For Quick Alerts
  ALLOW NOTIFICATIONS  
  For Daily Alerts

  ಸರ್ಜಾ ವಿಷ್ಯದಲ್ಲಿ ಶ್ರುತಿ ಹೀಗೆ ಮಾಡಬಹುದಿತ್ತು, ಯಾಕೆ ಮಾಡಿಲ್ಲ: ಗುರು ಪ್ರಸಾದ್

  |
  ಸರ್ಜಾ ಮೇಲೆ ಶ್ರುತಿ ಹರಿಹರನ್ ಮೀ ಟೂ ಆರೋಪದ ಬಗ್ಗೆ ಡೈರೆಕ್ಟರ್ ಗುರುಪ್ರಸಾದ್ ಗರಂ | FILMIBEAT KANNADA

  ಬಹುಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ಮೀಟೂ ಆರೋಪ ಮಾಡಿರುವ ಬಗ್ಗೆ ಮಿಶ್ರಪ್ರತಿಕ್ರಿಯೆ ಇದೆ. ಕೆಲವರು ಶ್ರುತಿ ಪರವಾಗಿ ಮಾತನಾಡಿದ್ರೆ, ಮತ್ತೆ ಕೆಲವರು ಸರ್ಜಾ ಬೆನ್ನಿಗೆ ನಿಂತಿದ್ದಾರೆ.

  ಈ ಮಧ್ಯೆ ಶ್ರುತಿ ಅವರು ಎರಡು ವರ್ಷದ ಹಿಂದೆ ಘಟನೆಯನ್ನ ಇಷ್ಟು ದಿನ ಯಾಕೆ ಮುಚ್ಚಿಟ್ಟಿದ್ದರು, ಅದನ್ನ ಆಗಲೇ ಯಾಕೆ ಹೇಳಿಲ್ಲ ಎಂದು ಪ್ರಶ್ನಿಸುವವರು ಹಲವರು.

  ಪತಿವ್ರತೆ ಅಂತ ಸಾಬೀತು ಮಾಡೋಕೆ 'ಮೀಟೂ': ಗುರುಪ್ರಸಾದ್ ಫೈರ್.! ಪತಿವ್ರತೆ ಅಂತ ಸಾಬೀತು ಮಾಡೋಕೆ 'ಮೀಟೂ': ಗುರುಪ್ರಸಾದ್ ಫೈರ್.!

  ಇದೀಗ, 'ಮಠ' ಖ್ಯಾತಿಯ ನಿರ್ದೇಶಕ ಗುರು ಪ್ರಸಾದ್ ಕೂಡ ಅದೇ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಶ್ರುತಿ ಹರಿಹರನ್ ಅವರು ಸರ್ಜಾ ವಿಷ್ಯದಲ್ಲಿ ಹೀಗೆ ಮಾಡಬಹುದಿತ್ತು. ಆದ್ರೆ, ಆಕೆ ಅದನ್ನೇ ಮಾಡದೇ ಈಗ ಮೀಟೂ ಅಂದ್ರೆ ಏನ್ ಪ್ರಯೋಜನ ಎಂದು ಕಿಡಿಕಾರಿದ್ದಾರೆ. ಹಾಗಿದ್ರೆ, ಗುರು ಪ್ರಸಾದ್ ಪ್ರಕಾರ ಶ್ರುತಿ ಏನು ಮಾಡಬೇಕಿತ್ತು.? ತಿಳಿಯಲು ಮುಂದೆ ಓದಿ...

  ಪತ್ನಿ ಬಳಿ ದೂರು ನೀಡಬೇಕಿತ್ತು

  ಪತ್ನಿ ಬಳಿ ದೂರು ನೀಡಬೇಕಿತ್ತು

  ಅರ್ಜುನ್ ಸರ್ಜಾ ಅವರು ಶ್ರುತಿ ಹರಿಹರನ್ ಬಳಿ ಕೆಟ್ಟದಾಗಿ ನಡೆದುಕೊಂಡಿದ್ದಾರೆ ಎಂದು ಹೇಳ್ತಿದ್ದಾರೆ ಅಲ್ವಾ, ಆಗಲೇ ಯಾಕೆ ಶ್ರುತಿ ಎಚ್ಚೆತ್ತುಕೊಂಡಿಲ್ಲ. ಈ ವಿಷ್ಯವನ್ನ ಸರ್ಜಾ ಅವರ ಪತ್ನಿ ಬಳಿ ಹೇಳಬೇಕಿತ್ತು. ನಿಮ್ಮ ಗಂಡ ಹೀಗೆ ಕೇಳ್ತಿದ್ದಾನೆ ಎಂದು ಹೇಳಿದ್ರೆ, ಆಕೆಯೂ ನಟಿ. ಅವರಿಗೂ ಒಂದು ಹೆಣ್ಣಿನ ಮನಸ್ಸು ಅರ್ಥವಾಗ್ತಿತ್ತು. ಅದನ್ನ ಯಾಕೆ ಮಾಡಿಲ್ಲ.? ಎಂದು ಗುರು ಪ್ರಶ್ನಿಸಿದ್ದಾರೆ.

  ಸರ್ಜಾ ಮಗಳ ಪರೋಕ್ಷ ಆರೋಪಕ್ಕೆ 'ಆ ದಿನಗಳು' ಚೇತನ್ ನೇರ ಉತ್ತರ ಸರ್ಜಾ ಮಗಳ ಪರೋಕ್ಷ ಆರೋಪಕ್ಕೆ 'ಆ ದಿನಗಳು' ಚೇತನ್ ನೇರ ಉತ್ತರ

  ಎರಡು ವರ್ಷದಲ್ಲಿ ಏನಾಗಿರಬಹುದು ಅಂದ್ರೆ.?

  ಎರಡು ವರ್ಷದಲ್ಲಿ ಏನಾಗಿರಬಹುದು ಅಂದ್ರೆ.?

  ಈ ಘಟನೆ ಆಗಿ ಎರಡು ವರ್ಷ ಆಗಿದೆ. ಈ ಮಧ್ಯೆ, ಈ ಎರಡು ವರ್ಷದಲ್ಲಿ ಏನಾಗಿರಬಹುದು ಅಂದ್ರೆ, ಆಕೆಗೆ ಮದ್ವೆ ಆಗಿದೆ. ಆಕೆಯ ಪತಿ ಸಿನಿಮಾ ಇಂಡಸ್ಟ್ರಿ ಅವರಲ್ಲ. ಸಾಮಾನ್ಯವಾಗಿ ಅವರ ಅತ್ತೆ, ಮಾವನಿಗೆ ಒಂದು ಭಾವನೆ ಇರುತ್ತೆ. ಈ ಹುಡುಗಿ ಸಿನಿಮಾ ಇಂಡಸ್ಟ್ರಿಯಲ್ಲಿ ಇರೋದು. ಹೇಗೋ ಏನೋ ಅಂತ. ಅದಕ್ಕೆ ಇಂತಹದೊಂದು ಆರೋಪ ಮಾಡಿದ್ರೆ, ಈಕೆ ಪತಿವ್ರತೆ, ಪರಿಶುದ್ಧರು ಎಂದು ಬಿಂಬಿಸಲು ಯಾಕೆ ಹೀಗೆ ಮಾಡಿರಬಾರದು.? ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

  ಸರ್ಜಾ ವಿರುದ್ಧ ಆರು ಜನರನ್ನ ಸಾಕ್ಷಿಯನ್ನಾಗಿಸಿದ ಶ್ರುತಿ ಹರಿಹರನ್.! ಸರ್ಜಾ ವಿರುದ್ಧ ಆರು ಜನರನ್ನ ಸಾಕ್ಷಿಯನ್ನಾಗಿಸಿದ ಶ್ರುತಿ ಹರಿಹರನ್.!

  ಸರ್ಜಾ ಮಾತ್ರ ಟಾರ್ಗೆಟ್ ಯಾಕೆ.?

  ಸರ್ಜಾ ಮಾತ್ರ ಟಾರ್ಗೆಟ್ ಯಾಕೆ.?

  ಇನ್ನು ಅರ್ಜುನ್ ಸರ್ಜಾ ಅವರನ್ನೇ ಯಾಕೆ ಟಾರ್ಗೆಟ್ ಮಾಡಲಾಗಿದೆ ಎಂಬುದರ ಬಗ್ಗೆ ಮಾತನಾಡಿದ ಗುರು ಪ್ರಸಾದ್ 'ಶ್ರುತಿ ಮಲಯಾಳಿ ಹುಡುಗಿ, ತಮಿಳು ಮಾತೃಭಾಷೆ ಕನ್ನಡದಲ್ಲಿ ಊಟ ಮಾಡ್ತಿದ್ದೀಯಾ, ಆದ್ರೆ, ಕನ್ನಡವನ್ನ ಯಾಕೆ ಹಾಳುಮಾಡ್ತಿದ್ದಿಯಾ, ಹೋಗು ತಮಿಳಿಗೆ' ಎಂದು ಕಿಡಿಕಾರಿದ್ದಾರೆ. ಕನ್ನಡದ ನಟರನ್ನ ಹಿಡಿದುಕೊಂಡರೇ ಬೇರೆ ಭಾಷೆಯಲ್ಲಿ ಆಫರ್ ಸಿಗಲ್ಲ, ಸೋ ಸರ್ಜಾ ಅವರನ್ನ ಹಿಡಿದುಕೊಂಡ್ರೆ ಅವರಿಂದ ಪರಭಾಷೆಯಲ್ಲಿ ಮಾರುಕಟ್ಟೆ ಬೆಳೆಸಬಹುದು ಎಂಬ ಕಾರಣಕ್ಕೆ ಆರೋಪ ಮಾಡಿರಬಹುದು' ಎಂದು ನಿರ್ದೇಶಕ ಗುರು ಪ್ರಸಾದ್ ಅನುಮಾನ ಹೊರಹಾಕಿದ್ದಾರೆ.

  ಸರ್ಜಾ ವಿರುದ್ಧ ಇಷ್ಟು ದಿನ ಹೇಳಿದ್ದು ಒಂದೇ, ಈಗ ಹೇಳ್ತಿರೋದು ಐದು ಆರೋಪ.! ಸರ್ಜಾ ವಿರುದ್ಧ ಇಷ್ಟು ದಿನ ಹೇಳಿದ್ದು ಒಂದೇ, ಈಗ ಹೇಳ್ತಿರೋದು ಐದು ಆರೋಪ.!

  ಶೀಲಾ ಮುಖ್ಯನಾ, ಸಿನಿಮಾ ಮುಖ್ಯನಾ.?

  ಶೀಲಾ ಮುಖ್ಯನಾ, ಸಿನಿಮಾ ಮುಖ್ಯನಾ.?

  ಶ್ರುತಿ ಅವರು ಆಗಲೇ ಈ ಘಟನೆಯನ್ನ ಖಂಡಿಸಿಲ್ಲ ಯಾಕೆ ಎಂದು ಪ್ರಶ್ನಿಸಿರುವ ಗುರು ಪ್ರಸಾದ್, 'ಸಿನಿಮಾ ಬಿಟ್ಟು ಹೋಗಬಹುದು ಎಂಬ ಆತಂಕ ಅವರನ್ನ ಕಾಡಿತ್ತಾ. ಒಂದು ವೇಳೆ ಇದೇ ನಿಜವಾಗಿದ್ದರೇ, ಹೆಣ್ಣಿಗೆ ಶೀಲಾ ಮುಖ್ಯನಾ, ಸಿನಿಮಾ ಮುಖ್ಯನಾ, ಹೆಣ್ಣಿನ ಸೂಕ್ಷ್ಮತೆಗೆ ನೋವಾಗುತ್ತಿದೆ ಅಂದ್ಮೇಲೆ ಸಿನಿಮಾ ಬಿಟ್ಟಾಕು' ಎಂದಿದ್ದಾರೆ. 'ಶ್ರುತಿ ಹರಿಹರನ್ ನನ್ನ ತಂಗಿ, ನಾನು ತುಂಬಾ ಕೇರ್ ಫುಲ್ ಆಗಿದ್ದೀನಿ' ಎಂದು ಕೂಡ ಗುರು ಹೇಳುವ ಮೂಲಕ ಅಚ್ಚರಿ ಮೂಡಿಸಿದರು.

  ಶ್ರುತಿ ಮೀಟೂ ವಿವಾದದ ಬಗ್ಗೆ ಪ್ರಿಯಾಂಕಾಗೂ ಕಾಡ್ತಿದೆ 2 ಅನುಮಾನ.! ಶ್ರುತಿ ಮೀಟೂ ವಿವಾದದ ಬಗ್ಗೆ ಪ್ರಿಯಾಂಕಾಗೂ ಕಾಡ್ತಿದೆ 2 ಅನುಮಾನ.!

  English summary
  'I have some doubt in sruthi hariharan metoo allegations' said kannada director guruprasad.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X