ದುನಿಯಾ ವಿಜಿ ಜೊತೆ ಜೈಲು ಸೇರಿರುವ ಪ್ರಸಾದ್ ಆರೋಗ್ಯದಲ್ಲಿ ಏರುಪೇರು
Recommended Video

ಜಿಮ್ ಟ್ರೈನರ್ ಮಾರುತಿ ಗೌಡ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ನಟ ದುನಿಯಾ ವಿಜಯ್, ಜಿಮ್ ಟ್ರೈನರ್ ಪ್ರಸಾದ್, ಡ್ರೈವರ್ ಪ್ರಸಾದ್ ಹಾಗೂ ಮಣಿ ಎಂಬುವರನ್ನ 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿ ಇಡಲಾಗಿದೆ.
ಸದ್ಯ ಪರಪ್ಪನ ಅಗ್ರಹಾರದ ಜೈಲಿನಲ್ಲಿ ಈ ನಾಲ್ವರೂ ಮುದ್ದೆ ಮುರಿಯುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ದುನಿಯಾ ವಿಜಯ್ ಜೊತೆಗೆ ಜೈಲಿನಲ್ಲಿ ಇರುವ ಜಿಮ್ ಟ್ರೈನರ್ ಪ್ರಸಾದ್ ಆರೋಗ್ಯದಲ್ಲಿ ಏರುಪೇರಾಗಿದೆ.

ಜೈಲಿನಲ್ಲಿ ಕೊಡುತ್ತಿರುವ ಊಟಕ್ಕೆ ಒಗ್ಗದೆ ಪ್ರಸಾದ್ ಅನಾರೋಗ್ಯಕ್ಕೀಡಾಗಿದ್ದಾರೆ. ಪ್ರಸಾದ್ ಪ್ರತಿ ನಿತ್ಯ 20 ಮೊಟ್ಟೆ ಹಾಗೂ ಚಿಕನ್ ಸೇವಿಸುತ್ತಿದ್ದರು. ಎರಡ್ಮೂರು ಗಂಟೆಗಳ ಕಾಲ ಜಿಮ್ ನಲ್ಲಿ ಕಸರತ್ತು ಮಾಡುತ್ತಿದ್ದರು. ಆದ್ರೆ, ಜೈಲಿನಲ್ಲಿ ಇದಕ್ಕೆಲ್ಲಾ ಅವಕಾಶ ಇಲ್ಲ. ಹೀಗಾಗಿ ಪ್ರಸಾದ್ ಆರೋಗ್ಯದಲ್ಲಿ ಏರುಪೇರಾಗಿದೆ.
ಸದ್ಯ ಜೈಲಿನ ಆಸ್ಪತ್ರೆಯಲ್ಲಿ ಪ್ರಸಾದ್ ಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಪ್ರಸಾದ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಾರದ ಹಿನ್ನಲೆಯಲ್ಲಿ ಇಂದು ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ.


Click it and Unblock the Notifications











