ನಟನೆ ಶುರು ಮಾಡಿದ ಕವಿ ಎಚ್.ಎಸ್.ವೆಂಕಟೇಶ್ ಮೂರ್ತಿ

By Naveen

'ಎಲ್ಲುಂಟು ಒಲವಿರದ ಜಾಗ..' ಎಂದು ಬರೆದ ಕವಿ ಎಚ್.ಎಸ್.ವೆಂಕಟೇಶ್ ಮೂರ್ತಿ ಇತ್ತೀಚಿಗಷ್ಟೆ ತಮ್ಮ ನಿರ್ದೇಶಕದ ಸಿನಿಮಾ ಮೊದಲ ಸಿನಿಮಾವನ್ನು ಶುರು ಮಾಡಿದ್ದರು. 'ಹಸಿರು ರಿಬ್ಬನ್' ಎಂಬ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದ ಎಚ್ಚೆಸ್ವಿ ಆ ಸಿನಿಮಾದ ಬಿಡುಗಡೆಗೆ ಮೊದಲೇ ಮತ್ತೊಂದು ಸಿನಿಮಾದಲ್ಲಿ ನಟನೆ ಮಾಡುತ್ತಿದ್ದಾರೆ.

'ಅಮೃತ ವಾಹಿನಿ' ಎಂಬ ಹೊಸ ಚಿತ್ರದಲ್ಲಿ ಈಗ ಎಚ್.ಎಸ್.ವೆಂಕಟೇಶ್ ಮೂರ್ತಿ ನಟಿಸುತ್ತಿದ್ದಾರೆ. ಈ ಸಿನಿಮಾದ ಮುಹೂರ್ತ ನಿನ್ನೆ (ಮೇ 6) ರಂದು ನೆರವೇರಿದೆ. ಈ ಸಿನಿಮಾದ ಮುಖ್ಯ ಪಾತ್ರದಲ್ಲಿ ಎಚ್ಚೆಸ್ವಿ ನಟಿಸುತ್ತಿದ್ದಾರೆ. ನರೇಂದ್ರ ಬಾಬು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಅವರು 'ಪಲ್ಲಕ್ಕಿ', 'ಓ ಗುಲಾಬಿಯೇ' ಹಾಗೂ 'ಯುವ' ಸಿನಿಮಾವನ್ನು ನಿರ್ದೇಶನ ಮಾಡಿದ್ದರು.

H.S.Venkatesh Murthy playing lead role in movie Amrutha Vahini movie.

ಎಚ್ಚೆಸ್ವಿ ಅವರೊಂದಿಗೆ ವೈದ್ಯ ಶಿವಮೊಗ್ಗ, ಸ್ವಸ್ತಿಕ್ ಶಂಕರ್, ಜಯಪ್ರಕಾಶ್, ವತ್ಸಲಾ ಮೋಹನ್ ನಟಿಸಿದ್ದಾರೆ. ಸಂಪತ್ ಕುಮಾರ್ ಎಂಬುವವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಗಿರಿಧರ್ ದಿವಾನ್ ಛಾಯಾಗ್ರಹಣ ಹಾಗೂ ಮೋಹನ್ ಸಂಗೀತ ಚಿತ್ರದಲ್ಲಿದೆ. ರಾಘವೇಂದ್ರ ಪಾಟೀಲ್ ಅವರ ಕಾದಂಬರಿ ಆಧಾರಿತ ಚಿತ್ರ ಇದಾಗಿದೆ. ಪ್ರಸ್ತುತ ಜೀವನ ಶೈಲಿಗೆ ಹತ್ತಿರವಾದ ಕತೆ ಈ ಚಿತ್ರದಲ್ಲಿ ಇದೆ.

More from Filmibeat

English summary
Kannada poet H.S.Venkatesh Murthy playing lead role in movie Amrutha Vahini movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X