»   » ಚಾಲೆಂಜಿಂಗ್ ಸ್ಟಾರ್ ಗೆ ಚಾಲೆಂಜ್ ಮಾಡಿದ ಅರಣ್ಯಾಧಿಕಾರಿಗಳು

ಚಾಲೆಂಜಿಂಗ್ ಸ್ಟಾರ್ ಗೆ ಚಾಲೆಂಜ್ ಮಾಡಿದ ಅರಣ್ಯಾಧಿಕಾರಿಗಳು

Posted By:
Subscribe to Filmibeat Kannada

ಮಾಲಾಧಾರಿಯಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಸ್ನೇಹಿತರ ಜೊತೆ ಇತ್ತೀಚೆಗೆ ಶಬರಿಮಲೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಮಾರ್ಗ ಮಧ್ಯೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನಲ್ಲಿರುವ ಹಿಮವತ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಲು ಮುಂದಾದ ವೇಳೆ ಅರಣ್ಯಾಧಿಕಾರಿಗಳು ತಡೆಗಟ್ಟಿರುವ ಘಟನೆ ನಡೆದಿದೆ.

ಎರಡು ಕಾರುಗಳಲ್ಲಿ ದರ್ಶನ್ ಮತ್ತು ಅವರ ಸ್ನೇಹಿತರು ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಲು ಮುಂದಾದಾಗ ಅಧಿಕಾರಿಗಳು ತಡೆಗಟ್ಟಿದ್ದಾರೆ.[ಒಂದೇ ದಿನದಲ್ಲಿ 3 ಬಿರುದು ದಕ್ಕಿಸಿಕೊಂಡ ಚಾಲೆಂಜಿಂಗ್ ಸ್ಟಾರ್]

Gundlupet Forest Officers Stopped Kannada Actor Darshan's Car

ಹುಲಿ ಸಂರಕ್ಷಿತ ಪ್ರದೇಶವಾದ್ದರಿಂದ ಖಾಸಗಿ ವಾಹನಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಬೇಕಿದ್ದರೆ ಅರಣ್ಯ ಇಲಾಖೆಯ ವಾಹನದಲ್ಲಿ ಬೆಟ್ಟಕ್ಕೆ ಹೋಗಿ ಎಂದು ಅಧಿಕಾರಿಗಳು ಸಲಹೆ ನೀಡಿದರು.

Gundlupet Forest Officers Stopped Kannada Actor Darshan's Car

ಆದರೆ ಇದನ್ನು ನಿರಾಕರಿಸಿದ ನಟ ದರ್ಶನ್ ಮತ್ತು ಅವರ ಸ್ನೇಹಿತರು ತಮ್ಮ ವಾಹನದಲ್ಲೇ ಬೆಟ್ಟಕ್ಕೆ ಹೋಗಲು ಅವಕಾಶ ನೀಡಬೇಕೆಂದು ಮನವಿ ಮಾಡಿದ್ದರು ಎನ್ನಲಾಗಿದೆ.[ವಿಷ್ಣುದಾದಾ' ಜೊತೆ 'ಜಗ್ಗುದಾದಾ', ಗಣಿ, ಪ್ರೇಮ್ ಸೂಪರ್ ಸೆಲ್ಫಿ.!]

Gundlupet Forest Officers Stopped Kannada Actor Darshan's Car

ಇದನ್ನು ಅಧಿಕಾರಿಗಳು ನಿರಾಕರಿಸಿದ ಕಾರಣ ಕೊನೆಗೆ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗದೆ ತಮ್ಮ ವಾಹನಗಳಲ್ಲಿ ನೇರವಾಗಿ ಕೇರಳಕ್ಕೆ ತೆರಳಿದರು ಎಂದು ತಿಳಿದುಬಂದಿದೆ.

ಮೇ 12 ರಂದು ನಟ ದರ್ಶನ್ ಅವರು ಶ್ರೀರಾಂಪುರದಲ್ಲಿರುವ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಶಬರಿಮಲೆ ಅಯ್ಯಪ್ಪ ಮಾಲೆ ಧರಿಸಿ ಮಾಲಾಧಾರಿಯಾಗಿದ್ದರು.

English summary
Gundlupet Forest Officers Stopped Kannada Actor Darshan and his friends Car near Himavad Gopalaswamy Temple gate and told him to go in the department vehicle.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada