For Quick Alerts
  ALLOW NOTIFICATIONS  
  For Daily Alerts

  ಗುರು ಶಿಷ್ಯರು ಬಿಡುಗಡೆಗೆ ಇನ್ನೆರಡೇ ದಿನ ಬಾಕಿ; ಅಡ್ವಾನ್ಸ್ ಬುಕ್ಕಿಂಗ್ ಶುರು

  |

  ಚಿತ್ರರಂಗಕ್ಕೆ ಹಾಸ್ಯ ನಟನಾಗಿ ಎಂಟ್ರಿ ಕೊಟ್ಟು ಇದೀಗ ನಾಯಕ ನಟನಾಗಿ ಹಲವಾರು ಚಿತ್ರಗಳಲ್ಲಿ ಅಭಿನಯಿಸಿರುವ ಶರಣ್ ಗುರು ಶಿಷ್ಯರು ಚಿತ್ರದಲ್ಲಿ ಶಿಕ್ಷಕನ ಪಾತ್ರದಲ್ಲಿ ಅಭಿನಯಿಸಿದ್ದಾರೆ.

  ಈ ಚಿತ್ರದಲ್ಲಿ ಶರಣ್ ಶಿಕ್ಷಕನಾದರೆ 12 ಹುಡುಗರ ಪ್ರಮುಖ ಪಾತ್ರಗಳು ಸಹ ಚಿತ್ರದಲ್ಲಿರಲಿವೆ. ನೆನಪಿರಲಿ ಪ್ರೇಮ್, ಶರಣ್, ನವೀನ್ ಕೃಷ್ಣ, ರವಿಶಂಕರ್ ಗೌಡ ಹಾಗೂ ಬುಲೆಟ್ ಪ್ರಕಾಶ್ ಈ ನಟರ ಪುತ್ರರು ಸಹ ಈ ಹನ್ನೆರಡು ವಿದ್ಯಾರ್ಥಿಗಳ ಪಾತ್ರಗಳ ಪೈಕಿ 6 ಪಾತ್ರಗಳಲ್ಲಿ ಅಭಿನಯ ಮಾಡಿದ್ದಾರೆ.

  ಇನ್ನು ಈ ಚಿತ್ರದ ಹಾಡುಗಳು ಹಾಗೂ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದ್ದು ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡು, ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಾಗುವಂತೆ ಮಾಡಿವೆ. ಚಿತ್ರ ಇದೇ ಶುಕ್ರವಾರದಂದು ( ಸೆಪ್ಟೆಂಬರ್ 23 ) ರಾಜ್ಯಾದ್ಯಂತ ಭರ್ಜರಿಯಾಗಿ ಬಿಡುಗಡೆಯಾಗಲಿದ್ದು, ಚಿತ್ರದ ಮುಂಗಡ ಬುಕಿಂಗ್ ಇಂದಿನಿಂದ ( ಸೆಪ್ಟೆಂಬರ್ 21 ) ಎಲ್ಲೆಡೆ ಆರಂಭವಾಗಿದೆ.

  ಗುರು ಶಿಷ್ಯರು ಬಿಡುಗಡೆಯಾಗಲಿರುವ ಪ್ರಮುಖ ಚಿತ್ರಮಂದಿರ ನರ್ತಕಿ, ಊರ್ವಶಿ ಸೇರಿದಂತೆ ಬೆಂಗಳೂರಿನ ಹಲವಾರು ಮಲ್ಟಿಫ್ಲೆಕ್ಸ್ ಹಾಗೂ ಏಕ ಪರದೆಗಳ ಚಿತ್ರಮಂದಿರಗಳಲ್ಲಿ ಮುಂಗಡ ಬುಕ್ಕಿಂಗ್ ಆರಂಭಗೊಂಡಿದ್ದು ಪ್ರೇಕ್ಷಕರು ಟಿಕೆಟ್ ಬುಕ್ ಮಾಡಲು ಲಭ್ಯವಿರುವ ವಿಭಿನ್ನ ಅಪ್ಲಿಕೇಷನ್ ಮೂಲಕ ಟಿಕೇಟ್ ಖರೀದಿ ಮಾಡಬಹುದಾಗಿದೆ. ನರ್ತಕಿ ಚಿತ್ರಮಂದಿರದ ಮೊದಲ ಶೋ ನ ಬುಕಿಂಗ್ ಉತ್ತಮವಾಗಿ ನಡೆಯುತ್ತಿದ್ದು, ನಾಳೆ ಮಧ್ಯಾಹ್ನದೊಳಗೆ ಸೋಲ್ಡ್ ಔಟ್ ಆಗುವ ಸಾಧ್ಯತೆಗಳಿವೆ.

  ಸದ್ಯ ಈ ಸಮಯಕ್ಕೆ ಮೈಸೂರಿನ ಡಿಆರ್ ಸಿ, ಐನಾಕ್ಸ್ ಹಾಗೂ ಗಾಯತ್ರಿ ಚಿತ್ರಮಂದಿರಗಳಲ್ಲಿ ಗುರು ಶಿಷ್ಯರು ಚಿತ್ರದ ಮುಂಗಡ ಬುಕ್ಕಿಂಗ್ ಆರಂಭಗೊಂಡಿದೆ. ಬೆಂಗಳೂರು ಹಾಗೂ ಮೈಸೂರು ಮಾತ್ರವಲ್ಲದೆ ರಾಜ್ಯದ ವಿವಿಧ ಪ್ರಮುಖ ನಗರಗಳಲ್ಲಿಯೂ ಸಹ ಗುರು ಶಿಷ್ಯರು ಚಿತ್ರದ ಅಡ್ವಾನ್ಸ್ ಬುಕಿಂಗ್ ತೆರೆದಿದೆ.

  ಈ ಚಿತ್ರಕ್ಕೆ ನಾಯಕ ಶರಣ್ ಹಾಗೂ ತರುಣ್ ಸುಧೀರ್ ಬಂಡವಾಳವನ್ನು ಹೂಡಿದ್ದು, ನಿಶ್ವಿಕಾ ನಾಯ್ಡು ನಾಯಕಿಯಾಗಿ ಅಭಿನಯಿಸಿದ್ದಾರೆ ಮತ್ತು ಪ್ರಜ್ವಲ್ ದೇವರಾಜ್ ಅವರಿಗೆ ಜೆಂಟಲ್ ಮನ್ ರೀತಿಯ ಉತ್ತಮ ಚಿತ್ರ ನಿರ್ದೇಶನ ಮಾಡಿದ್ದ ಜಡೇಶ್ ಕುಮಾರ್ ಹಂಪಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

  English summary
  Guru Shishyaru advance booking opens in major cities of Karnataka
  Wednesday, September 21, 2022, 21:27
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X