»   » ಕಿರುತೆರೆಗೆ ತರಲಿರುವವರು ಬಸವರಾಜ ನಂದಿಧ್ವಜ

ಕಿರುತೆರೆಗೆ ತರಲಿರುವವರು ಬಸವರಾಜ ನಂದಿಧ್ವಜ

Posted By: Super
Subscribe to Filmibeat Kannada

ಗುಲ್ಬರ್ಗಾ : ಹೈದರಾಬಾದ್‌ ಕರ್ನಾಟಕ ಪ್ರದೇಶದ ಸಣ್ಣ ಕತೆಗಾರರ ಕಥಾ ಸಾಹಿತ್ಯ ಇನ್ನು ಕೆಲವೇ ದಿನಗಳಲ್ಲಿ ಧಾರಾವಾಹಿಯಾಗಿ ಮೂಡಿಬರಲಿದೆ. ಶಹಾಬಾದ್‌ ಮೂಲದ, ಈಗ ಬೆಂಗಳೂರಲ್ಲಿ ನೆಲೆಸಿರುವ ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಬಸವರಾಜ ನಂದಿಧ್ವಜ ಈ ನಿಟ್ಟಿನಲ್ಲಿ ಸಿದ್ಧತೆಗಳನ್ನು ನಡೆಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ನಂದಿಧ್ವಜ, ಬೆಂಗಳೂರು ದೂರದರ್ಶನ 7.15 ರಿಂದ 7.30ರ ವರೆಗೆ 15 ನಿಮಿಷಗಳ ಅವಧಿಯ 13 ಕಂತಿನ ಅವಕಾಶ ಕೊಟ್ಟಿದೆ. 'ಬಿಸಿಲ ಹನಿಗಳು" ಎಂಬ ಶೀರ್ಷಿಕೆಯಡಿ ಪ್ರತಿ ಕಂತಿನಲ್ಲೂ ಹೈದರಾಬಾದ್‌ ಕರ್ನಾಟಕದ ಒಬ್ಬೊಬ್ಬ ಸಣ್ಣಕತೆಗಾರರ ಕತೆ ಅನಾವರಣಗೊಳ್ಳಲಿದೆ.

5 ಲಕ್ಷ ರುಪಾಯಿಗಳ ಅಂದಾಜು ವೆಚ್ಚದ ಈ ಕಾರ್ಯಕ್ರಮ ತನ್ನದೇ ಆದ ಛಾಪು ಮೂಡಿಸಲಿದೆ. ಗುಲ್ಬರ್ಗಾ, ಬೀದರ್‌, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ವ್ಯಾಪ್ತಿಯ ಒಟ್ಟು 13 ಕತೆಗಾರರ ಕತೆಗಳನ್ನು ಕಿರುತೆರೆಗೆ ಅಳವಡಿಸಲಾಗುವುದು ಎಂದರು.(ಇನ್ಫೋ ವಾರ್ತೆ)

English summary
Hyderabad Karnataka Short stories will be a TV serial

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada