For Quick Alerts
  ALLOW NOTIFICATIONS  
  For Daily Alerts

  ಸಿನಿಮಾ ಆಗ್ತಿದೆ ರವಿಬೆಳಗೆರೆ ಕಾದಂಬರಿ: ಅನೀಶ್ ನಾಯಕ

  |

  'ಗುಳ್ಟು' ಅಂತಹ ಉತ್ತಮ ಸಿನಿಮಾ ಮಾಡಿದ್ದ ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ ಈಗ ಹೊಸ ಸಿನಿಮಾ ತಯಾರಿ ನಡೆಸಿದ್ದಾರೆ. ಕಳೆದ ಬಾರಿ ಸೈಬರ್ ಕ್ರೈಂ ಆಧಾರಿತ ಚಿತ್ರದ ಮೂಲಕ ಪ್ರೇಕ್ಷಕರನ್ನ ರಂಜಿಸಿದ್ದ ನಿರ್ದೇಶಕ ಈಗ ರವಿಬೆಳಗೆರೆ ಅವರ ಕಾದಂಬರಿಯನ್ನ ಸಿನಿಮಾ ಮಾಡಲು ಹೊರಟಿದ್ದಾರೆ.

  ಹೌದು, ಪತ್ರಕರ್ತ, ಬರಹಗಾರ ರವಿಬೆಳಗೆರೆ ಬರೆದಿರುವ 'ಒಮರ್ಟಾ' ಕಾದಂಬರಿ ಈಗ ಸಿನಿಮಾ ಆಗ್ತಿದೆ. ಭೂಗತ ಮಾಫಿಯಾ, ರೌಡಿಸಂ ಹಾಗೂ ಇನ್ನಿತರ ವಿಷ್ಯಗಳ ಬಗ್ಗೆ ಈ ಪುಸ್ತುಕದಲ್ಲಿ ಪ್ರಸ್ತಾಪಿಸಲಾಗಿದೆ. ಈ ರೋಚಕ ಕಥೆಯನ್ನ ತೆರೆಮೇಲೆ ತರ್ತಿದ್ದಾರೆ ಯುವ ನಿರ್ದೇಶಕ.

  'ಪಾಪಿಗಳ ಲೋಕ'ದಿಂದ ಬಣ್ಣದ ಲೋಕಕ್ಕೆ ಬಂದ ಬೆಳಗೆರೆ ಥ್ರಿಲ್ಲಿಂಗ್ ಕಥೆ! 'ಪಾಪಿಗಳ ಲೋಕ'ದಿಂದ ಬಣ್ಣದ ಲೋಕಕ್ಕೆ ಬಂದ ಬೆಳಗೆರೆ ಥ್ರಿಲ್ಲಿಂಗ್ ಕಥೆ!

  ಈ ಸಂಬಂಧ ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ ಅವರು ರವಿಬೆಳಗೆರೆ ಅವರನ್ನ ಭೇಟಿ ಮಾಡಿ ಅನುಮತಿ ಕೂಡ ಪಡೆದುಕೊಂಡಿದ್ದಾರೆ. ಈ ಹಿಂದೆ ಈ ಪುಸ್ತುಕವನ್ನ ಸಿನಿಮಾ ಮಾಡುವ ಉದ್ದೇಶದಿಂದ ಹಲವು ನಿರ್ದೇಶಕರು ರವಿಬೆಳಗೆರೆ ಅವರನ್ನ ಭೇಟಿ ಮಾಡಿದ್ದರು. ಆದರೆ, ಯಾರಿಗೂ ಅನುಮತಿ ನೀಡಿರಲಿಲ್ಲ. ಇದೀಗ, ಜರ್ನಾಧನ್ ಚಿಕ್ಕಣ್ಣಗೆ ಆ ಅವಕಾಶ ಸಿಕ್ಕಿದೆ.

  Gultoo director next movie based on Ravi belagere book Omerta

  ಅಂದ್ಹಾಗೆ, ಈ ಚಿತ್ರದಲ್ಲಿ ಯಾರು ನಾಯಕನಾಗಿ ನಟಿಸುಬಹುದು ಎಂಬ ಕುತೂಹಲವಿತ್ತು. ಧನಂಜಯ್, ಸತೀಶ್ ನೀನಸಾಂ ಅಂತವರು ಹೆಸರು ಕೇಳಿಬರ್ತಿತ್ತು. ಆದ್ರೀಗ ಅಕಿರಾ ಖ್ಯಾತಿ ಅನೀಶ್ ತೇಜೇಶ್ವರ್ ನಾಯಕನಾಗಿ ಅಂತಿಮವಾಗಿದ್ದಾರೆ.

  ಬಹುತೇಕ ಗುಳ್ಟು ಸಿನಿಮಾದಲ್ಲಿ ಕೆಲಸ ಮಾಡಿದವರೇ ಇಲ್ಲಿಯೂ ಮುಂದುವರಿಯಲಿದ್ದಾರೆ. ಗುಳ್ಟು ಸಿನಿಮಾ ನಿರ್ಮಾಣ ಮಾಡಿದ್ದ ಪ್ರಶಾಂತ್ ರೆಡ್ಡಿ ಅವರೇ ಬಂಡವಾಳ ಹಾಕಲಿದ್ದಾರೆ. ಸದ್ಯಕ್ಕೆ ಚಿತ್ರದ ಶೀರ್ಷಿಕೆ ಅಂತಿಮವಾಗಿಲ್ಲ. ಉಳಿದಂತೆ ಪ್ರಿ-ಪ್ರೊಡಕ್ಷನ್ ಕೆಲಸ ನಡೆಯುತ್ತಿದ್ದು, ಆಗಸ್ಟ್ ನಿಂದ ಸಿನಿಮಾ ಆರಂಭವಾಗಲಿದೆ.

  English summary
  Gultoo director janardhan chikkanna doing movie based on Ravi belagere book Omerta. anish tejeshwar playing lead role in this movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X