For Quick Alerts
  ALLOW NOTIFICATIONS  
  For Daily Alerts

  ಒಂದೇ ವಾರಕ್ಕೆ ಮುಖ್ಯ ಚಿತ್ರಮಂದಿರದಿಂದ ಗುರು ಶಿಷ್ಯರು ಔಟ್? ಬಿಡುಗಡೆಯಾಗಲಿದೆ ತಮಿಳು ಸಿನಿಮಾ!

  |

  ಗುರು ಶಿಷ್ಯರು ಕಳೆದ ಶುಕ್ರವಾರವಷ್ಟೇ ರಾಜ್ಯದಾದ್ಯಂತ ಭರ್ಜರಿಯಾಗಿ ಬಿಡುಗಡೆಯಾಗಿ ಒಳ್ಳೆಯ ವಿಮರ್ಶೆ ಪಡೆದುಕೊಂಡ ಸಿನಿಮಾ. ಶರಣ್ ಶಿಕ್ಷಕನಾಗಿ ಅಭಿನಯಿಸಿದ್ದ ಈ ಸಿನಿಮಾಗೆ ಜಂಟಲ್‌ಮನ್ ರೀತಿಯ ಹಿಟ್ ಚಿತ್ರ ನಿರ್ದೇಶಿಸಿದ್ದ ಜಡೇಶ್ ಕುಮಾರ್ ಹಂಪಿ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾಗೆ ಸ್ವತಃ ಶರಣ್ ಹಾಗೂ ತರುಣ್ ಸುಧೀರ್ ಬಂಡವಾಳ ಹೂಡಿದ್ದು, ನಿಶ್ವಿಕಾ ನಾಯ್ಡು ನಾಯಕಿಯಾಗಿ ಅಭಿನಯಿಸಿದ್ದಾರೆ.

  ಚಿತ್ರದಲ್ಲಿ ಶರಣ್ ಗುರುವಿನ ಪಾತ್ರದಲ್ಲಿ ಅಭಿನಯಿಸಿದ್ದರೆ ಶಿಷ್ಯಂದಿರ ಪಾತ್ರದಲ್ಲಿ ಕನ್ನಡದ ಸೆಲೆಬ್ರಿಟಿ ನಟರಾದ ಶರಣ್ ಪುತ್ರ, ನೆನಪಿರಲಿ ಪ್ರೇಮ್ ಪುತ್ರ, ರವಿಶಂಕರ್ ಗೌಡ ಪುತ್ರ, ಬುಲೆಟ್ ಪ್ರಕಾಶ್ ಪುತ್ರ ಹಾಗೂ ನವೀನ್ ಕೃಷ್ಣ ಪುತ್ರ ಸೇರಿದಂತೆ ಒಟ್ಟಾರೆ ಹದಿಮೂರು ಬಾಲನಟರು ಅಭಿನಯಿಸಿದ್ದಾರೆ. ಇನ್ನು ಈ ಚಿತ್ರ ಬೆಂಗಳೂರಿನ ನರ್ತಕಿ ಸೇರಿದಂತೆ ರಾಜ್ಯಾದಾದ್ಯಂತ ಭರ್ಜರಿಯಾಗಿ ಬಿಡುಗಡೆಗೊಂಡಿತ್ತು.

  ಇದೀಗ ಬಿಡುಗಡೆಯಾಗಿ ಒಂದೇ ವಾರಕ್ಕೆ ಗುರು ಶಿಷ್ಯರು ಸಿನಿಮಾ ನರ್ತಕಿಯಿಂದ ಹೊರಬೀಳಲಿದೆ ಎಂದು ಬುಕ್ ಮೈ ಶೋ ಅಪ್ಲಿಕೇಶನ್‌ನಲ್ಲಿ ತೋರಿಸಲಾಗಿದೆ. ಹೌದು, ಇದೇ ಶುಕ್ರವಾರ ( ಸೆಪ್ಟೆಂಬರ್ 30 ) ಮಣಿರತ್ನಂ ನಿರ್ದೇಶನದ ಬಿಗ್ ಬಜೆಟ್ ಸಿನಿಮಾ ಪೊನ್ನಿಯಿನ್ ಸೆಲ್ವನ್ ಬಿಡುಗಡೆಗೊಳ್ಳಲಿದ್ದು, ಈ ಚಿತ್ರದ ಬುಕಿಂಗ್ ನರ್ತಕಿ ಚಿತ್ರಮಂದಿರದಲ್ಲಿ ಓಪನ್ ಆಗಿದೆ.

  ಸೆಪ್ಟೆಂಬರ್ 30ರಂದು ಪೊನ್ನಿಯಿನ್ ಸೆಲ್ವನ್ ಚಿತ್ರದ ಕನ್ನಡ ಡಬ್ಬಿಂಗ್ ವರ್ಷನ್‌ನ ಬೆಳಗ್ಗಿನ ಆಟ ಹಾಗೂ ಮ್ಯಾಟನಿ ಶೋನ ಬುಕಿಂಗ್ ತೆರೆಯಲಾಗಿದೆ ಹಾಗೂ ಇದೇ ಚಿತ್ರದ ತೆಲುಗು ವರ್ಷನ್‌ನ ಸಂಜೆ ಹಾಗೂ ರಾತ್ರಿ ಪ್ರದರ್ಶನದ ಬುಕಿಂಗ್ ಅನ್ನೂ ಸಹ ಆರಂಭಿಸಲಾಗಿದೆ. ಈ ಮೂಲಕ ಗುರು ಶಿಷ್ಯರು ಸಿನಿಮಾ ಒಂದೇ ವಾರಕ್ಕೆ ಮುಖ್ಯ ಚಿತ್ರಮಂದಿರದಲ್ಲಿ ತನ್ನ ಆಟ ನಿಲ್ಲಿಸಲಿದೆ ಎಂಬ ವಿಷಯ ಬಹಿರಂಗವಾಗಿದೆ.

  ಸದ್ಯಕ್ಕೆ ಬೆಂಗಳೂರಿನಲ್ಲಿ ಪೊನ್ನಿಯಿನ್ ಸೆಲ್ವನ್ ಕನ್ನಡ ವರ್ಷನ್‌ಗೆ ಎರಡೇ ಶೋ: ಇನ್ನು ಬುಕ್ ಮೈ ಶೋನಲ್ಲಿ ಪೊನ್ನಿಯಿನ್ ಸೆಲ್ವನ್ ಚಿತ್ರದ ಕನ್ನಡ ವರ್ಷನ್‌ಗೆ ಬಿಡುಗಡೆ ದಿನ ಬೆಂಗಳೂರಿನಲ್ಲಿ ಕೇವಲ ಎರಡು ಶೋಗಳನ್ನು ಮಾತ್ರ ಆಯೋಜಿಸಲಾಗಿದೆ ಹಾಗೂ ತೆಲುಗು ವರ್ಷನ್ ಕೂಡ ಕನ್ನಡದಷ್ಟೇ ಶೋಗಳನ್ನು ಪಡೆದುಕೊಂಡಿದೆ. ಇನ್ನು ತಮಿಳು ಶೋಗಳ ಅಬ್ಬರ ಹೆಚ್ಚಿದ್ದು, ಪೊನ್ನಿಯಿನ್ ಸೆಲ್ವನ್ ತಮಿಳು ವರ್ಷನ್ ಅತಿಹೆಚ್ಚು ಶೋಗಳನ್ನು ಹೊಂದಿದೆ. ಹಾಗೂ ಇದೇ ದಿನದಂದು ಕನ್ನಡದ ಬಹು ನಿರೀಕ್ಷಿತ ಕಾಂತಾರ ಸಿನಿಮಾ ಕೂಡ ಬಿಡುಗಡೆಯಾಗುತ್ತಿದ್ದು, ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ಕಾಂತಾರ ಹಾಗೂ ಪೊನ್ನಿಯಿನ್ ಸೆಲ್ವನ್ ನಡುವೆ ಪೈಪೋಟಿ ಏರ್ಪಡುವುದಂತೂ ಪಕ್ಕಾ. ಅತ್ತ ಚೆನ್ನೈನಲ್ಲಿ ಕನ್ನಡದ ಕಾಂತಾರ ಸಿನಿಮಾಗೆ ಕೇವಲ ಒಂದು ಪ್ರೀಮಿಯರ್ ಶೋ ಹಾಗೂ ಬಿಡುಗಡೆ ದಿನ ಎರಡು ಶೋಗಳನ್ನು ಮಾತ್ರ ನೀಡಲಾಗಿದ್ದು, ಬಿಡುಗಡೆಯಾಗುವದರ ಒಳಗೆ ಇನ್ನೊಂದಷ್ಟು ಶೋಗಳು ಸಿಗಲಿವೆಯೋ ಕಾದು ನೋಡಬೇಕಿದೆ.

  English summary
  Guru Shishyaru to end it's run for 7 days at Narthaki theatre as Ponniyin Selvan is releasing this week. Know more
  Tuesday, September 27, 2022, 20:57
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X