For Quick Alerts
  ALLOW NOTIFICATIONS  
  For Daily Alerts

  'ತಂದೆಗಿಂತಲೂ ಎತ್ತರಕ್ಕೆ ಬೆಳೆಯಲಿ': ಅಪ್ಪು ಹುಟ್ಟುಹಬ್ಬಕ್ಕೆ ಮಾಜಿ ಪ್ರಧಾನಿಯ ಶುಭಾಶಯ

  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಇನ್ನೊಂದೆ ದಿನ ಬಾಕಿ ಇದೆ. ಈಗಾಗಲೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹುಟ್ಟುಹಬ್ಬದ ಶುಭಾಶಗಳನ್ನು ತಿಳಿಸುತ್ತಿದ್ದಾರೆ. ಜೊತೆಗೆ ಪವರ್ ಸ್ಟಾರ್ ಬಗ್ಗೆ ಹಾಡುಗಳನ್ನು ಮಾಡಿ ರಿಲೀಸ್ ಮಾಡುತ್ತಿದ್ದಾರೆ.

  ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ ಪುನೀತ್ ರಾಜ್ ಕುಮಾರ್ | Puneeth Rajkumar | Birthday | Filmibeat Kannada

  ಮಾರಣಾಂತಿಕ ಕೊರೊನಾ ವೈರಸ್ ಪರಿಣಾಮ ಪವರ್ ಸ್ಟಾರ್ ಈ ಬಾರಿಯ ಹುಟ್ಟುಹಬ್ಬ ಆಚರಣೆಯನ್ನು ರದ್ದು ಮಾಡಿದ್ದಾರೆ. ಆದರೆ ಅಭಿಮಾನಿಗಳು, ಚಿತ್ರರಂಗದ ಗಣ್ಯರು, ಸ್ನೇಹಿತರು ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ. ಸದ್ಯ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಸಹ ಪವರ್ ಹುಟ್ಟುಹಬ್ಬಕ್ಕೂ ಒಂದು ದಿನ ಮೊದಲೆ ಶುಭಾಶಯ ತಿಳಿಸಿದ್ದಾರೆ.

  ಒಂದೇ ವಿಷಯಕ್ಕೆ ಪುನೀತ್ ರಾಜ್‌ಕುಮಾರ್ ಅನ್ನು ಹೊಗಳಿ ಡಿಕೆಶಿಯನ್ನು ತೆಗಳಿದ ಸಚಿವಒಂದೇ ವಿಷಯಕ್ಕೆ ಪುನೀತ್ ರಾಜ್‌ಕುಮಾರ್ ಅನ್ನು ಹೊಗಳಿ ಡಿಕೆಶಿಯನ್ನು ತೆಗಳಿದ ಸಚಿವ

  "45ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ. ಅವರ ಬಗ್ಗೆ ವಿಶೇಷವಾಗಿ ಚಲನ ಚಿತ್ರರಂಗದಲ್ಲಿ ಯಶಸ್ಸನ್ನು ಕಣ್ಣಿಂದ ನೋಡುತ್ತಿದ್ದೇವೆ. ಚಿಕ್ಕ ವಯಸ್ಸಿನಲ್ಲಿಯೆ ತಂದೆ ಜೊತೆ ಭಕ್ತ ಪ್ರಹ್ಲಾದ ಅಂಥಹ ಸಿನಿಮಾದಲ್ಲಿ ಮಾಡಿ ಅದ್ಭುತ ಕೀರ್ತಿ ಗಳಿಸಿದವರು. ೪೫ನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ನಾನು ಅವರಿಗೆ ಅತ್ಯಂತ ಕೀರ್ತಿಶಾಲಿಯಾಗಿ, ತಂದೆಗಿಂತ ಹೆಚ್ಚು ಪ್ರಶಸ್ತಿಗಳು ಬರಲಿ ಎಂದು ನಾನು ಹಾರೈಸುತ್ತೇನೆ" ಎಂದು ಹೇಳಿದ್ದಾರೆ. ಈ ವಿಡಿಯೋ ಪವರ್ ಸ್ಟಾರ್ ಅಭಿಮಾನಿ ಬಳಗದಲ್ಲಿ ಹರಿದಾಡುತ್ತಿದೆ.

  ಅಂದ್ಹಾಗೆ ಸಾಕಷ್ಟು ಜನ ಅಪ್ಪುಗೆ ಶುಭಕೋರುತ್ತಿದ್ದಾರೆ. ಅಭಿಮಾನಿಗಳು ಈಗಾಗಲೆ ಹುಟ್ಟುಹಬ್ಬದ ಪ್ರಯುಕ್ತ ಪುನೀತ್ ಕಾಮನ್ ಡಿಪಿ ರಿಲೀಸ್ ಮಾಡಿದ್ದಾರೆ. ಪ್ರತಿವರ್ಷ ಅಪ್ಪು ಮನೆ ಮುಂದೆ ಅಭಿಮಾನಿಗಳು ಬಂದು ಜಮಾಯಿಸಿರುತ್ತಿದ್ದರು. ಪವರ್ ಸ್ಟಾರ್ ನೋಡಲು, ಶುಭಾಶಯ ತಿಳಿಸಲು ರಾತ್ರಿಯೆಲ್ಲ ಮನೆ ಮುಂದೆ ಕ್ಯೂ ನಿಂತಿರುತ್ತಿದ್ದರು.

  ಆದರೆ ಈ ಬಾರಿ ಈ ಸಂಭ್ರಮಕ್ಕೆಲ್ಲ ಬ್ರೇಕ್ ಬಿದ್ದಿದೆ. ಸದ್ಯ ಪುನೀತ್ ರಾಜ್ ಕುಮಾರ್ ಯುವರತ್ನ ಮತ್ತು ಜೇಮ್ಸ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ ಯುವರತ್ನ ಟಾಕಿ ಭಾಗದ ಚಿತ್ರೀಕರಣ ಮುಗಿಸಿದ್ದು, ಹಾಡಿನ ಚಿತ್ರೀಕರಣ ಒಂದು ಬಾಕಿಯುಳಿಸಿಕೊಂಡಿದೆ. ಜೇಮ್ಸ್ ಚಿತ್ರದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಹುಟ್ಟಹಬ್ಬದ ಪ್ರಯುಕ್ತ ಯುವರತ್ನ ಚಿತ್ರದ ಟೀಸರ್ ಅಭಿಮಾನಿಗಳಿಗೆ ಗಿಫ್ಟ್ ಆಗಿ ಸಿಗಲಿದೆ.

  English summary
  Former Prime Minister H.D Deve Gowda wishes Puneeth Rajkumar for his birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X