹ ಆರ್‌ಸಿಬಿಯ ಸಿನಿಮಾ ನೋಡಿದ್ದಾರೆ. 'ಕೆಜಿಎಫ್ 2' ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ನಟ ಸಂಜಯ್ ದತ್ ಹಾಗೂ ರವೀನಾ ಟಂಡನ್ ಅವರುಗಳು ಆರ್‌ಸಿಬಿ ಜೆರ್ಸಿ ತೊಟ್ಟು ಪಂದ್ಯವೊಂದನ್ನು ವೀಕ್ಷಿಸಿದ್ದರು.

  'ಕೆಜಿಎಫ್ 2' ಸಿನಿಮಾವು ಭಾರಿ ದೊಡ್ಡ ಹವಾ ಎಬ್ಬಿಸಿದೆ. ಕ್ರಿಕೆಟ್‌ ಮಾತ್ರವೇ ಅಲ್ಲ ವಿಶ್ವದ ಜನಪ್ರಿಯ ಕ್ರೀಡೆ ಫುಟ್‌ಬಾಲ್ ಸಹ 'ಕೆಜಿಎಫ್ 2' ಹವಾಕ್ಕೆ ಮರುಳಾಗಿದೆ. ವಿಶ್ವದ ಜನಪ್ರಿಯ ಫುಟ್‌ಬಾಲ್ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್ ಸಹ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಿಂದ 'ಕೆಜಿಎಫ್' ಸಿನಿಮಾ ಸಂಬಂಧಿ ಪೋಸ್ಟ್ ಒಂದನ್ನು ಹಾಕಿದೆ.

  'ಕೆಜಿಎಫ್ 2' ಸಿನಿಮಾ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಾ ಸಾಗಿದೆ. ಈವರೆಗೆ ಸರಿ ಸುಮಾರು 1000 ಕೋಟಿ ಹಣವನ್ನು ವಿಶ್ವದಾದ್ಯಂತ ಗಳಿಕೆ ಮಾಡಿದೆ 'ಕೆಜಿಎಫ್ 2' ಸಿನಿಮಾ. 'ಕೆಜಿಎಫ್ 3' ಸಿನಿಮಾ ಸಹ ತೆರೆಗೆ ಬರಲಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಚಿತ್ರೀಕರಣ ಯಾವಾಗ ಪ್ರಾರಂಭವಾಗುತ್ತದೆಂಬ ಬಗ್ಗೆ ಖಾತ್ರಿ ಇಲ್ಲ.

  English summary
  IPL team Gujrat Titans watched KGF 2 movie in a special screening. RCB team also watched the movie few days back.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X