ಕಿಚ್ಚ ಸುದೀಪ್ ಗೆ ಮೊದಲು ಮೇಕಪ್ ಹಾಕಿದ್ದು ಇದೇ ವ್ಯಕ್ತಿ
Recommended Video
ಕಿಚ್ಚನ ಮೊದಲ ಚಿತ್ರದ ಮೇಕಪ್ ಮ್ಯಾನ್ ಯಾರು ಗೊತ್ತಾ..? | Sudeep | Filmibeat Kannada
ನಟ ಕಿಚ್ಚ ಸುದೀಪ್ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಒಂದು ಅಪರೂಪದ ವಿಡಿಯೋ ಹಂಚಿಕೊಂಡಿದ್ದಾರೆ. ತಮಗೆ ಮೊದಲು ಮೇಕಪ್ ಹಾಕಿದ್ದ ವ್ಯಕ್ತಿಯನ್ನು ಪರಿಚಯ ಮಾಡಿದ್ದಾರೆ.
1996 ಸುದೀಪ್ ಮೊದಲು ತಮ್ಮ ಮುಖಕ್ಕೆ ಮೇಕಪ್ ಹಾಕಿ, ಕ್ಯಾಮರಾ ಮುಂದೆ ಬಂದು ನಿಂತ ವರ್ಷ. ಕಂಠೀರವ ಸ್ಟೂಡಿಯೋದಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಆಗ ಗುರು ಮೂರ್ತಿ ಎನ್ನುವವರು ಸುದೀಪ್ ಗೆ ಮೇಕಪ್ ಮಾಡಿದ್ದರು.
ಅಂದಿನಿಂದ ಹಿಡಿದು ಇಂದಿನವರೆಗೆ ಗುರು ಮೂರ್ತಿ ಅವರೇ ಸುದೀಪ್ ಗೆ ಮೇಕಪ್ ಮಾಡುತ್ತಿದ್ದಾರೆ. ಈ ವಿಷಯವನ್ನು ಸುದೀಪ್ ವಿಡಿಯೋ ಮೂಲಕ ತಿಳಿಸಿದ್ದಾರೆ.

ಸುದೀಪ್ ಯಾವ ಸಿನಿಮಾದ ಚಿತ್ರೀಕರಣಕ್ಕಾಗಿ ಮೇಕಪ್ ಹಾಕಿದ್ದು, ಎನ್ನುವದನ್ನು ಇಲ್ಲಿ ತಿಳಿಸಿಲ್ಲ. 1996 ಅಂದರೆ ಆ ಸಮಯದಲ್ಲಿ ಅವರು 'ಬ್ರಹ್ಮ' ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದರು. ಇದು ಅವರ ಮೊದಲ ಸಿನಿಮಾ ಆಗಿತ್ತು.
ಇಂದು ಸೂಪರ್ ಸ್ಟಾರ್ ಆಗಿ, ಮೂರ್ನಾಲ್ಕು ಭಾಷೆಗಳಲ್ಲಿ ಮಿಂಚಿರುವ ಸುದೀಪ್ ತಮಗೆ ಮೊದಲು ಬಣ್ಣ ಹಾಕಿದ ವ್ಯಕ್ತಿಯನ್ನು ಮರೆತಿಲ್ಲ ಎನ್ನುವುದು ಮೆಚ್ಚುವ ವಿಷಯ.
English summary
Guru Murty a make up person for Sudeep then and now.


Click it and Unblock the Notifications