For Quick Alerts
  ALLOW NOTIFICATIONS  
  For Daily Alerts

  ಪೂರಿ ಜಗನ್ನಾಥ್ ಶಿಷ್ಯನ ಸಿನಿಮಾದಲ್ಲಿ 'ಗುಳ್ಟು' ನವೀನ್

  |

  'ಗುಳ್ಟು' ಸಿನಿಮಾ ಹಿಟ್ ಆದ ನಂತರ ನಟ ನವೀನ್ ಶಂಕರ್ ಈಗ ಮತ್ತೊಂದು ಹೊಸ ಸಿನಿಮಾ ಮಾಡುತ್ತಿದ್ದಾರೆ. ಇನ್ನೂ ಹೆಸರಿಡದ ಈ ಸಿನಿಮಾದ ಪೋಸ್ಟರ್ ಇಂದು ಬಿಡುಗಡೆಯಾಗಿದೆ.

  ನವೀನ್ ಅವರ ಹುಟ್ಟುಹಬ್ಬದ ವಿಶೇಷವಾಗಿ ಸಿನಿಮಾ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಪೋಸ್ಟರ್ ಡಿಸೈನ್ ಚೆನ್ನಾಗಿದೆ. ಪೋಸ್ಟರ್ ಮೂಲಕ ಪಾತ್ರದ ಬಗ್ಗೆ ಕೆಲವು ಸುಳಿವು ನೀಡಿದ್ದು, ಪ್ರೇಕ್ಷಕರಿಗೆ ಪ್ರಶ್ನೆ ಕೇಳಿದ್ದಾರೆ. ನಾಯಕನ ಕಾಲಿನ ಕೆಳಗೆ ಹಾಗೂ ಹಿಂದೆ ಆ ಸೂಚನೆ ಇವೆ.

  ಚಿತ್ರ ವಿಮರ್ಶೆ: ಸಾಮಾನ್ಯದವನಲ್ಲ ಈ 'ಗುಳ್ಟು'! ಚಿತ್ರ ವಿಮರ್ಶೆ: ಸಾಮಾನ್ಯದವನಲ್ಲ ಈ 'ಗುಳ್ಟು'!

  ಇದೊಂದು ಹೈಪರ್ ಲಿಂಕ್ ಶೈಲಿಯ ಸಿನಿಮಾ ಆಗಿದ್ದು, ಹಾಫ್ ಬೀಟ್ ಚಿತ್ರ ಎಂದೂ ಹೇಳಬಹುದಂತೆ. ಈ ಚಿತ್ರವನ್ನು ಶ್ರೀಧರ್ ಷಣ್ಮುಖ ನಿರ್ದೇಶನ ಮಾಡುತ್ತಿದ್ದಾರೆ. ಪೂರಿ ಜಗನ್ನಾಥ್ ಸೇರಿದಂತೆ ಸಾಕಷ್ಟು ದೊಡ್ಡ ದೊಡ್ಡ ನಿರ್ದೇಶಕರ ಜೊತೆಗೆ ಕೆಲಸ ಮಾಡಿರುವ ಇವರು ಮೊದಲ ಬಾರಿಗೆ ಡೈರೆಕ್ಷನ್ ಮಾಡುತ್ತಿದ್ದಾರೆ.

  ಚಿತ್ರದ ಒಂದಿಷ್ಟು ಪಾತ್ರಗಳ ನಡುವೆ ಇಂಟರ್ ಕನೆಕ್ಟ್ ಇದ್ದು, ಅಲ್ಲಿ ನಡೆಯೋ ಕತೆಯ ಜೊತೆಗೆ ಮುಖ್ಯವಾಗಿ ಸಿನಿಮಾದಲ್ಲಿ ಬಂಚ್ ಆಫ್ ಎಮೋಶನ್ಸ್ ಹೇಳೋಕೆ ನಿರ್ದೇಶಕರು ಹೊರಟಿದ್ದಾರಂತೆ.

  ಕ್ರೈಮ್, ಸ್ಟಗಲ್, ಕಾಮಿಡಿ, ಸ್ಯಾಡ್, ಲವ್ ಹೀಗೆ ಎಲ್ಲಾ ಎಮೋಶನ್ಸ್ ನ ಒಂದೇ ಕತೆಯಲ್ಲಿ ಹೇಳೋಕ್ ಪ್ರಯತ್ನ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಎಲ್ಲಾ ವರ್ಗಕ್ಕೂ ರೀಚ್ ಆಗ್ಬೇಕು ಅನ್ನೋದು ಅವರ ಅಜೆಂಡಾ ಆಗಿದೆಯಂತೆ.

  ಚಿತ್ರದ ಒಂದೊಂದೆ ಪಾತ್ರಗಳನ್ನ ಪರಿಚಯ ಮಾಡಿ, ಜೂನ್ ಮಧ್ಯದಲ್ಲಿ ಶೂಟಿಂಗ್ ಗೆ ಹೋಗುವ ಪ್ಲಾನ್ ನಡೆಯುತ್ತಿದೆಯಂತೆ. ಒಂಕಾರ್ ಮತ್ತು ಪ್ರಶಾಂತ್ ಅಂಚನ್ ಈ ಸಿನಿಮಾಗೆ ಬಂಡವಾಳ ಹಾಕಿದ್ದಾರೆ. ಅವರಿಗೆ ವೀರೆಂದ್ರ ಕೆಂಚನ್ ,ರಘು ಕುಂದರ್, ಶೇಷಪ್ಪ ಸಾತ್ ಕೊಡ್ತಿದಾರೆ. ಬಾಕ್ಸ್ ಆಫೀಸ್ ಸಿನಿ ಕ್ರಿಯೇಷನ್ಸ್ ನಲ್ಲಿ ಚಿತ್ರ ನಿರ್ಮಾಣ ಆಗುತ್ತಿದೆ.

  ಕೀರ್ತನ್ ಪೂಜಾರಿ ಛಾಯಗ್ರಹಣ, ರೋಣದ ಬಕ್ಕೇಶ್ ಮತ್ತು ಕಾರ್ತಿಕ್ ಚೆನ್ನೋಜಿರಾವ್ ಸಂಗೀತ ನೀಡುತ್ತಿದ್ದಾರೆ. ಗೌಸ್ ಪೀರ್ ,ಶಿವಕುಮಾರ್ ಶೆಟ್ಟಿ ಮತ್ತು ಅಭಿನಂದನ್ ದೇಶ್ ಪ್ರಿಯಾ ಹಾಡುಗಳು ಬರುತ್ತಿದ್ದಾರೆ.

  English summary
  Gultoo' kannada movie fame actor Naveen Shankar new movie poster out. The movie is directing by Shridar Shanmuka.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X