For Quick Alerts
  ALLOW NOTIFICATIONS  
  For Daily Alerts

  ಹೀರೋ ಆದ ಜಿಮ್ ರವಿ: 'ಪುರುಷೋತ್ತಮ' ಚಿತ್ರಕ್ಕೆ ಅಂತಾರಾಷ್ಟ್ರೀಯ ಬಾಡಿ ಬಿಲ್ಡರ್ ನಾಯಕ

  |

  ಅಂತಾರಾಷ್ಟ್ರೀಯ ಬಾಡಿ ಬಿಲ್ಡರ್ ಹಾಗೂ ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಪೋಷಕ ಪಾತ್ರಗಳಲ್ಲಿ ನಟಿಸುತ್ತಾ ಬಂದಿರುವ ಜಿಮ್ ರವಿ ಈಗ ನಾಯಕನಟನಾಗಿ ಪರಿಚಯ ಆಗ್ತಿದ್ದಾರೆ. ಕನ್ನಡ ಇಂಡಸ್ಟ್ರಿಯಲ್ಲಿ ಸುಮಾರು 130ಕ್ಕೂ ಅಧಿಕ ಚಿತ್ರಗಳಲ್ಲಿ ಜಿಮ್ ರವಿ ಪೋಷಕ ಪಾತ್ರ ನಿರ್ವಹಿಸಿದ್ದಾರೆ.

  ಬಹಳ ವರ್ಷದ ಬಳಿಕ ಸ್ಯಾಂಡಲ್‌ವುಡ್‌ನಲ್ಲಿ ಜಿಮ್ ರವಿ ಹೀರೋ ಆಗಿ ಪ್ರಮೋಟ್ ಆಗಿದ್ದಾರೆ. ಸ್ವತಃ ಜಿಮ್ ರವಿ ಅವರೇ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ಸಿನಿಮಾಗೆ ಪುರುಷೋತ್ತಮ ಎಂದು ಹೆಸರಿಡಲಾಗಿದೆ.

  ಜಿಮ್ ರವಿ ಮಾಡಿರುವ ಸಾಧನೆ ಬಗ್ಗೆ ನಿಮಗೆಷ್ಟು ಗೊತ್ತು.?

  ಅಂದ್ಹಾಗೆ, ಪುರುಷೋತ್ತಮ ಚಿತ್ರವನ್ನು ಅಮರ್‌ನಾಥ್ ಎಸ್‌ವಿ ನಿರ್ದೇಶನ ಮಾಡ್ತಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಸಹ ಅವರೇ ರಚಿಸಿರುವುದು ವಿಶೇಷ. ಪ್ರೇಮಿದಿನಗಳ ಪ್ರಯುಕ್ತ ಫೆಬ್ರವರಿ 14 ರಂದು ಪುರುಷೋತ್ತಮ ಚಿತ್ರದ ಮುಹೂರ್ತ ಮಾಡಲಿದ್ದು, ಮೈಸೂರಿನ ವಿವಿಧ ಕಡೆಗಳಲ್ಲಿ ಚಿತ್ರೀಕರಣ ಮಾಡಲು ಯೋಜಿಸಿದ್ದಾರೆ.

  ಇನ್ನು ಶ್ರೀಧರ್ ವಿ ಸಂಭ್ರಮ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದು, ಕುಮಾರ್ ಎಂ ಛಾಯಾಗ್ರಹಣ ಇರಲಿದೆ. ಇನ್ನುಳಿದಂತೆ ಪಾತ್ರವರ್ಗ ಫೆಬ್ರವರಿ 14 ರಂದು ತಿಳಿಯಲಿದೆ.

  ಜಿಮ್ ರವಿ ಕುರಿತು

  ದೇಹದಾರ್ಢ್ಯ ವಿಭಾಗದಲ್ಲಿ 15 ಬಾರಿ ಭಾರತ ತಂಡವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ರವಿ ಪ್ರತಿನಿಧಿಸಿದ್ದಾರೆ. ನಾಲ್ಕು ಬಾರಿ ಭಾರತ ತಂಡದ ನಾಯಕನಾಗಿ, ಎರಡು ಬಾರಿ ಭಾರತ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಇಂಡೋ-ಪಾಕಿಸ್ತಾನ್ ಸ್ಪರ್ಧೆಯಲ್ಲಿ ಮೊದಲ ಸ್ಥಾನ - ಗೋಲ್ಡ್ ಮೆಡಲ್ ಪಡೆದಿದ್ದಾರೆ.

  ರಾಜ್ಯ ಸರ್ಕಾರದಿಂದ ಏಕಲವ್ಯ ಪ್ರಶಸ್ತಿ ಪಡೆದಿರುವ ಎ.ವಿ.ರವಿ ಅನೇಕ ಬಾರಿ ಮಿಸ್ಟರ್ ಇಂಡಿಯಾ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. 'ಭಾರತ ಶ್ರೀ', 'ಭಾರತ ಶ್ರೇಷ್ಠ', 'ಕರ್ನಾಟಕ ಶ್ರೀ', 'ಕರ್ನಾಟಕ ಶ್ರೇಷ್ಠ' ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಹಾಗೂ 90ಕ್ಕೂ ಹೆಚ್ಚು ಚಿನ್ನದ ಪದಕಗಳನ್ನ ಎ.ವಿ.ರವಿ ಪಡೆದಿದ್ದಾರೆ.

  ತಮಿಳುನಾಡಿನ ಯಶ್ ಅಭಿಮಾನಿಗಳಿಗೆ ಪ್ರತೀ ತಿಂಗಳು 8 ನೇ ತಾರೀಖು ವಿಶೇಷ ದಿನ | Yash

  ಎ.ವಿ.ರವಿ ಮಾಡಿರುವ ಸಾಧನೆ ಗುರುತಿಸಿ ಕೇಂದ್ರ ಸರ್ಕಾರ ಇನ್ ಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ ನಲ್ಲಿ ಇನ್ಸ್ ಪೆಕ್ಟರ್ ಆಗಿ ಕೆಲಸ ನೀಡಿದೆ. ತೆಲುಗಿನ ಮೆಗಾ ಸ್ಟಾರ್ ಚಿರಂಜೀವಿ, ಪವರ್ ಸ್ಟಾರ್ ಪವನ್ ಕಲ್ಯಾಣ್, ಜಗ್ಗೇಶ್, ಶರಣ್ ಸೇರಿದಂತೆ ಹಲವು ನಟರಿಗೆ ಜಿಮ್ ಟ್ರೈನಿಂಗ್ ಕೊಟ್ಟಿದ್ದಾರೆ ರವಿ.

  English summary
  Gym Ravi to play lead role for the first time in Purushotthama. Film launch on February 14. Amarnath SV directing the film produced by Ravi himself.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X