'ಗುಲ್ಟು' ನವೀನ್ ಶಂಕರ್ ಕರಾಬ್ ಲುಕ್ ನೋಡಿದ್ರಾ?
'ಗುಲ್ಟು' ಸಿನಿಮಾ ಮೂಲಕ ಕನ್ನಡಿಗರ ಮನಗೆದ್ದ ನಟ ನವೀನ್ ಶಂಕರ್ ಈಗ ಏನ್ ಮಾಡ್ತಿದ್ದಾರೆ?, 'ಗುಲ್ಟು' ಬಳಿಕ ಮತ್ಯಾಕೆ ಅಂಥಹಾ ವಿಭಿನ್ನ ಸಿನಿಮಾ ಕೊಡುವ ಪ್ರಯತ್ನಕ್ಕೆ ಕೈ ಹಾಕಿಲ್ಲ ಎನ್ನುವ ಯೋಚನೆ ನಿಮಗೂ ಬಂದಿರ ಬಹುದು. ಇದಕ್ಕೆಲ್ಲ ಹೊಸ ರೂಪದಲ್ಲಿ ಉತ್ತರ ನೀಡಲು ಸ್ವತಃ ನವೀನ್ ಬಂದಿದ್ದಾರೆ.
ಸದ್ಯ 'ಕ್ಷೇತ್ರಪತಿ' ಆಗಿ ಪ್ರೇಕ್ಷಕರ ಮುಂದೆ ಬರಲು ನವೀನ್ ಶಂಕರ್ ಸಜ್ಜಾಗಿದ್ದಾರೆ. ಇಷ್ಟು ದಿನ ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಿದ್ದು, ಈಗ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡುವುದ ಜೊತೆಗೆ ಎಂಟ್ರಿ ಕೊಡ್ತಿದ್ದಾರೆ. ಇದರ ಮೂಲಕ ತಮ್ಮ ಮುಂದಿನ ಸಿನಿಮಾದ ಬಗ್ಗೆ ಕುತೂಹಲವನ್ನೂ ಮೂಡಿಸಿದ್ದಾರೆ ನವೀನ್.
ನವೀನ್ ಶಂಕರ್ ಈ ಬಾರಿಯೂ ವಿಭಿನ್ನವಾದ ಕಥೆ, ಸಿನಿಮಾ ಮತ್ತು ಲುಕ್ ಮೂಲಕ ನಿಮ್ಮ ಮುಂದೆ ಬರುತ್ತಾ ಇದ್ದಾರೆ. ಚಿತ್ರದ ಈ ಫಸ್ಟ್ ಲುಕ್ ಸಿನಿಮಾದ ಬಗ್ಗೆ ನಿರೀಕ್ಷೆ ಹುಟ್ಟು ಹಾಕುತ್ತದೆ. ನವೀನ್ ಗುರುತು ಸಿಗದಷ್ಟರ ಮಟ್ಟಿಗೆ ತಮ್ಮ ಲುಕ್ ಬದಲಿಸಿಕೊಂಡಿದ್ದಾರೆ.

ನಿರ್ಮಾಪಕರಿಗಾಗಿ ಅಲೆದ ನವೀನ್ ಶಂಕರ್!
ಸಿನಿಮಾ ಹೇಗೆ ಶುರುವಾಯ್ತು ಎನ್ನುವ ಬಗ್ಗೆ ಮಾತನಡಿರುವ ನಟ ನವೀನ್ ಶಂಕರ್. "ನಿರ್ದೇಶಕ ಶ್ರೀಕಾಂತ್ ಅವರು ಈ ಚಿತ್ರದ ಕಥೆ ಹೇಳಿದಾಗ, ನಾನು ಮನಸ್ಸಿನಲ್ಲಿ ಈ ರೀತಿಯ ಚಿತ್ರ ಮಾಡಬೇಕೆಂದುಕೊಳ್ಳುತ್ತಿದ್ದೆ. ಇದು ಸಹ ಅದೇ ರೀತಿಯ ಕಥೆಯಾಗಿದ್ದು ಕಾಕತಾಳೀಯ. ನಂತರ ನಿರ್ಮಾಪಕರ ಹುಡುಕಾಟ ಶುರುವಾಯ್ತು ಅದು ಆಗದೇ ಇದ್ದಾಗ. ಆನಂತರ ನಾವೇ ಕೆಲವು ಸ್ನೇಹಿತರು ಸೇರಿ ಒಂದು ನಿರ್ಮಾಣ ಸಂಸ್ಥೆ ಪ್ರಾರಂಭ ಮಾಡಿ ಚಿತ್ರೀಕರಣ ಆರಂಭಿಸಿದ್ದೆವು. ಸಾಕಷ್ಟು ಜನ ಸ್ನೇಹಿತರು ನಿರ್ಮಾಣಕ್ಕೆ ಜೊತೆಗೂಡಿದ್ದಾರೆ." ಎಂದಿದ್ದಾರೆ ನವೀನ್.

ನವೀನ್ ಶಂಕರ್ ಪಾತ್ರವೇನು?
ನವೀನ್ ಶಂಕರ್ ತಮ್ಮ ಪಾತ್ರದ ಬಗ್ಗೆ ಹೇಳಿದಿಷ್ಟು "ನಾನು ಬಸವ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀನಿ. ಬಸವ ಇಂಜಿನಿಯರಿಂಗ್ ವಿದ್ಯಾರ್ಥಿ. ತನ್ನಿಷ್ಟಕ್ಕೆ ತಾನು ಇರುವಾತ. ಆತನ ಜೀವನದಲ್ಲಿ ನಡೆಯುವ ಅನಿರೀಕ್ಷಿತ ಘಟನೆಯೊಂದರ ಮೂಲಕ ಈತ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ. ಈ ಬಸವ ನನ್ನೊಳಗೆ, ನಿಮ್ಮೊಳಗೆ ಇದ್ದಾನೆ. ಕೆಲವರಿಗೆ ಅವನು ಜೀವಂತ. ಇನ್ನೂ ಕೆಲವರಿಗೆ ಆತ ಇಲ್ಲ."

ನವೀನ್ ಶಂಕರ್‌ಗೆ ಧನಂಜಯ್ ಸಾಥ್!
ನವೀನ್ ಶಂಕರ್ ಹೊಸ ಸಿನಿಮಾಗೆ ನಟ ಡಾಲಿ ಧನಂಜಯ್ ಸಾಥ್ ಕೊಟ್ಟಿದ್ದಾರೆ. ಪೋಸ್ಟರ್ ಲಾಂಚ್ ಮಾಡಿ ಮಾತನಾಡಿದ ಧನಂಜಯ್ "ನಾನು 'ಜಯನಗರ 4th ಬ್ಲಾಕ್' ಕಿರುಚಿತ್ರ ಮಾಡುತ್ತಿದ್ದಾಗ ನವೀನ್, ನಾನು ಭೇಟಿಯಾಗುತ್ತಿದ್ದೆವು. ಯಾವುದೇ ಬ್ಯಾಗ್ರೌಂಡ್ ಇಲ್ಲದೆ ನವೀನ್ ಇಷ್ಟು ಬೆಳದಿರುವುದು ನಿಜಕ್ಕೂ ಹೆಮ್ಮೆ. ಚಿತ್ರದಲ್ಲಿ ನವೀನ್ ಬಸವ ಎಂಬ ಪಾತ್ರ ಮಾಡಿದ್ದಾರೆ. ಈ ಬಸವನಿಗೆ ನಮ್ಮ ಕ್ರಾಂತಿಕಾರಿ ಬಸವಣ್ಣನವರು ಆದರ್ಶವಾಗಲಿ. ಚಿತ್ರ ಜಯಭೇರಿ ಬಾರಿಸಲಿ." ಎಂದು ಡಾಲಿ ಧನಂಜಯ್ ನವೀನ್ ಮತ್ತು ಸಿನಿಮಾ ಬಗ್ಗೆ ಮಾತನಾಡಿದ್ದಾರೆ.

ರೈತನ ಹೋರಾಟದ ಕಥೆ ಕ್ಷೇತ್ರಪತಿ!
ಕ್ಷೇತ್ರಪತಿ ಎಂದರೆ ಸಂಕ್ಕೃತದಲ್ಲಿ ರೈತ ಎನ್ನುವ ಅರ್ಥ ಬರುತ್ತಂತೆ ಹಾಗಾಗಿ ಈ ಹೋರಟದ ಕಥೆ ಇದೇ ಟೈಟಲ್ ಇಟ್ಟಿರುವುದಾಗಿ ನಿರ್ದೇಶಕ ಶ್ರೀಕಾಂತ್ ಕಟಗಿ ಹೇಳಿದ್ದಾರೆ. ಇದೊಂದು ಅಪ್ಪ-ಮಗನ ಭಾಂದವ್ಯವನ್ನು ಸಾರುವ ಸಿನಿಮಾ. ಜೊತೆಗೆ ಅನಿರೀಕ್ಷಿತವಾಗಿ ಬರುವ ಸನ್ನಿವೇಷದಿಂದ ನಾಯಕ ಏನಾಗುತ್ತಾನೆ ಎನ್ನುವುದನ್ನು ಹೇಳಲಾಗಿದೆಯಂತೆ.


Click it and Unblock the Notifications











