For Quick Alerts
  ALLOW NOTIFICATIONS  
  For Daily Alerts

  ಯಾವುದೇ ಕಟ್, ಮ್ಯೂಟ್ ಇಲ್ಲದೇ ಕ್ಲೀನ್ 'ಯು ಸರ್ಟಿಫಿಕೇಟ್' ಪಡೆದ ಗುರು ಶಿಷ್ಯರು; ಫ್ಯಾಮಿಲಿ ಸಮೇತ ನೋಡ್ಬಿಡಿ

  |

  ನಿರ್ದೇಶಕ ತರುಣ್ ಸುಧೀರ್ ಇದೇ ಮೊದಲ ಬಾರಿಗೆ ನಿರ್ಮಾಪಕನಾಗಿ ನಿರ್ಮಿಸಿರುವ ಚಿತ್ರ ಗುರು ಶಿಷ್ಯರು ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಈ ಚಿತ್ರಕ್ಕೆ ನಟ ಶರಣ್ ನಾಯಕನಾಗಿದ್ದು, ನಿರ್ಮಾಣದಲ್ಲಿ ತರುಣ್ ಸುಧೀರ್ ಜೊತೆ ಕೈಜೋಡಿಸಿದ್ದಾರೆ.

  ಪ್ರಜ್ವಲ್ ದೇವರಾಜ್ ಅವರಿಗೆ ಜೆಂಟಲ್ ಮನ್ ರೀತಿಯ ಉತ್ತಮ ಚಿತ್ರ ಕಟ್ಟಿಕೊಟ್ಟಿದ್ದ ನಿರ್ದೇಶಕ ಜಡೇಶ್ ಕುಮಾರ್ ಹಂಪಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಪ್ರತಿಭಾವಂತರೇ ಇರುವ ಈ ತಂಡದ ಮೇಲೆ ಪ್ರೇಕ್ಷಕರಿಗೆ ದೊಡ್ಡಮಟ್ಟದಲ್ಲಿಯೇ ನಿರೀಕ್ಷೆ ಇದೆ. ಕಳೆದ ವರ್ಷ ಬಿಡುಗಡೆಯಾಗಿದ್ದ ಅವತಾರ ಪುರುಷ ಸಿನಿಮಾ ಮೂಲಕ ನಿರೀಕ್ಷಿಸಿದ್ದ ಮ್ಯಾಜಿಕ್ ಮಾಡುವಲ್ಲಿ ವಿಫಲರಾದ ಶರಣ್ ಈ ಚಿತ್ರದ ಮೂಲಕ ದೊಡ್ಡ ಮಟ್ಟದಲ್ಲಿ ಕಮ್ ಬ್ಯಾಕ್ ಮಾಡುವತ್ತ ಕಣ್ಣಿಟ್ಟಿದ್ದಾರೆ.

  ಸದ್ಯ ಈ ಚಿತ್ರದ ಸೆನ್ಸಾರ್ ಇಂದು ( ಸೆಪ್ಟೆಂಬರ್ 17 ) ನಡೆದಿದ್ದು ಸೆನ್ಸಾರ್ ಮಂಡಳಿ ಚಿತ್ರದ ಯಾವುದೇ ದೃಶ್ಯಕ್ಕೂ ಕತ್ತರಿ ಹಾಕದೇ, ಯಾವುದೇ ಸಂಭಾಷಣೆಗೂ ಬೀಪ್ ಸೌಂಡ್ ಇಡದೇ ಸ್ವಚ್ಚ ಯು ಸರ್ಟಿಫಿಕೇಟ್ ನೀಡಿದೆ. ಈ ವಿಷಯವನ್ನು ನಟ ಶರಣ್ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡಿದ್ದು, ಚಿತ್ರ ಇದೇ ತಿಂಗಳ 23ರಂದು ಬಿಡುಗಡೆಯಾಗಲಿದೆ.

  ಇನ್ನು ಈ ಚಿತ್ರದಲ್ಲಿ ನಟ ಶರಣ್ ಗುರುವಾಗಿ ಕಾಣಿಸಿಕೊಂಡಿದ್ದರೆ, 12 ಮಕ್ಕಳು ಶಿಷ್ಯರಾಗಿ ಅಭಿನಯಿಸಿದ್ದಾರೆ. ಈ ಪೈಕಿ ನೆನಪಿರಲಿ ಪ್ರೇಮ್, ಬುಲೆಟ್ ಪ್ರಕಾಶ್, ಶರಣ್, ರವಿಶಂಕರ್ ಗೌಡ ಹಾಗೂ ನವೀನ್ ಕೃಷ್ಣ ಅವರ ಪುತ್ರರೂ ಸಹ ಅಭಿನಯಿಸಿದ್ದಾರೆ. ಚಿತ್ರದಲ್ಲಿ ನಟಿ ನಿಶ್ವಿಕಾ ನಾಯ್ಡು ಸೂಜಿ ಪಾತ್ರವನ್ನು ನಿರ್ವಹಿಸಿದ್ದು, ಅಜನೀಶ್ ಬಿ ಲೋಕನಾಥ್ ಸಂಗೀತ ಚಿತ್ರಕ್ಕಿದೆ. ಈಗಾಗಲೇ ಚಿತ್ರದ ಟ್ರೈಲರ್ ಮತ್ತು ಹಾಡುಗಳಿಂದ ಸಾಕಷ್ಟು ಸದ್ದು ಮಾಡುತ್ತಿದ್ದು, ಒಂದು ಮಟ್ಟದ ನಿರೀಕ್ಷೆಯನ್ನು ಹುಟ್ಟಿಸಿದೆ.

  ಸದ್ಯ ಯಾವುದೇ ಕಟ್ ಹಾಗೂ ಮ್ಯೂಟ್ ಇಲ್ಲದೇ ಯು ಸರ್ಟಿಫಿಕೇಟ್ ಪಡೆದುಕೊಂಡಿರುವ ಗುರುಶಿಷ್ಯರು ಚಿತ್ರವನ್ನು ಫ್ಯಾಮಿಲಿ ಸಮೇತ ಕುಳಿತು ವೀಕ್ಷಿಸಬಹುದು ಎಂಬ ವಿಷಯ ಖಾತರಿಯಾಗಿದ್ದು, ಮುಂದಿನ ವಾರದಿಂದ ಗುರುಶಿಷ್ಯರ ಆಟವನ್ನು ಬೆಳ್ಳಿತೆರೆ ಮೇಲೆ ನೋಡಬಹುದಾಗಿದೆ.

  English summary
  Guru Shishyaru got clean U certificate from the censor board without any mute and cut. Read on
  Saturday, September 17, 2022, 15:25
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X