ಕಾಣೆಯಾದವರ ಬಗ್ಗೆ ಪ್ರಕಟಣೆ ; ''ಗುರು''ವೇ ಎಲ್ಲಿದ್ದೀರಾ.. ? ''ಆಸ್ಕರ್'' ತರಬೇಕು ಬನ್ನಿ..!

By ಫಿಲ್ಮಿಬೀಟ್ ಡೆಸ್ಕ್

ನಾವ್ ''ಸಿನಿಮಾ''ನ ಲೈಟಾಗಿ ತಗೊಳ್ಳಲ್ಲ ಅಂತಿದ್ದವರು, ಬ್ರೈಟಾದ ''ಪಬ್ಲಿಸಿಟಿ'' ಮಾಡ್ತಾನೆ ಕಾಲ ದೂಡ್ತಾ ಬಂದರು. ''ಕೆಟ್ಟ ಸಿನಿಮಾ'' ಕೊಟ್ಟರೆ ಜನಕ್ಕೆ ''ಮುಖ'' ಹೆಂಗೆ ತೋರ್ಸೋದು ಅನ್ನೋ ''ಕಾಗುಣಿತ''ದಲ್ಲೇ ''ಕ್ರಿಯೇಟಿವಿಟಿ''ಯಿಂದ ಹೆಸರು ಮಾಡಿದ್ದ ಇವರು ''ಪಬ್ಲಿಸಿಟಿ''ಯ ಕೆಲ್ಸಕ್ಕೆ ಮುಂದಾದ್ರು.

ಅಡಚಣೆಗಳ ನಡುವೆಯೂ ''ಪ್ರಚಾರ''ದ ಗುಂಗು ಬಿಡದ ಈ ''ಸ್ಪೆಷಲ್ ಡೈರೆಕ್ಟರ್'' ಇನ್ನೇನೂ ತಮ್ಮ ''ರಂಗನಾಯಕ'' ಚಿತ್ರಕ್ಕೆ ''ಅತ್ಯುತ್ತಮ ನಿರ್ದೇಶಕ '' ಎಂಬ ವಿಭಾಗದಲ್ಲಿ ''ಆಸ್ಕರ್'' ಗೆ ನಾಮಾಕಿಂತವಾಗಬೇಕು. ಆದರೆ ಈ ಸುಸಂದರ್ಭದಲ್ಲಿ ಗುರು ಪ್ರಸಾದ್ ''ಕಾಣೆಯಾಗಿದ್ದಾರೆ''.

Guruprasad disappeared after Ranganayaka s defeat

ಬೇರೆಯವರ ಬಗ್ಗೆ ಗೊತ್ತಿಲ್ಲ. ಆದರೆ ಸಿನಿ ಪ್ರೇಮಿಗಳ ಪ್ರಕಾರ ಇದು ನಿಜಕ್ಕೂ ''ಆತಂಕ''ದ ವಿಷಯ. ಯಾಕೆಂದರೆ ಕನ್ನಡ ಚಿತ್ರರಂಗಕ್ಕೆ ಈ ''ಸರಸ್ವತಿ ಪುತ್ರ''ನ ಅವಶ್ಯಕತೆ ತುಂಬಾನೇ ಇದೆ. ಹೀಗಾಗಿಯೇ ''ರಂಗನಾಯಕ '' ಚಿತ್ರದ ಅಭೂತಪೂರ್ವ ಯಶಸ್ಸಿನ ನಂತರ, ಇಂಥಹದ್ದೊಂದು ''ಕಲ್ಟ್ ಕ್ಲಾಸಿಕ್'' ಸಿನಿಮಾವನ್ನ ಕನ್ನಡದ ''ಹತಾಶ'' ಪ್ರೇಕ್ಷಕರಿಗೆ ನೀಡಿದ ''ಗುರು ಪ್ರಸಾದ್'' ಎಲ್ಲಿದ್ದಾರೆ ಎಂದು ಎಲ್ಲರು ಹುಡುಕಲು ಆರಂಭ ಮಾಡಿದ್ದಾರೆ.

''ಫೇಸ್ ಬುಕ್''. ''ಇನ್ಸ್ಟಾ''.. ''ಎಕ್ಸ್''.. ! ಹೀಗೆ ಅನೇಕ ಕಡೆ. ''ವಾಟ್ಸಾಪ್'' ಯುನಿವರ್ಸಿಟಿಯಲ್ಲಿ ಪ್ರಕಟಣೆಯೊಂದನ್ನ ಹೊರಡಿಸಿಲ್ಲ ಅಷ್ಟೇ. ಅದನ್ನ ಹೊರತು ಪಡಿಸಿದರೆ ಕಂಡ ಕಂಡಲೆಲ್ಲಾ ಗುರು ಪ್ರಸಾದ್ ''ಹ್ಯಾಶ್ ಟ್ಯಾಗ್ '' ಅಡಿ ಕನ್ನಡ ಕಲಾಭಿಮಾನಿಗಳು ಸರ್ಚ್‌ ಮಾಡುತ್ತಿದ್ದಾರೆ.

Guruprasad disappeared after Ranganayaka s defeat

ಆದರೆ ಗುರು ಪ್ರಸಾದ್ ಮಾತ್ರ ''ರಂಗನಾಯಕ'' ತೆರೆಗೆ ಬಂದ ಮರು ಕ್ಷಣದಿಂದನೇ ಕಾಣ್ತಿಲ್ಲ. ''ಅಜ್ಞಾತ ವಾಸ''ದಲ್ಲಿದ್ದಾರಾ..? ''ವನವಾಸ''ಕ್ಕೆ ತೆರಳಿದರಾ..? ಗೊತ್ತಿಲ್ಲ.

ಅಂದ್ಹಾಗೇ ಹಿಂದೊಮ್ಮೆ ನಾವು ''ಕ್ಲಾಪ್'' ಹೊಡಿಯೋದಲ್ಲ, ''ಜನ ಕ್ಲಾಪ್'' ಹೊಡಿಬೇಕು ಅನ್ನೋ ''ಕಾಮನ್ ಸೆನ್ಸ್'' ನಮಗಿದೆ ಎಂಬರ್ಥದಲ್ಲಿ ಮಾತನಾಡಿದ್ದ ಗುರು ಪ್ರಸಾದ್, ತಮ್ಮ ''ಡೈರೆಕ್ಟರ್ ಸ್ಪೆಷಲ್'' ಚಿತ್ರದ ಬಿಡುಗಡೆಯ ಸಮಯದಲ್ಲಿಯೂ ಇಂಥಹದ್ದೇ ''ಗಿಮಿಕ್'' ಗಳ ಮೂಲಕ ''ಚಮಕ್'' ಕೊಟ್ಟಿದ್ದರು.

ಅಂದುಕೊಂಡ ದಿನದಿಂದು ನನ್ನ ಸಿನಿಮಾ ತೆರೆಗೆ ಬರದೇ ಇದ್ದರೆ, ''ಅಫ್ಜಲ್ ಗುರು'' ಥರ ಈ ''ಗುರು''ವನ್ನೂ ''ನೇಣು'' ಹಾಕಿ ಹಾಕಿ ಬಿಡಿ ಅಂತೆಲ್ಲ ''ಜಾಹೀರಾತ''ನ್ನೂ ಕೊಟ್ಟಿದ್ದರು. ಆ ಸಿನಿಮಾ ಅಂದುಕೊಂಡತೆ ಬಿಡುಗಡೆಯಾಗಲಿಲ್ಲ ಅನ್ನುವುದು ಬೇರೆ ವಿಷಯ.

Guruprasad disappeared after Ranganayaka s defeat

ಇಂಥ ''ಗುರುಪ್ರಸಾದ್'' ನಿರ್ದೇಶನದ ''ರಂಗನಾಯಕ'' ಸಿನಿಮಾವನ್ನ ಮೊದಲ ವಾರದ ಮೊದಲನೇ ಆಟ ಮುಕ್ತಾಯವಾಗುವ ಹೊತ್ತಿಗೆ ಪ್ರೇಕ್ಷಕರು ''ನೋ.. ರೇ'' ಅಂದು ಬಿಟ್ಟಿದ್ದರು. ಆದರೂ ಗುರು ಪ್ರಸಾದ್ ಸೋಲನ್ನ ಒಪ್ಪಿಕೊಂಡು ಮುಂದೆ ಬರ್ತಾರೆ, ಮಾತನಾಡ್ತಾರೆ, ಸಮಜಾಯಿಶಿ ಕೊಡ್ತಾರೆ ಎಂದು ಎಲ್ಲರು ಅಂದುಕೊಂಡಿದ್ದರು.

ಯಾಕೆಂದರೆ ಗುರು ಪ್ರಸಾದ್ ಅವರದ್ದು ''ಯಾರೇ ಕೂಗಾಡಲಿ ಬಾರೇ ಅಲ್ಲಾಡಲೀ'' ಅನ್ನುವಂಥ ವ್ಯಕ್ತಿತ್ವ. ಯಾವುದಕ್ಕೂ ತಲೆ ಕೆಡಿಸಿಕೊಳ್ಳಲ್ಲ ''ಗುರು'' ಅನ್ನುವ ಮಾತನ್ನ ಇಡೀ ಗಾಂಧಿನಗರವೇ ಹೇಳುತ್ತೆ. ಇದಕ್ಕೆ ಸಾಕ್ಷಿ ಎನ್ನುವಂತೆ ''ರಂಗನಾಯಕ'' ನನ್ನ ಸಿನಿಮಾ ಅಲ್ಲ ಎಂದು ಚಿತ್ರದ ಕಥಾನಾಯಕ ''ಜಗ್ಗೇಶ್' ' ಖುದ್ದು ''ಉಲ್ಟಾ'' ಹೊಡೆದರು, ''ಜೋಗಿ ಪ್ರೇಮ್'' ಮೇಲಾಣೆ ಅಂತ ಹೇಳ್ತಾನೆ ಆ ಕಾಲದಲ್ಲಿ ಆಣೆ ಪ್ರಮಾಣ ಸಂಪ್ರದಾಯವನ್ನ ಗಾಂಧಿನಗರದಲ್ಲಿ ಚಾಲ್ತಿಗೆ ತಂದ ಗುರು ಪ್ರಸಾದ್ ಮಾತ್ರ ಇಲ್ಲಿವರೆಗೆ ತುಟಿಪಿಟಿಕ್ ಅಂದಿಲ್ಲ. ''ಸೋಲು ಅನಾಥ! ಗೆಲುವಿಗೆ ನೂರಾರು ಅಪ್ಪಂದಿರು'' ಎಂದು ಬಾಯಿ ಮಾತಿಗೂ ತಮ್ಮ ಅಸಮಾಧಾನ ವ್ಯಕ್ತಪಡಿಸಿಲ್ಲ.

Guruprasad disappeared after Ranganayaka s defeat

ಇವೆಲ್ಲ ಕಾರಣಗಳಿಂದ ಕಥೆ ಹೇಳ್ತಾ ಹೇಳ್ತಾ ಆ ಕಥೇಲಿರೋ ''ಉಪಕಥೆ''ಗಳಿಂದಾಗಿ ತಾವೇ ಹೆಣೆದ ಕಥೆಯನ್ನೇ ಮರೆಯುವ ಗುರುಪ್ರಸಾದ್ ಕಥೆ ಮುಂದೇನಾಗುತ್ತೆ ಅನ್ನೋದು ಸದ್ಯ ''ಕೋಟ್ಯಾಧಿಪತಿ'' ಸೀಟಲ್ಲಿ ಕಾಡ್ತಿರೋ ಆಪ್ಷನ್ ಲೆಸ್ ಕ್ಚಶ್ಚನ್ ಎಂದು ಹೊಸಕೆರೆಹಳ್ಳಿ ನಿವಾಸಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

ಒಟ್ನಲ್ಲಿ ಒಂದ್ಕಾಲದಲ್ಲಿ ಥಿಯೇಟರ್ ಎದುರು ಕೈಯಲ್ಲಿ ''ಪೆನ್ನ''ನ್ನ ಮಚ್ಚಿನ ರೇಂಜಲ್ಲಿ ಹಿಡ್ಕೊಂಡು ನಿಂತಿದ್ದ ''ಗುರು'' ಈ ಬಾರಿ ಪ್ರೇಕ್ಷಕರ ''ಪ್ಯಾರು'' ಗಳಿಸೋವಲ್ಲಿ ಎಡವಿದ್ದಾದರೂ ಎಲ್ಲಿ ಅನ್ನುವ ಪ್ರಶ್ನೆ ಗಾಂಧಿನಗರದ ಪಂಡಿತರನ್ನ ಕಾಡುತ್ತಿದೆ.

ಇದಕ್ಕೆ ಉತ್ತರ ಕೋಡಬೇಕಾಗಿರೋರ್ದು ಮಾತ್ರ ಕೈಯಿ, ಬಾಯಿ ಬಂದಾಗಿದೆ. ಇದನ್ನೆಲ್ಲ ನೋಡಿದವರು ಗುರುವಿನ ''ಓವರ್ ಕಾನ್ಫಿಡೆನ್ಸೇ'', ರಂಗನಾಯಕ ಸಿನಿಮಾದ ಸೋಲಿಗೆ ಕಾರಣ ಅಂತ ''ಕಾಲನೀಲಿ'' ಮಾತನಾಡ್ತಿದ್ದಾರೆ. ಇನ್ನೂ ನಿಮಗೆ ಗೊತ್ತು ರಂಗನಾಯಕನ ಜೊತೆ ''ಜಗ್ಗೇಶ್'' ತಮ್ಮ ''ಸಂಬಂಧ'' ಕಡಿದುಕೊಂಡಿದ್ದಾರೆ, ನಿಜಕ್ಕೂ ''ಗುರು'' ಎಲ್ಲಿ ಎಂಬ ಪ್ರಶ್ನೆಗೆ ಉತ್ತರ ಅವರ ''ಗುರು'' ನವರಸನಾಯಕ ಜಗ್ಗೇಶ್ ಅವರಿಗೆ ಗೊತ್ತು ಆದರೂ ಅವರು ಹೇಳ್ತಿಲ್ಲ ಅನ್ನುವುದು ಸದ್ಯಕ್ಕೆ ಹರಿದಾಡುತ್ತಿರುವ ಇನ್ನೊಂದು ಮಾತು.

More from Filmibeat

English summary
Many people are wondering where is Saraswati's son Guruprasad of Kannada cinema. Because after the failure of Ranganayaka, Guruprasad is nowhere to be seen.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X