ನಿಖಿಲ್ ಮದುವೆಗೆ ಭರ್ಜರಿ ತಯಾರಿ: HDK ದಂಪತಿಯಿಂದ ಜಾಗ ಪರಿಶೀಲನೆ
ಸ್ಯಾಂಡಲ್ ವುಡ್ ನಟ ನಿಖಿಲ್ ಕುಮಾರ್ ಮದುವೆಗೆ ಭರ್ಜರಿ ತಯಾರಿನಡೆಯುತ್ತಿದೆ. ಏಪ್ರಿಲ್ ನಲ್ಲಿ ನಿಖಿಲ್ ರೇವತಿ ಜೊತೆ ಹಸೆಮಣೆ ಏರುತ್ತಿದ್ದಾರೆ. ರಾಮನಗರ-ಚನ್ನಪಟ್ಟಣ ಮಧ್ಯೆ ನಡೆಯಲಿರುವ ಅದ್ದೂರಿ ಮದುವೆ ಸಮಾರಂಭಕ್ಕೆ ಈಗಾಗಲೆ ಜಾಗ ಸಿದ್ಧವಾಗುತ್ತಿದೆ. ಇಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಅವರ ಪತ್ನಿ ಅನಿತಾ ಕುಮಾರ ಸ್ವಾಮಿ ಮದುವೆ ನಡೆಯುವ ಜಾಗಕ್ಕೆ ಭೇಟಿ ನೀಡಿ ಸ್ವಚ್ಚತಾ ಕಾರ್ಯದ ಬಗ್ಗೆ ಪರಿಶೀಲನೆ ನಡೆಸಿದರು.
ನಿಖಿಲ್ ಮದುವೆಗೆ ನಿಗದಿ ಪಡಿಸಿರುವ ಸ್ಥಳ ಸುಮಾರು 54 ಎಕರೆ ಇದೆ. ಈ ಜಾಗದಲ್ಲಿ ಸೆಂಟ್ರೆಲ್ ಮುಸ್ಲಿಂ ಅಸೋಸಿಯೇಷನ್ (CMA) ಸೇರಿದ 22 ಎಕರೆ, ಉದ್ಯಮಿಗೆ ಸೇರಿದ 23 ಎಕರೆ ಹಾಗೂ ಉಳಿದ ಭೂಮಿ ಇತರರ ಒಡೆತನದಲ್ಲಿದೆ. ರಾಮನಗರದಿಂದ 5 ಕಿ.ಮೀ ಹಾಗೂ ಚನ್ನಪಟ್ಟಣದಿಂದ 8 ಕಿ.ಮೀ ಅಂತರದಲ್ಲಿದ್ದು. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ಈ ಜಾಗವಿದೆ.
ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ಇರುವುದರಿಂದ ವಿವಾಹ ಕಾರ್ಯಕ್ಕೆ ಸೂಕ್ತವಾದ ಸ್ಥಳವೆಂಬ ನಿರ್ಧಾರ ಮಾಡಿರುವುದಾಗಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಇನ್ನು ಪುತ್ರನ ವಿವಾಹಕ್ಕೆ ಕ್ಷೇತ್ರದ ಜನರಿಗೆ ಆಮಂತ್ರಣ ನೀಡಿದ್ದಾರೆ. ರಾಮನಗರದ ಕೈಲಾಂಚ ಗ್ರಾಮದಲ್ಲಿ ಶ್ರೀಲಕ್ಷ್ಮೀವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಮಹಾದ್ವಾರ ಉದ್ಘಾಟಿಸಿದ ಹೆಚ್ಡಿಕೆ ದಂಪತಿ, ನಂತರ ಕ್ಷೇತ್ರದ ಜನತೆಗೆ ಪುತ್ರನ ಮದುವೆಗೆ ಅಹ್ವಾನ ನೀಡಿದರು.

ಇನ್ನು ಇದೆ ಸಮಯದಲ್ಲಿ ಮಾತನಾಡಿದ ಕುಮಾರಸ್ವಾಮಿ "ಎಲ್ಲಾ ನಾಯಕರು ತಮ್ಮ ಮನೆಯ ಕಾರ್ಯಕ್ರಮಗಳನ್ನು ಬೆಂಗಳೂರಿನಲ್ಲಿ ಮಾಡಿ, ದೊಡ್ಡ ದೊಡ್ಡ ನಾಯಕರನ್ನು ಕರೆದು ಸಂಭ್ರಮಿಸುತ್ತಾರೆ. ಆದರೆ ನನ್ನ ಮಗನ ಮದುವೆಗೆ ದೊಡ್ಡ ದೊಡ್ಡ ನಾಯಕರು ಬರದಿದ್ದರು ಪರವಾಗಿಲ್ಲ, ನನ್ನನ್ನು ಬೆಳೆಸಿರುವ ಜನ ನೀವು, ನನ್ನ ಕುಟುಂಬ ನಿಮ್ಮ ನಡುವೆಯೇ ಮದುವೆ ಮಾಡಬೇಕೇಂದು ಹೆದ್ದಾರಿ ಪಕ್ಕದಲ್ಲೇ ನಿಗದಿ ಮಾಡಿದ್ದೇವೆ, ಜಿಲ್ಲೆಯ ಪ್ರತಿ ಮನೆಗೂ ಮದುವೆ ಅಹ್ವಾನ ಪತ್ರಿಕೆ ತಲುಪಿಸುವ ವ್ಯವಸ್ಥೆ ಮಾಡುತೇನೆ ಅಂದು ನೀವು ಬಂದು ನವ ದಂಪತಿಗೆ ಆಶೀರ್ವಾದ ಮಾಡಿ ನನ್ನೊಡನೆ ಊಟ ಮಾಡಿದರೆ ಅದೇ ನನಗೆ ನೆಮ್ಮದಿ" ಎಂದು ಭಾವನಾತ್ಮಕವಾಗಿ ಜನರಿಗೆ ಅಹ್ವಾನ ನೀಡಿದರು.


Click it and Unblock the Notifications











