twitter
    For Quick Alerts
    ALLOW NOTIFICATIONS  
    For Daily Alerts

    'ನನ್ನ ಸಾವಿಗೆ ಸರ್ಕಾರನೇ ಕಾರಣ' ಡೆತ್ ನೋಟ್ ಬರೆದ ಗುರುಪ್ರಸಾದ್: ಯಡಿಯೂರಪ್ಪ, ಸುಧಾಕರ್ ವಿರುದ್ಧ ಕಿಡಿ

    |

    ಸ್ಯಾಂಡಲ್‌ವುಡ್‌ನ ನಿರ್ದೇಶಕ ಮಠ ಗುರುಪ್ರಸಾದ್ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೊನಾ ಸೋಂಕು, ಸಾವನ್ನು ತಡೆಯಲು ವಿಫಲವಾದ ಸರ್ಕಾರದ ವಿರುದ್ಧ ಗುರುಪ್ರಸಾದ್ ಕಿಡಿ ಕಾರಿದ್ದಾರೆ.

    Recommended Video

    ಇವತ್ತಿನ ಮುಖ್ಯಮಂತ್ರಿ ಯಡಿಯೂರಪ್ಪನಾ ವಿಜಯೇಂದ್ರನಾ?? | Filmibeat Kannada

    ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಪುತ್ರ ವಿಜಯೇಂದ್ರ ಮತ್ತು ಆರೋಗ್ಯ ಸಚಿವ ಡಾ. ಸುಧಾಕರ್ ಅವರನ್ನು ಗುರುಪ್ರಸಾದ್ ತರಾಟೆಗೆ ತೆಗೆದುಕೊಂಡಿದ್ದಾರೆ. ವಿಡಿಯೋ ಮೂಲಕ ಸರ್ಕಾರವನ್ನು ಹಿಗ್ಗಾಮುಗ್ಗಾ ಜಾಡಿಸಿರುವ ಗುರುಪ್ರಸಾದ್ ನನ್ನ ಸಾವಿಗೆ ಈ ಮೂವರೇ ಕಾರಣ ಎಂದು ಡೆತ್ ಬರೆಯುವುದಾಗಿ ಹೇಳಿದ್ದಾರೆ. ರಾಜಕೀಯ ಮಾಡಬೇಡಿ, ಆಡಳಿತ ಮಾಡಿ ಎಂದು ಗುರುಪ್ರಸಾದ್ ಸರ್ಕಾರಕ್ಕೆ ತಿವಿದಿದ್ದಾರೆ. ಮುಂದೆ ಓದಿ...

    ನನ್ನ ಸಿನಿಮಾದಲ್ಲಿ 'ಹಾರ್ ಜನ' ಹೀರೋಗಳು ಇರೋಲ್ಲ - ಗುರುಪ್ರಸಾದ್ನನ್ನ ಸಿನಿಮಾದಲ್ಲಿ 'ಹಾರ್ ಜನ' ಹೀರೋಗಳು ಇರೋಲ್ಲ - ಗುರುಪ್ರಸಾದ್

    ಕೊರೊನಾ ಕಳುಹಿಸಿದ ಯಡಿಯೂರಪ್ಪ-ವಿಜಯೇಂದ್ರಗೆ ಧನ್ಯವಾದ

    ಕೊರೊನಾ ಕಳುಹಿಸಿದ ಯಡಿಯೂರಪ್ಪ-ವಿಜಯೇಂದ್ರಗೆ ಧನ್ಯವಾದ

    ಮನೆವರೆಗೂ ಕೊರೊನಾ ಕಳುಹಿಸಿದ ಯಡಿಯೂರಪ್ಪ ಮತ್ತು ಪುತ್ರ ವಿಜಯೇಂದ್ರ ಅವರಿಗೆ ಧನ್ಯವಾದ ತಿಳಿಸಿ ವ್ಯಂಗ್ಯವಾಡಿದ್ದಾರೆ. 'ಎಷ್ಟು ಕೋಟಿ ಬೇಕು ನಮಗೆ, ನಿಮ್ಮ ಕೋಟಿ ಎಂದರೆ ಬಡವರ ಮನೆಯ ಒಂದೊಂದು ಇಡ್ಲಿಯನ್ನು ತಂದು ನಿಮ್ಮ ಲಾಕರ್‌ನಲ್ಲಿ ಇಡುತ್ತಿದ್ದೀರಿ. ದರಿದ್ರ ಜೀವನ ನಡೆಸಿಲಿಕ್ಕೆ' ಎಂದು ಆಕ್ರೋಶ ಹೊರಹಾಕಿದ್ದಾರೆ.

     ನನ್ನ ಶಾಪ ನಿಮಗೆ ಕೊನೆಯವರೆಗೂ ನೋವು ಕೊಡಲಿ

    ನನ್ನ ಶಾಪ ನಿಮಗೆ ಕೊನೆಯವರೆಗೂ ನೋವು ಕೊಡಲಿ

    'ಒಂದು ವೇಳೆ ನಾನು ಸತ್ತರೆ ನನ್ನ ಶಾಪ ಕೊನೆವರೆಗೂ ನಿಮಗೆ ನೋವು ಕೊಡಬೇಕು ಎಂದು ಮಾತನಾಡುತ್ತಿದ್ದೀನಿ. ಒಂದೂವರೆ ವರ್ಷ ಸಮಯ ತೆಗೆದುಕೊಂಡು, 2 ತಿಂಗಳೂ ಲಾಕ್ ಡೌನ್ ಮಾಡಿ ಏನು ಮಾಡಿದ್ರಿ' ಎಂದು ಗುರುಪ್ರಸಾದ್ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.

    ಕೊರೊನಾ ಬಂದರೂ ಪಾಠ ಕಲಿಯಲಿಲ್ಲ

    ಕೊರೊನಾ ಬಂದರೂ ಪಾಠ ಕಲಿಯಲಿಲ್ಲ

    'ನಿಮಗೆ ಕೋಟಿ ಕೋಟಿ ಹಣ ಬಂದಿದೆ ಅಂತ ಸಾಮಾನ್ಯ ಜನರನ್ನು ಸಂಕಷ್ಟಕ್ಕೆ ತಳ್ಳಬೇಡಿ ಎಂದು ಬೇಡಿಕೊಂಡಿದ್ದಾರೆ. 'ನನಗೆ ಕೊರೊನಾ ತಂದುಕೊಟ್ಟ ನಿಮಗೆ ಧಿಕ್ಕಾರವಿರಲಿ' ಎಂದು ಕಿಡಿ ಕಾರಿದ್ದಾರೆ. 'ತುಂಬಾ ಜನರನ್ನು ಸಾಯಿಸಿದ್ದಾರೆ, ಒಂದೂವರೇ ವರ್ಷವಾದರೂ ಏನು ಮಾಡಿಲ್ಲ. ನನ್ನಂತವರಿಗೆ ಕೊಟ್ಟಿದ್ರೆ ಏನೋ ಮಾಡುತ್ತಿದ್ದೆ. ಇನ್ನು ಎಷ್ಟು ಕೋಟಿ ನಿಮಗೆ, ಕೊರೊನಾ ಬಂದರು ಪಾಠ ಕಲಿತಿಲ್ಲ' ಎಂದಿದ್ದಾರೆ.

    ಮನೆಮನೆಗೆ ಎರಡು ಸಾವು ಆಗುತ್ತೆ

    ಮನೆಮನೆಗೆ ಎರಡು ಸಾವು ಆಗುತ್ತೆ

    'ರಾಜಕೀಯ ಮಾಡಬೇಡಿ, ಆಡಳಿತ ಮಾಡಿ ಎಂದು ರಾಜಕೀಯ ವ್ಯಕ್ತಿಗಳನ್ನು ಮನವಿ ಮಾಡಿದ್ದಾರೆ. ಹಾಗೆ ಆದರೆ ಎಲ್ಲರು ಸಾಯಿಸುತ್ತಾರೆ, ಹೀಗೆ ಆದರೆ ಮನೆಮನೆಗೆ ಎರಡು ಸಾವು ಆಗುತ್ತೆ' ಎಂದು ಭವಿಷ್ಯ ನುಡಿದಿದ್ದಾರೆ.

    ಪ್ರತಿ ಸಾವಿಗೂ ಡಾ.ಸುಧಾಕರ್ ಕಾರಣ

    'ಕರ್ನಾಟಕದಲ್ಲಿ ಆದ ಪ್ರತಿಯೊಂದು ಸಾವಿಗೂ ಡಾ. ಸುಧಾಕರ್ ಕಾರಣ ಎಂದು ಬಹಿರಂಗವಾಗಿ ಹೇಳಿದ್ದಾರೆ. ಈ ನೋವು ಸುಮ್ಮನೆ ಬಿಡಲ್ಲ ಎಂದಿದ್ದಾರೆ. 'ನನ್ನ ಸಾವಿಗೆ ಡೆತ್ ನೋಟ್ ಬರೆಯುತ್ತಿದ್ದೇನೆ, ನೀವೆಲ್ಲರೂ ಕಾರಣ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    English summary
    Director Mata Guruprasad outrage against CM Yediyurappa and Minister Dr.Sudhakar for failed to control corona.
    Monday, April 19, 2021, 11:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X