ಟೀಕಿಸಿದವರು ನಾಯಿಗಳು ಎಂದು ತಿರುಗೇಟು ನೀಡಿದ ನವರಸನಾಯಕ ಜಗ್ಗೇಶ್
ಕನ್ನಡ ಚಿತ್ರರಂಗ ಪ್ರತಿಭಾನ್ವಿತ ನಿರ್ದೇಶಕ ಗುರುಪ್ರಸಾದ್ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾಲಭಾಧೆಯಿಂದ ಅವರು ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ. ಏಳೆಂಟು ದಿನಗಳ ಹಿಂದೆ ಅವರು ನೇಣುಬಿಗಿದುಕೊಂಡಿದ್ದು ನವೆಂಬರ್ 3ರಂದು ಕೊಳತೆ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು.
ಗುರುಪ್ರಸಾದ್ ನಿಧನ ಕನ್ನಡ ಚಿತ್ರರಂಗಕ್ಕೆ ದಿಗ್ಬ್ರಮೆ ಮೂಡಿಸಿತ್ತು. 'ಮಠ' ಹಾಗೂ 'ಏದ್ದೇಳು ಮಂಜುನಾಥ್' ರೀತಿಯ ಹಿಟ್ ಸಿನಿಮಾಗಳನ್ನು ನೀಡಿದ ನಿರ್ದೇಶಕ ಹೀಗೆ ದಿಢೀರ್ ಬಾರದಲೋಕಕ್ಕೆ ಪಯಣ ಬೆಳೆಸಿದ್ದು ನಿಜಕ್ಕೂ ಬೇಸರದ ಸಂಗತಿ. ಇನ್ನು ಗುರುಪ್ರಸಾದ್ ನಿಧನ ಸುದ್ದಿ ಹೊರಬೀಳುತ್ತಿದ್ದಂತೆ ನಟ ಜಗ್ಗೇಶ್ ಮಾಧ್ಯಮಗಳ ಜೊತೆ ಮಾತನಾಡಿದ್ದರು. ಆದರೆ ಗುರು ಪ್ರಸಾದ್ ಕುರಿತು ನವರಸ ನಾಯಕನ ಕೆಲ ಹೇಳಿಕೆ ಬೇಸರ ಮೂಡಿಸಿತ್ತು.

ಗುರುಪ್ರಸಾದ್ ಸುತ್ತಾ ನಟ ಜಗ್ಗೇಶ್ ಆಡಿದ ಕೆಲ ಮಾತುಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅಸಮಾಧಾನ ವ್ಯಕ್ತವಾಗಿತ್ತು. ಲಾಯರ್ ಜಗದೀಶ್ ಕೂಡ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಸಾವಿನ ಮನೆಯಲ್ಲಿ ವಿಕೃತಿ ಕಾಣುವ ವ್ಯಕ್ತಿ ಜಗ್ಗೇಶ್ ಎಂದು ಬೇಸರ ವ್ಯಕ್ತಪಡಿಸಿದ್ದರು. ಗುರುಪ್ರಸಾದ್ ಆರೋಗ್ಯ ಸಮಸ್ಯೆಯ ಬಗ್ಗೆ ಪುನೀತ್ ರಾಜ್‌ಕುಮಾರ್ ಬಗ್ಗೆ ಅವರು ಆಡಿದ್ದ ಮಾತುಗಳ ಬಗ್ಗೆ ಜಗ್ಗೇಶ್ ಮಾತನಾಡಿದ್ದರು. ಆದರೆ ತಮ್ಮ ಮೇಲೆ ಮಾತನಾಡಿದವರಿಗೆ ಇದೀಗ ಜಗ್ಗೇಶ್ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
"ಆನೆ ನಡೆಯೋವಾಗ ಶ್ವಾನಗಳು ಉಸಿರು ಹೋಗುವಂತೆ ಅರಚುತ್ತದೆ. ಅದಕ್ಕೆ ಸೈಂಟಿಫಿಕ್ ಕಾರಣ "ಭಯ". ಎರಡನೆಯದು ಏನು ನಾವು ನೆಲದಷ್ಟೆ ಹೀಗಿದ್ದೇವೆ. ಆನೆ ಮಾತ್ರ ಮುಗಿಲೆತ್ತರ ಬೆಳೆದಿದೆ ಎಂಬ ಸಂಕಟ. ಇದರ ತಾತ್ಪಾರ್ಯ "ನಿನ್ನ ಕೆಲಸ ನೀನು ಗಾಂಭೀರ್ಯದಿಂದ ಮಾಡುತ್ತಿರು. ಶ್ವಾನವು ಅವುಗಳ ಕೆಲಸ ಮಾಡದೇ ಬೇರೆ ವಿಧಿಯಿಲ್ಲಾ ಬೊಗಳುತ್ತದೆ. ಆನೆಯಾಗಲು ಯೋಗ ಬೇಕು" ಎಂದು ಟ್ವೀಟ್ ಮಾಡಿದ್ದಾರೆ.
ಈ ಟ್ವೀಟ್ ಮೂಲಕ ಜಗ್ಗೇಶ್ ತಮ್ಮ ವಿರುದ್ಧ ಮಾತನಾಡಿದವರಿಗೆ ಪರೋಕ್ಷವಾಗಿ ತಿರುಗೇಟು ಕೊಟ್ಟಿರುವುದು ಗೊತ್ತಾಗುತ್ತಿದೆ. ಗುರುಪ್ರಸಾದ್ ಬಗ್ಗೆ ಜಗ್ಗೇಶ್ ಅವರು ಆಡಿದ ಮಾತಿಗೆ ಅಭ್ಯಂತರ ವ್ಯಕ್ತಪಡಿಸಿದವರಿಗೆ ಈ ರೀತಿ ಪ್ರತಿಕ್ರಿಯಿಸಿರುವುದು ಗೊತ್ತಾಗುತ್ತಿದೆ. ಆದರೆ ಈ ಟ್ವೀಟ್ ಬಗ್ಗೆಯೂ ಕೆಲವರು ಬೇಸರ ಹೊರ ಹಾಕಿದ್ದಾರೆ. ಇಲ್ಲಿ ಯಾರು ಶಾಶ್ವತ ಅಲ್ಲ, ಆನೆ ದಾರಿ ತಪ್ಪಿದಾಗ ಪಳಗಿಸುವುದು ಕನ್ನಡಿಗರಿಗೆ ಗೊತ್ತು ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಗುರುಪ್ರಸಾದ್‌ಗೆ ಕಾಯಿಲೆ ಇತ್ತು, ಕೆರೆದು ಮುಖ, ಮೈಯಲ್ಲಿ ರಕ್ತ ಕೀವು ಬರ್ತಿತ್ತು, ನಮ್ಮ ತಟ್ಟೆಗೆ ಕೈ ಹಾಕುತ್ತಿದ್ದ. ನಾವು ದೂರ ಕುಳಿತು ಊಟ ಮಾಡುತ್ತಿದ್ದೆವು ಎಂದು ಜಗ್ಗೇಶ್ ಹೇಳಿದ್ದರು. ಪುನೀತ್ ರಾಜ್‌ಕುಮಾರ್ ಅವಿರಿಗೆ ಕನ್ನಡ ಮಾತನಾಡಲು ಬರಲ್ಲ, ನಾನೇ ಹೇಳಿಕೊಟ್ಟಿದ್ದು ಎಂದಿದ್ದ. ಈ ವಿಚಾರವನ್ನು ಪುನೀತ್ ನನ್ನ ಬಳಿ ಹೇಳಿಕೊಂಡು ನೊಂದಿದ್ದರು ಎಂದು ಜಗ್ಗೇಶ್ ಹೇಳಿದ್ದರು.
ಗುರು ಪ್ರಸಾದ್ ಜೊತೆ ಎರಡು ಸಿನಿಮಾ ಮಾಡಿದ್ದೆ. ಎರಡು ಹಿಟ್ ಆಗಿತ್ತು. ಅದನ್ನು ನಾಉ ಮರೆಯೋದಿಲ್ಲ ಎಂದು ಜಗ್ಗೇಶ್ ಹೇಳಿದ್ದರು. ಆದರೆ ಒಮ್ಮೆ ಕುಡಿದು ಏನೇನೋ ಮಾತನಾಡಿ ಬಳಿಕ ಗುರು ಕ್ಷಮೆ ಕೇಳಿದ್ದರು ಎಂದು ಜಗ್ಗೇಶ್ ಹೇಳಿದ್ದರು. ಗುರು ಬಿಜೆಪಿ ವಿರೋಧಿ, ಎಡಪಂಥೀಯ ವ್ಯಕ್ತಿ ಎಂದು ಜಗ್ಗೇಶ್ ಹೇಳಿದ್ದರು. ಆದರೆ ಗುರು ಸಾವಿಗೂ ಅವರು ಎಡಪಂಥೀಯ ಚಿಂತಕರಾಗಿದ್ದಕ್ಕೂ ಏನು ಸಂಬಂಧ ಎಂದು ಕೆಲವರು ಪ್ರಶ್ನಿಸಿದ್ದರು.
ಗುರು ಪ್ರಸಾದ್ ನಿರ್ದೇಶನದ 'ರಂಗನಾಯಕ' ಚಿತ್ರದಲ್ಲಿ ಕೂಡ ಜಗ್ಗೇಶ್ ನಟಿಸಿದ್ದರು. ಆದರೆ ಸಿನಿಮಾ ಹೀನಾಯವಾಗಿ ಸೋತಿತ್ತು. ಭಾರೀ ಟೀಕೆ ವ್ಯಕ್ತವಾಗಿತ್ತು. ರಂಗನಾಯಕ ಸಿನಿಮಾ ಮಾಡಲು 10 ಲಕ್ಷ ಅಡ್ವಾನ್ಸ್ ಕೊಟ್ಟು ನನ್ನ ತಲೆ ಮೇಲೆ ಚಪ್ಪಡಿ ಕಲ್ಲು ಎಳೆದು ಬಿಟ್ಟರು ಎಂದು ಜಗ್ಗೇಶ್ ಹೇಳಿದ್ದರು. ಅವರ ಇಂತಹ ಹೇಳಿಕೆಗಳ ಬಗ್ಗೆಯೇ ಕೆಲರು ಬೇಸರ ವ್ಯಕ್ತಪಡಿಸಿದ್ದರು.


Click it and Unblock the Notifications











