ಬೆಂಗಳೂರಿನಲ್ಲಿ ಹೊಯ್ಸಳಕ್ಕಿಂತ ದಸರಾ, ಹಿಂದಿಯ ಭೋಲಾಗೆ ಹೆಚ್ಚು ಶೋಸ್! ಯಾವ ಚಿತ್ರ ಹೆಚ್ಚು ಸೋಲ್ಡ್‌ಔಟ್?

ಇಂದು ( ಮಾರ್ಚ್ 30 ) ಭಾರತ ಸಿನಿಮಾ ಕ್ಷೇತ್ರದ ವಿವಿಧ ಚಿತ್ರರಂಗಗಳ ಹಲವು ಚಿತ್ರಗಳು ತೆರೆಗೆ ಬಂದಿವೆ. ಕನ್ನಡದಲ್ಲಿ ಡಾಲಿ ಧನಂಜಯ್ ಹಾಗೂ ಅಮೃತಾ ಅಯ್ಯಂಗಾರ್ ನಟನೆಯ, ಕೆಆರ್‌ಜಿ ಸ್ಟುಡಿಯೊಸ್ ನಿರ್ಮಾಣದ ಬಹು ನಿರೀಕ್ಷಿತ ಸಿನಿಮಾ ಗುರುದೇವ್ ಹೊಯ್ಸಳ ತೆರೆಗೆ ಬಂದಿದೆ. ಇನ್ನು ತೆಲುಗಿನಲ್ಲಿ ನ್ಯಾಚುರಲ್ ಸ್ಟಾರ್ ನಾನಿ, ದಿಯಾ ಖ್ಯಾತಿಯ ನಟ ದೀಕ್ಷಿತ್ ಶೆಟ್ಟಿ ಹಾಗೂ ಕೀರ್ತಿ ಸುರೇಶ್ ನಟನೆಯ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ದಸರಾ ಬಿಡುಗಡೆಗೊಂಡಿದೆ.

ಕೇವಲ ಕನ್ನಡ ಹಾಗೂ ತೆಲುಗು ಮಾತ್ರವಲ್ಲದೇ ತಮಿಳು ಹಾಗೂ ಹಿಂದಿ ಭಾಷೆಯ ಸ್ಟಾರ್ ನಟರ ಚಿತ್ರಗಳೂ ಸಹ ಈ ರಾಮನವಮಿ ದಿನದಂದು ರಿಲೀಸ್ ಆಗಿವೆ. ತಮಿಳಿನ ಹಿಟ್ ಚಿತ್ರ ಖೈದಿಯ ಹಿಂದಿ ರಿಮೇಕ್ ಭೋಲಾ ಅಗಿ ಬಿಡಗಡೆಯಾಗಿದ್ದು, ಈ ಚಿತ್ರದಲ್ಲಿ ನಟ ಅಜಯ್ ದೇವಗನ್ ನಟನೆ ಜತೆಗೆ ನಿರ್ದೇಶನವನ್ನೂ ಸಹ ಮಾಡಿದ್ದಾರೆ. ಅತ್ತ ಕನ್ನಡದ ಸೂಪರ್ ಹಿಟ್ ಚಿತ್ರ ಮಫ್ತಿ ತಮಿಳಿಗೆ ಪತ್ತು ತಲ ಶೀರ್ಷಿಕೆ ಅಡಿಯಲ್ಲಿ ರಿಮೇಕ್ ಆಗಿದ್ದು, ಈ ಚಿತ್ರದಲ್ಲಿ ಶಿವ ರಾಜ್‌ಕುಮಾರ್ ನಿರ್ವಹಿಸಿದ್ದ ಭೈರತಿ ರಣಗಲ್ ಪಾತ್ರವನ್ನು ಸಿಳಂಬರಸ್ ನಿರ್ವಹಿಸಿದ್ದಾರೆ.

 Gurudev Hoysala got lesser shows than Dasara and Bholaa in Bengaluru on release day

ಹೀಗೆ ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾ ಇಂಡಸ್ಟ್ರಿಗಳ ನಾಲ್ಕು ಸ್ಟಾರ್ ನಟರ ಚಿತ್ರಗಳು ಇಂದು ಬಿಡುಗಡೆಯಾಗಿದ್ದು, ಎಲ್ಲಾ ಭಾಷೆಯ ಸಿನಿಮಾಗಳನ್ನು ಸಹ ವೀಕ್ಷಿಸುವಂತಹ ಸಿನಿ ರಸಿಕರು ಇರುವ ಬೆಂಗಳೂರಿನಲ್ಲಿ ಈ ಎಲ್ಲಾ ಚಿತ್ರಗಳೂ ಬಿಡುಗಡೆಯಾಗಿವೆ. ಹಾಗಿದ್ದರೆ ಈ ನಾಲ್ಕು ಚಿತ್ರಗಳ ಪೈಕಿ ಯಾವ ಚಿತ್ರಕ್ಕೆ ಮೊದಲ ದಿನ ಬೆಂಗಳೂರಿನಲ್ಲಿ ಹೆಚ್ಚು ಪ್ರದರ್ಶನಗಳು ದೊರಕಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

ಮಾರ್ಚ್ 30ರ ಗುರುವಾರದಂದು ಬೆಂಗಳೂರಿನಲ್ಲಿ ಚಿತ್ರಗಳು ಪಡೆದುಕೊಂಡಿರುವ ಪ್ರದರ್ಶನಗಳ ಸಂಖ್ಯೆ

* ದಸರಾ - 345 ಪ್ರದರ್ಶನಗಳು

* ಭೋಲಾ - 282 ಪ್ರದರ್ಶನಗಳು

* ಗುರುದೇವ್ ಹೊಯ್ಸಳ - 261 ಪ್ರದರ್ಶನಗಳು

* ಪತ್ತು ತಲ - 246 ಪ್ರದರ್ಶನಗಳು

 Gurudev Hoysala got lesser shows than Dasara and Bholaa in Bengaluru on release day

ಇನ್ನು ಈ ಪ್ರದರ್ಶನಗಳ ಪೈಕಿ ಯಾವ ಚಿತ್ರಗಳ ಎಷ್ಟು ಪ್ರದರ್ಶನಗಳು ಸೋಲ್ಡ್ ಔಟ್ ಆಗಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

* ದಸರಾ - 47 ಪ್ರದರ್ಶನಗಳು

* ಪತ್ತು ತಲ - 10 ಪ್ರದರ್ಶನಗಳು

* ಜಾನ್ ವಿಕ್ 4 - 6 ಪ್ರದರ್ಶನಗಳು

* ಗುರುದೇವ್ ಹೊಯ್ಸಳ - 1 ಪ್ರದರ್ಶನ

ಹೀಗೆ ಇಂದು ಬೆಂಗಳೂರಿನಲ್ಲಿ ಬಿಡುಗಡೆಯಾಗಿರುವ ಚಿತ್ರಗಳ ಪೈಕಿ ಕನ್ನಡ ಚಿತ್ರ ಗುರುದೇವ್ ಹೊಯ್ಸಳ ಚಿತ್ರಕ್ಕಿಂತ ತೆಲುಗಿನ ದಸರಾ ಹಾಗೂ ಹಿಂದಿಯ ಭೋಲಾ ಚಿತ್ರಗಳಿಗೇ ಹೆಚ್ಚು ಪ್ರದರ್ಶನಗಳು ಸಿಕ್ಕಿವೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಕನ್ನಡಿಗರು ಕನ್ನಡ ನಾಡಿನ ನೆಲದಲ್ಲಿ ಕನ್ನಡ ಚಿತ್ರಗಳಿಗಿಂತ ಪರಭಾಷಾ ಚಿತ್ರಗಳಿಗೇ ಹೆಚ್ಚು ಪ್ರದರ್ಶನಗಳನ್ನು ನೀಡಲಾಗಿದೆ ಎಂದು ಕಿಡಿಕಾರಿದ್ದಾರೆ.

ಇನ್ನು ಈ ನಾಲ್ಕು ಚಿತ್ರಗಳ ಮೊದಲ ದಿನಗಳ ಶೋ ಕೌಂಟ್ ಇದಾಗಿದ್ದು, ಈ ಪೈಕಿ ಯಾವ ಚಿತ್ರಗಳು ಚೆನ್ನಾಗಿರಲಿವೆಯೋ ಆ ಚಿತ್ರಗಳಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರದರ್ಶನ ಸಿಗಲಿದ್ದು, ನೆಗೆಟಿವ್ ವಿಮರ್ಶೆ ಪಡೆದುಕೊಳ್ಳಲಿರುವ ತಂಡಗಳು ಕಡಿಮೆ ಪ್ರದರ್ಶನಗಳನ್ನು ಪಡೆದುಕೊಳ್ಳುವುದು ಪಕ್ಕಾ. ಗುರುದೇವ್ ಹೊಯ್ಸಳ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡರೆ ನಾಳೆಯಿಂದ ಇದಕ್ಕಿಂತ ಉತ್ತಮ ಪ್ರದರ್ಶನವನ್ನು ಪಡೆದುಕೊಳ್ಳಲಿದೆ.

More from Filmibeat

English summary
Gurudev Hoysala got lesser shows than Dasara and Bholaa in Bengaluru on release day. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X