ಬಂದೂಕು, ಬೆಡಗು, ಬೆರಗು ; ರಾಕಿ ಅಡ್ಡೆಗೆ ಬಂದ ಲೇಡಿ ಸೂಪರ್ ಸ್ಟಾರ್- ಟಾಕ್ಸಿಕ್‌ನಲ್ಲಿ 'ಗಂಗಾ'ರತಿ..!

ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಪುರುಷ ಪ್ರಧಾನ ಚಿತ್ರರಂಗದಲ್ಲಿ ನಾಯಕರದ್ದೇ ಕಾರುಬಾರು ಇತ್ತು. ಸಂಭಾವನೆ ವಿಚಾರದಲ್ಲಿಯೂ ನಾಯಕಿಯರಿಗೆ ಆಗ್ತಿದ್ದಿದ್ದು ಅನ್ಯಾಯನೇ. ನಾಯಕರಿಗೆ ಕೊಡಲಾಗುತ್ತಿದ್ದ ಸಂಭಾವನೆಯ ಅರ್ಧದಷ್ಟು ಹಣ ನಾಯಕಿಗೆ ಕೊಡಲು ಹಿಂದೇಟು ಹಾಕ್ತಿದ್ದ ಕಾಲ ಅದು. ಆದರೆ ಈಗ ಕಾಲ ಪರಿಸ್ಥಿತಿ ಬದಲಾಗಿದೆ. ಅಲ್ಲೊಬ್ಬರು .. ಇಲ್ಲೊಬ್ಬರು .. ನಾಯಕರಿಗೆ ಸರಿಸಮಾನವಾಗಿ ಸಂಭಾವನೆ ಪಡೆಯುತ್ತಿದ್ದಾರೆ.

ಇನ್ನೂ ಕೆಲವರು ನಾಯಕರಿಗೆ ಎಣಿಸುವ ದುಡ್ಡಿಗಿಂತ ಹೆಚ್ಚಿನ ದುಡ್ಡನ್ನೂ ಎಣಿಸುತ್ತಿದ್ದಾರೆ. ಆ ಪೈಕಿ ನಯನತಾರಾ ಕೂಡ ಒಬ್ಬರು. ಇಂಥಾ ನಯನತಾರ ''ಟಾಕ್ಸಿಕ್'' ಚಿತ್ರದಲ್ಲಿ ಯಶ್ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಹೊರ ಬಂದಾಗ ರಾಕಿ ಭಕ್ತಗಣ ಹುಚ್ಚೆದ್ದು ಕುಣಿದಿತ್ತು. ಲೇಡಿ ಸೂಪರ್ ಸ್ಟಾರ್ ಅಭಿಮಾನಿ ಬಳಗ ಕೇಕೆ ಹಾಕಿತ್ತು. ಈಗ ಅಭಿಮಾನಿಗಳ ಈ ಸದ್ದು-ಸಂಭ್ರಮ ಇನ್ನೂ ಹೆಚ್ಚಾಗಿದೆ. ಚಿತ್ರದ ಮೇಲೀನ ನಿರೀಕ್ಷೆ ಕೂಡ ಇನ್ನೂ ಹೆಚ್ಚಾಗಿದೆ. ಅದಕ್ಕೆ ಕಾರಣ ನಯನತಾರಾ ಅವರ ಪಾತ್ರ ಪರಿಚಯ.

Guns Grace and Ganga Nayanthara Unveils a Lethal New Avatar in Yash s Toxic

ಹೌದು, ಎಲ್ಲರಿಗೆ ಗೊತ್ತಿರುವಂತೆ ಕಳೆದ ಕೆಲ ದಿನಗಳಿಂದ ಟಾಕ್ಸಿಕ್ ಅಂಗಳದಲ್ಲಿರುವ ಮುಖಗಳನ್ನು ಪರಿಚಯ ಮಾಡಿಸುವ ಕಾರ್ಯಕ್ರಮವನ್ನು ಯಶ್ ಹಮ್ಮಿಕೊಂಡಿದ್ದಾರೆ. ಈಗಾಗಲೇ ತಮ್ಮ ಚಿತ್ರದ ಎಲಿಜಬೆತ್ ( ಹುಮಾ ಖುರೇಶಿ ) ಮತ್ತು ನಾಡಿಯಾ ( ಕಿಯಾರಾ ಅಡ್ವಾಣಿ ) ಅವರನ್ನು ಪರಿಚಯ ಮಾಡಿಸಿದ್ದಾರೆ. ಈಗ ನಯನತಾರಾ ಸರದಿ.

ನಯನತಾರ ಈ ಚಿತ್ರದಲ್ಲಿ ಗಂಗಾ ಪಾತ್ರವನ್ನು ಮಾಡಿದ್ದಾರೆ. ಬಂದೂಕು ಹಿಡಿದು ಕಣ್ಣೇದುರು ಬಂದಿದ್ದಾರೆ. ಈ ಬಂದೂಕಿಗೆ ಗುರಿಯಾಗುವುದು ಯಾರು..? ಎನ್ನುವುದು ಸದ್ಯದ ಪ್ರಶ್ನೆ. ಯಾಕೆಂದರೆ.. ಗಂಗಾ ಇಲ್ಲಿ ರಾಕಿಯ ಸ್ನೇಹಿತೆಯೂ ಆಗಿರಬಹುದು. ಜಾನಿ ದುಷ್ಮನ್ ಕೂಡ ಆಗಿರಬಹುದು. ನಿಜಕ್ಕೂ ಗಂಗಾ ಯಾರು..? ಇನ್ನೇಕು ಕೆಲವೇ ದಿನಗಳಲ್ಲಿ ಈ ಪ್ರಶ್ನೆಗೆ ಉತ್ತರ ಸಿಗಲಿದೆಯಾದರು ಸದ್ಯ ಗಂಗಾ ಬೆಡಗು ಹಲವರನ್ನು ಬೆರಗಾಗಿಸಿದೆ. ಫಸ್ಟ್ ಲುಕ್ ಕಿಕ್ ಕೊಡುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

guns-grace-and-ganga-nayanthara-unveils-a-lethal-new-avatar-in-yash-s-toxic

ಇನ್ನು ಬಹುತೇಕರಿಗೆ ಗೊತ್ತಿರುವಂತೆ ಜನವರಿ 8 ನಟ ಯಶ್ ಜನ್ಮದಿನ. ಈ ಹಿನ್ನೆಲೆ ಈಗಿಂದಲೇ ಒಂದೊಂದೇ ಪೋಸ್ಟರ್‌ಗಳನ್ನು ಬಿಡುವ ಮೂಲಕ ಅಭಿಮಾನಿಗಳ ಕಾಯುವಿಕೆ ಹೆಚ್ಚಿಸುತ್ತಲೇ ಚಿತ್ರದ ಪ್ರಚಾರಕ್ಕೆ ಕೂಡ ಚಾಲನೆ ನೀಡಿರುವ ಯಶ್, ತಮ್ಮ ಜನ್ಮದಿನದಂದು ಚಿತ್ರದ ಟೀಸರ್‌ನ ತಮ್ಮ ಸಮಸ್ತ ಅಭಿಮಾನಿ ಮತ್ತು ಚಿತ್ರಪ್ರೇಮಿಗಳ ಮಡಿಲಿಗೆ ಹಾಕುವ ನಿರೀಕ್ಷೆ ಇದೆ.

ಅಂದ್ಹಾಗೇ ಯಶ್ ಈ ಬಾರಿ ಬಾಕ್ಸ್ ಆಫೀಸ್ ದಾಖಲೆಗಳನ್ನು ಬೆನ್ನತ್ತಿದಂತೆ ಕಾಣುತ್ತಿಲ್ಲ. ಬದಲಿಗೆ ಪ್ರೇಕ್ಷಕರ ಮನಸಿನಲ್ಲಿ ಶಾಶ್ವತವಾಗಿ ಅಚ್ಚಳಿಯದೇ ಉಳಿಯುವಂತಹ ಸಿನಿಮಾ ಮಾಡುವ ಪ್ರಯತ್ನವನ್ನು ಮಾಡಿದಂತೆ ಇದೆ. ಈಗಾಗಲೇ ಬಿಡುಗಡೆಯಾಗಿರುವ ನಾಯಕಿಯರ ಮೂರು ಫಸ್ಟ್ ಲುಕ್ ಪೋಸ್ಟರ್‌ಗಳು ಇಂತಹದ್ದೊಂದು ಸೂಚನೆಯನ್ನೇ ನೀಡುತ್ತಿವೆ.

ಇನ್ನುಳಿದಂತೆ ರಾಷ್ಟ್ರ ಪ್ರಶಸ್ತಿ ವಿಜೇತ ಕ್ಯಾಮರಾಮ್ಯಾನ್ ರಾಜೀವ್ ರವಿ ಈ ಚಿತ್ರವನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದ್ದಾರೆ. ರವಿ ಬಸ್ರೂರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಉಜ್ವಲ್ ಕುಲಕರ್ಣಿ ಸಂಕಲನ ಮತ್ತು ಟಿ ಪಿ ಅಬಿದ್ ನಿರ್ಮಾಣ ವಿನ್ಯಾಸ ಚಿತ್ರಕ್ಕಿದ್ದು ಹಾಲಿವುಡ್ ಸಾಹಸ ನಿರ್ದೇಶಕ ಜೆಜೆ ಪೆರ್ರಿ (ಜಾನ್ ವಿಕ್) ಮತ್ತು ಅನ್ಬರಿವ್ ಈ ಚಿತ್ರದ ಸಾಹಸ ಸನ್ನಿವೇಶಗಳನ್ನು ಸಂಯೋಜನೆ ಮಾಡಿದ್ದಾರೆ. ಕನ್ನಡ ಮತ್ತು ಇಂಗ್ಲೀಷ್‌ನಲ್ಲಿ ಏಕಕಾಲಕ್ಕೆ ಈ ಚಿತ್ರದ ಚಿತ್ರೀಕರಣ ನಡೆದಿರುವುದು ವಿಶೇಷ. ಬೇರೆ ಭಾಷೆಗಳಿಗೆ ಡಬ್ ಆಗಿ ಈ ಚಿತ್ರ ತೆರೆಗೆ ಬರಲಿದೆ. ಮಾರ್ಚ್ 19ರಂದು ಬೆಳ್ಳಿಪರದೆಯ ಮೇಲೆ ''ಟಾಕ್ಸಿಕ್'' ಧಗಧಗಿಸಲಿದೆ.

More from Filmibeat

English summary
Who is Ganga? Nayanthara joins the world of Toxic with a lethal new look. Check out the official first look poster and get ready for the March 19 release!
Read more about: nayanthara yash toxic
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X