ನಟ ಧ್ರುವ ಸರ್ಜಾ ಮ್ಯಾನೇಜರ್ ಅಶ್ವಿನ್ ಬಂಧನ; ಇಲ್ಲಿದೆ ಮಾಹಿತಿ

ಕನ್ನಡ ಚಿತ್ರರಂಗದಲ್ಲಿ ಸಿನಿಮಾಗಳಿಗಿಂತ ವಿವಾದಗಳೇ ಹೆಚ್ಚು ಸದ್ದು ಮಾಡುತ್ತಿವೆ. ರೇಣುಕಾಸ್ವಾಮಿ ಪ್ರಕರಣದ ನಡುವೆ ಮತ್ತಷ್ಟು ಪ್ರಕರಣಗಳು ಸುದ್ದಿ ಆಗುತ್ತಿದೆ. ಇದೀಗ ಹಲ್ಲೆ ಪ್ರಕರಣದಲ್ಲಿ ನಟ ಧ್ರುವ ಸರ್ಜಾ ಮ್ಯಾನೇಜರ್ ಅಶ್ವಿನ್ ಅರೆಸ್ಟ್ ಆಗಿದ್ದಾರೆ ಎನ್ನಲಾಗ್ತಿದೆ.

ಕೆಲ ದಿನಗಳ ಹಿಂದೆ ಜಿಮ್ ಟ್ರೈನರ್ ಪ್ರಶಾಂತ್ ಪೂಜಾರಿ ಎಂಬುವವರ ಮೇಲೆ ಹಲ್ಲೆ ನಡೆದಿತ್ತು. ಆತನ ಮೇಲೆ ಹರ್ಷ ಮತ್ತು ಸುಭಾಷ್ ಹಲ್ಲೆ ಮಾಡಿದ್ದರು. ಆದರೆ ಈ ಘಟನೆಯ ಮಾಸ್ಟರ್ ಮೈಂಡ್ ಅಶ್ವಿನ್ ಎನ್ನುವುದು ಪೊಲೀಸರ ವಿಚಾರಣೆ ವೇಳೆ ಬಯಲಾಗಿದೆ. ಹಾಗಾಗಿ ಬನಶಂಕರಿ ಠಾಣೆ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Gym Trainer Prashanth Poojary Assault Case Actor Dhruva sarja s Manager ashwin arrested

ಜಿಮ್ ಟ್ರೈನರ್ ಆಗಿದ್ದ ಪ್ರಶಾಂತ್‌, ನಟ ಧ್ರುವ ಸರ್ಜಾಗೆ ಬಹಳ ಆಪ್ತರಾಗಿದ್ದರು. ಆತನನ ಮೇಲೆ ಹಲ್ಲೆ ಮಾಡಿಸಿದ್ದು ಸ್ವತಃ ಧ್ರುವ ಸರ್ಜಾ ಬಳಿ ಕೆಲಸ ಮಾಡಿಕೊಂಡಿದ್ದ ನಾಗೇಂದ್ರ ಎನ್ನುವುದು ಗೊತ್ತಾಗಿತ್ತು. ಇನ್ನು ನಾಗೇಂದ್ರ ಜೊತೆ ಕೈ ಜೋಡಿಸಿದ್ದು ಇದೇ ಅಶ್ವಿನ್ ಎಂದು ಹೇಳಲಾಗುತ್ತಿದೆ. ಧ್ರುವ- ಪ್ರಶಾಂತ್ ಪೂಜಾರಿ ಆತ್ಮೀಯ ಒಡನಾಟ ಸಹಿಸಿಕೊಳ್ಳಲು ಆಗದೇ ಈ ರೀತಿ ಹಲ್ಲೆಗೆ ನಾಗೇಂದ್ರ, ಅಶ್ವಿನ್ ಪ್ಲ್ಯಾನ್ ಮಾಡಿದ್ದರು ಎನ್ನಲಾಗ್ತಿದೆ.

ಪ್ರಶಾಂತ್ ಮೇಲೆ ತಾವೇ ಹಲ್ಲೆ ಮಾಡಿದರೆ ಸಿಕ್ಕಿ ಬೀಳುತ್ತೀವಿ ಎಂದು ಸ್ನೇಹಿತರ ಕೈಯಲ್ಲಿ ಹಲ್ಲೆಗೆ ಸ್ಕೆಚ್ ಹಾಕಿದ್ದರು ಎಂದು ತನಿಖೆ ವೇಳೆ ಗೊತ್ತಾಗಿದೆ. ನಾಗೇಂದ್ರ ತಮ್ಮ ಊರಿನ(ಕನಕಪುರ) ಹುಡುಗರಾದ ಹರ್ಷ ಹಾಗೂ ಸುಭಾಷ್ ಮೂಲಕ ಪ್ರಶಾಂತ್ ಮೇಲೆ ಹಲ್ಲೆ ಮಾಡಿಸಿದ್ದರು. ಇದೀಗ ಪೊಲೀಸರ ತನಿಖೆ ವೇಳೆ ಧ್ರುವ ಮ್ಯಾನೇಜರ್ ಅಶ್ವಿನ್ ಪಾತ್ರ ಇರುವುದು ಬೆಳಕಿಗೆ ಬಂದಿದೆ.

Gym Trainer Prashanth Poojary Assault Case Actor Dhruva sarja s Manager ashwin arrested

ಅಂದಹಾಗೆ ಮೇ 26ರಂದು ರಾತ್ರಿ ಜಿಮ್ ಟ್ರೈನರ್ ಪ್ರಶಾಂತ್ ಪೂಜಾರಿ ಮೇಲೆ ಹಲ್ಲೆ ನಡೆದಿತ್ತು ಎಂದು ಹೇಳಲಾಗಿದೆ. ಇದೀಗ ಪೊಲೀಸರು ಅಶ್ವಿನ್ ಬಂಧನ ಮಾಡಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಅಶ್ವಿನ್‌ಗೆ ದುಬಾರಿ ಕಾರ್ ಅನ್ನು ಧ್ರುವ ಸರ್ಜಾ ಉಡುಗೊರೆಯಾಗಿ ಕೊಟ್ಟಿದ್ದು ಸುದ್ದಿ ಆಗಿತ್ತು.

ಧ್ರುವ ಸರ್ಜಾ ಬಳಿ ನಾಗೇಂದ್ರ ಕಾರ್ ಡ್ರೈವರ್ ಆಗಿ ಕೆಲಸ ಮಾಡಿಕೊಂಡಿದ್ದ. ಪ್ರಶಾಂತ್ ಹತ್ತಿರವಾದರೆ ನಾವು ದೂರ ಆಗಬೇಕಾಗುತ್ತದೆ ಎಂದು ಹೆಸರಿ ನಾಗೇಂದ್ರ ಆತನ ಮೇಲೆ ಹಲ್ಲೆಗೆ ಪ್ಲ್ಯಾನ್ ಮಾಡಿದ್ರಾ? ಎನ್ನುವ ಅನುಮಾನ ಮೂಡುತ್ತಿದೆ. ಇನ್ನು ಅಶ್ವಿನ್ ಯಾಕೆ ಇದಕ್ಕೆ ಸಾಥ್ ನೀಡಿದ ಎನ್ನುವ ಬಗ್ಗೆಯೂ ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಒಂದ್ಕಡೆ ದರ್ಶನ್‌ಗೆ ಆಪ್ತರ ಅವರಿಗೆ ಸಂಕಷ್ಟ ತಂದೊಡ್ಡುತ್ತಿದ್ದಾರೆ. ಇದೀಗ ಧ್ರುವ ಸರ್ಜಾ ಮ್ಯಾನೇಜರ್ ಅಶ್ವಿನ್ ಹಲ್ಲೆ ಪ್ರಕರಣದಲ್ಲಿ ಭಾಗಿ ಆಗಿರುವುದು ಚರ್ಚೆ ಹುಟ್ಟಾಕ್ಕಿದೆ. ಸದ್ಯ ಧ್ರುವ ಸರ್ಜಾ ನಟನೆಯ 2 ಸಿನಿಮಾಗಳು ಬಿಡುಗಡೆ ಆಗಬೇಕಿದೆ. ಅಕ್ಟೋಬರ್ 11ಕ್ಕೆ ಮಾರ್ಟಿನ್ ಸಿನಿಮಾ ತೆರೆಗೆ ಬರಲಿದೆ.

ಡಿಸೆಂಬರ್‌ನಲ್ಲಿ ಪ್ರೇಮ್ ನಿರ್ದೇಶನದ 'ಕೆಡಿ' ಸಿನಿಮಾ ರಿಲೀಸ್ ಆಗುವುದು ಪಕ್ಕಾ ಆಗಿದೆ. ಎರಡೂ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲು ಸಜ್ಜಾಗಿವೆ. ಈಗಾಗಲೇ ಧ್ರುವ ಸರ್ಜಾ ಪ್ರಚಾರ ಕೆಲಸಗಳಲ್ಲಿ ಭಾಗಿ ಆಗುತ್ತಿದ್ದಾರೆ. ಎ. ಪಿ ಅರ್ಜುನ್ ನಿರ್ದೇಶನದ 'ಮಾರ್ಟಿನ್' ಸಿನಿಮಾ ಹಲವು ಭಾಷೆಗಳಿಗೆ ಡಬ್ ಆಗಿದೆ. ಉದಯ್ ಕೆ. ಮೆಹ್ತಾ ಚಿತ್ರಕ್ಕೆ ಹಣ ಹೂಡಿದ್ದಾರೆ.

More from Filmibeat

English summary
Banashankari Police arrest Actor Dhruva sarja's Manager ashwin;
Read more about: dhruva sarja sandalwood kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X