ಗುರು ದೇಶಪಾಂಡೆ 'ರಾಜಾಹುಲಿ'ಯ ರುದ್ರತಾಂಡವ
ಒಬ್ಬ ನಿರ್ದೇಶಕ ಯಶಸ್ವಿ ಸಿನಿಮಾ ಕೊಟ್ಟಾಗ ಆ ನಿರ್ದೇಶಕನ ಮುಂದಿನ ಸಿನಿಮಾದ ಬಗ್ಗೆ ನಿರೀಕ್ಷೆಗಳು ಹೆಚ್ಚಾಗೋದು ಸಹಜ. 2013ರ ಯಶಸ್ವಿ ಚಿತ್ರ 'ರಾಜಾಹುಲಿ' 75 ದಿನ ಪೂರೈಸ್ತಾ ಇರೋ ಸಂದರ್ಭದಲ್ಲಿ ನಿರ್ದೇಶಕ ಗುರು ದೇಶಪಾಂಡೆಯವರು ತಮ್ಮ ಮುಂದಿನ ಸಿನಿಮಾದ ಬಗ್ಗೆ ದೊಡ್ಡ ತಯಾರಿ ನಡೆಸಿದ್ದಾರೆ.
ಗುರು ದೇಶಪಾಂಡೆಯವರ ಮುಂದಿನ ಸಿನಿಮಾದ ಟೈಟಲ್ 'ರುದ್ರತಾಂಡವ'. ಚಿತ್ರದ ತಾರಾಗಣದ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ. 'ರಾಜಾಹುಲಿ' ನೂರುದಿನ ಪೂರೈಸಿದ ದಿನ ಅಂದರೆ ಫೆಬ್ರವರಿ ಎಂಟರಂದು 'ರುದ್ರತಾಂಡವ' ಟೈಟಲನ್ನ ಲಾಂಚ್ ಮಾಡಲಿದ್ದಾರೆ. ['ರಾಜಾಹುಲಿ' ಚಿತ್ರ ವಿಮರ್ಶೆ]
ರುದ್ರತಾಂಡವವಾಡೋ ನಟ ಯಾರು ಅನ್ನೋದು ಸದ್ಯಕ್ಕೆ ತಿಳಿದಿಲ್ಲ. ರೀಮೇಕ್ ಸಿನಿಮಾ ಮಾಡಿ ಶತಕ ಹೊಡೆಯಲಿರೋ ನಿರ್ದೇಶಕರು ಮತ್ತೊಂದು ರೀಮೇಕ್ ಸಬ್ಜೆಕ್ಟನ್ನೇ ತೆಗೆದುಕೊಂಡಿದ್ದಾರೋ ಗೊತ್ತಿಲ್ಲ. ಆದ್ರೆ ಚಿತ್ರಕ್ಕೆ ಮತ್ತೊಬ್ಬ ಸ್ಟಾರ್ ನಟನನ್ನೇ ಕ್ಯಾಚ್ ಮಾಡಿರೋದು ಗ್ಯಾರಂಟಿ ಅಂತಿದೆ ಗಾಂಧಿನಗರ.ಇನ್ನು ರುದ್ರತಾಂಡವ ಟೈಟಲ್ ನ ಮೂಲಕ ಔಟ್ ಅಂಡ್ ಔಟ್ ಆಕ್ಷನ್ ಚಿತ್ರ ಮಾಡೋ ಸೂಚನೆ ಕೊಟ್ಟಿರೋ ನಿರ್ದೇಶಕರು ಸದ್ಯದಲ್ಲೇ ಹೆಚ್ಚಿನ ಮಾಹಿತಿಯನ್ನ ಕೊಡಲಿದ್ದಾರಂತೆ. ಅಲ್ಲಿಯವರೆಗೂ ವೇಯ್ಟ್ ಅಂಡ್ ವಾಚ್.
More from Filmibeat
English summary
Guru Deshapande's Raja Huli movie completes 75 days. At the same time the director announced his next project titled as Rudra Tandava. The cast and crew yet to be finalized.


Click it and Unblock the Notifications












