ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಅಧಿಕೃತ ಪ್ರವೇಶ ಪಡೆದ 'ಗಲ್ಲಿ ಬಾಯ್'

2020ನೇ ಸಾಲಿನ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಗಲ್ಲಿ ಬಾಯ್ ಚಿತ್ರ ಅಧಿಕೃತ ಪ್ರವೇಶ ಪಡೆದುಕೊಂಡಿದೆ. ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾದಿಂದ ಈ ಸುದ್ದಿ ಪ್ರಕಟವಾಗಿದೆ.

92ನೇ ಆಸ್ಕರ್ ಪ್ರಶಸ್ತಿಯಲ್ಲಿ ಜೋಯಾ ಅಖ್ತರ್ ನಿರ್ದೇಶನ ಮಾಡಿದ್ದ ಈ ಚಿತ್ರ ಅತ್ಯುತ್ತಮ ವಿದೇಶಿ ವಿಭಾಗದಲ್ಲಿ ಭಾರತವನ್ನ ಪ್ರತಿನಿಧಿಸಲಿದೆ. ರಣ್ವಿರ್ ಸಿಂಗ್, ಆಲಿಯಾ ಭಟ್, ಸಿದ್ದಾಂತ್ ಚರ್ತುವೇದಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು.

ಅತ್ಯುತ್ತಮ Rap ಸಿಂಗರ್ ಆಗಬೇಕು ಕನಸು ಹೊತ್ತ ಯುವಕ ಜೀವನದಲ್ಲಿ ಏನೆಲ್ಲಾ ಕಷ್ಟಗಳನ್ನ ಎದುರಿಸುತ್ತಾನೆ, ಗುರಿಮುಟ್ಟಲು ಎಷ್ಟೆಲ್ಲಾ ಸವಾಲುಗಳನ್ನ ಎದುರಿಸುತ್ತಾನೆ ಎಂಬುದು ಕಥೆ. ಈ ಚಿತ್ರ ಕೇವಲ ಭಾರತೀಯ ಪ್ರೇಕ್ಷಕರನ್ನ ಮಾತ್ರವಲ್ಲ ವಿದೇಶಿ ಪ್ರೇಕ್ಷಕರ ಮೆಚ್ಚುಗೆಯೂ ಪಡೆದುಕೊಂಡಿತ್ತು.

GullyBoy Selected As Indias Official Entry To The 92nd Oscar Awards

ಫೆಬ್ರವರಿ ತಿಂಗಳಲ್ಲಿ ತೆರೆಕಂಡಿದ್ದ ಗಲ್ಲಿ ಬಾಯ್ ಆಸ್ಕರ್ ಗೆ ಆಯ್ಕೆಯಾಗಿರುವುದನ್ನ ಸಿನಿಪ್ರೇಮಿಗಳು ಸ್ವಾಗತಿಸಿದ್ದಾರೆ. ವರ್ಲ್ಡ್ ವೈಡ್ ಬಾಕ್ಸ್ ಆಫೀಸ್ ನಲ್ಲಿ ಗಲ್ಲಿ ಬಾಯ್ ಸಿನಿಮಾ 240 ಕೋಟಿಗೂ ಅಧಿಕ ಹಣ ಗಳಿಸಿತ್ತು.

ಕಳೆದ ಬಾರಿ 'ವಿಲೇಜ್ ರಾಕ್ ಸ್ಟಾರ್ಸ್' ಸಿನಿಮಾ ಅತ್ಯುತ್ತಮ ವಿದೇಶಿ ವಿಭಾಗದಲ್ಲಿ ಭಾರತದಿಂದ ನಾಮನಿರ್ದೇಶನವಾಗಿತ್ತು. ಆದರೆ, ಪ್ರಶಸ್ತಿ ಸುತ್ತಿನ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆಯಲು ಈ ಚಿತ್ರ ಹಿನ್ನಡೆ ಅನುಭವಿಸಿತ್ತು. ಈ ಸಲ 'ಗಲ್ಲಿ ಬಾಯ್' ಪ್ರಶಸ್ತಿ ತರುತ್ತಾ ಎಂಬ ಕುತೂಹಲ ಹುಟ್ಟಿಕೊಂಡಿದೆ.

More from Filmibeat

English summary
Gully Boy directed by Zoya Akthar starring Ranveer singh alia bhat, selected to be India's official entry for the Oscars 2020 by Film Federation of India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X