ದರ್ಶನ್ 'ಕುಬೇರ' ಆದರೂ ದಿನಕರ್ 'ಕುಚೇಲ'ನಂತೆ ಬಾಡಿಗೆ ಮನೆಯಲ್ಲಿರೋದು ಯಾಕೆ ಗೊತ್ತಾ..?
ದರ್ಶನ್ ಮತ್ತು ದಿನಕರ್ ಒಂದ್ಕಾಲದಲ್ಲಿ ರಾಮ-ಲಕ್ಷ್ಮಣರಂತೆ ಇದ್ದ ಸಹೋದರರು. ಆದರೆ ಈಗ ಆ ಸಂಬಂಧ ಮುರಿದು ಬಿದ್ದು ಅನೇಕ ವರ್ಷಗಳಾಗಿವೆ ಅನ್ನುವ ಮಾತು ಕೇಳಿ ಬರುತ್ತಿದೆ. ಮತ್ತೊಮ್ಮೆ ದರ್ಶನ್ ಅತ್ತ ಜೈಲು ಪಾಲಾದ ಬೆನ್ನಲ್ಲಿಯೇ ಇತ್ತ ದಿನಕರ್ ತೂಗುದೀಪ್ ಅವರ ಆರ್ಥಿಕ ಸ್ಥಿತಿ ಅರಿಯುವ ಕೆಲಸವನ್ನು ಅನೇಕರು ಮಾಡುತ್ತಿದ್ದಾರೆ.
ಅಣ್ಣ ದರ್ಶನ್ ನೋಡಿದರೆ ಕುಬೇರ ತಮ್ಮ ದಿನಕರ್ ಮಾತ್ರ ಕುಚೇಲ ಎನ್ನುವ ಮಾತುಗಳನ್ನಾಡುತ್ತಿದ್ದಾರೆ. ದಿನಕರ್ ತೂಗುದೀಪ ಇವತ್ತು ಕೂಡ ಬಾಡಿಗೆ ಮನೆಯಲ್ಲಿ ವಾಸ ಮಾಡುವುತ್ತಿರುವುದಕ್ಕೆ ಅನೇಕರು ಬೇಸರವನ್ನೂ ಮಾಡಿಕೊಂಡಿದ್ದಾರೆ. ದಿನಕರ್ ತೂಗುದೀಪ್ ಹಣಕಾಸಿನ ಸಮಸ್ಯೆಯನ್ನ ಎದುರಿಸುತ್ತಿದ್ದಾರೆ ಎಂದು ಬಹುತೇಕರು ಅಂದುಕೊಂಡಿದ್ದಾರೆ. ಆದರೆ ಈಗ ನಿರ್ದೇಶಕ ಎಚ್ ವಾಸು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ನೀವೆಲ್ಲರೂ ಅಂದುಕೊಂಡತೆ ದಿನಕರ್ ತೂಗುದೀಪ್ ಬಡತನದ ಬೇಗೆಯಲ್ಲಿ ಬೇಯುತ್ತಿಲ್ಲ ಎಂದಿದ್ದಾರೆ.

ಹೌದು, ಮಾಧ್ಯಮಗಳಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಎಚ್. ವಾಸು, ದರ್ಶನ್ ಸಹೋದರ ದಿನಕರ್ ಬಾಡಿಗೆ ಮನೆಯಲ್ಲಿರುವುದು ನಿಜಾ. ಆದರೆ ಆ ಮನೆ ಬಡವರ ಮನೆಯಂತೆ ಇಲ್ಲ. ಎರಡು ಬೆಡ್ ರೂಮ್ ಹೊಂದಿರುವ ಆ ಮನೆ ಸ್ಟಾರ್ ಮನೆಯಂತೆಯೇ ಇದೆ ಅಂದಿದ್ದಾರೆ.
ಇನ್ನೂ.. ಮನೆಯ ವಿಚಾರದಲ್ಲಿ ದಿನಕರ್ ತೂಗುದೀಪ್ ಅವರಿಗೆ ಕೆಲ ಕನಸುಗಳಿವೆ..ಕಲ್ಪನೆಗಳಿವೆ.. ತಾವು ಕಟ್ಟಿಸುವ ಮನೆ ಹೀಗೆ ಇರಬೇಕೆಂಬ ಆಸೆ ಇದೆ. ಇನ್ನೂ ಸ್ವಂತ ಮನೆಯನ್ನ ಸ್ವಂತ ದುಡ್ಡಿನಲ್ಲಿಯೇ ಕಟ್ಟಬೇಕು ಎಂಬ ಹಠ ಕೂಡ ದಿನಕರ್ ಅವರಿಗೆ ಇದೆ. ಹೀಗಾಗಿಯೇ ದಿನಕರ್ ತೂಗುದೀಪ್ ಇನ್ನೂ ಬಾಡಿಗೆ ಮನೆಯಲ್ಲಿದ್ದಾರಷ್ಟೇ ಎಂದು ಎಚ್.ವಾಸು ಹೇಳಿದ್ದಾರೆ.ಇಲ್ಲದಿದ್ದರೆ ದಿನಕರ್ ಗೆ ಒಂದು ಮನೆ ಕೊಡಿಸುವುದು ದರ್ಶನ್‌ಗೆ ಏನು ಕಷ್ಟಾನಾ ಎಂದು ಪ್ರಶ್ನೆಯನ್ನೂ ಎಚ್ ವಾಸು ಕೇಳಿದ್ದಾರೆ.

ಇನ್ನೂ ಅಣ್ಣ ಮತ್ತು ತಮ್ಮನ ನಡುವೆ ಹೊಂದಾಣಿಕೆ ಹೇಗಿದೆ ಎನ್ನುವುದು ಅವರಿಗೆ ಗೊತ್ತು ಎಂದಿರುವ ಎಚ್.ವಾಸು, ಒಮ್ಮೆ ಜಗಳ ಮಾಡಿಕೊಳ್ಳಬಹುದು. ಆದರೆ ಆ ನಂತರ ಇಬ್ಬರು ಒಟ್ಟಿಗೆ ಸೇರುತ್ತಾರೆ ಎಂದಿದ್ದಾರೆ. ದಿನಕರ್ ತೂಗುದೀಪ ಸೈಟ್ ತೆಗೆದುಕೊಂಡಿದ್ದಾರೆ. ಕೆಎಲ್‌ಇ ಕಾಲೇಜ್ ಬಳಿ ಮನೆ ಕಟ್ಟಿಸಬೇಕೆಂದು ಕೂಡ ಅಂದುಕೊಂಡಿದ್ದಾರೆ ಎಂದು ಕೂಡ ಎಚ್.ವಾಸು ಹೇಳಿದ್ದಾರೆ.
ಮುಂದುವರೆದು ಮಾತನಾಡಿರುವ ಎಚ್.ವಾಸು ಈ ಹಿಂದೆ ದರ್ಶನ್ ಅವರ ತಾಯಿಗೆ ಕ್ಯಾನ್ಸರ್ ಆದಾಗ ದರ್ಶನ್ ಅವರು ಹುಡುಗರನ್ನು ಇಟ್ಟಿದ್ದರು. ಇನ್ನೂ ಗಂಡ ಅತ್ಯಂತ ಪ್ರೀತಿಯಿಂದ ಕಟ್ಟಿಸಿದ ಮೈಸೂರಿನ ಮನೆಯಲ್ಲೇ ಇರಬೇಕು ಅನ್ನುವುದು ಅವರ ಆಸೆ. ಹೀಗಾಗಿಯೇ ಅವರು ಮೈಸೂರಿನಲ್ಲಿ ಇದ್ದಾರೆ ಅಷ್ಟೇ, ಅದನ್ನು ಹೊರತು ಪಡಿಸಿ ಬೇರೆ ಯಾವ ಕಾರಣವೂ ಇಲ್ಲ ಎಂದಿದ್ದಾರೆ. ತುಂಬ ಚೆನ್ನಾಗಿ ಓಡುವ ಕುದುರೆ ಇನ್ನೂ ಚೆನ್ನಾಗಿ ಓಡಲಿ ಅಂತ ಚಾಟಿ ಏಟು ನೀಡುತ್ತಾರೆ. ಚೆನ್ನಾಗಿ ಹಣ್ಣು ಬಿಡುವ ಮರಕ್ಕೆ ಜನರು ಕಲ್ಲು ಹೊಡೆಯುತ್ತಾರೆ. ಹಾಗಾಗಿ ಜನರು ದರ್ಶನ್ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ತಮ್ಮ ಬೇಸರವನ್ನೂ ಹೊರ ಹಾಕಿದ್ದಾರೆ.

ಅಂದ್ಹಾಗೇ ದರ್ಶನ್ ಅವರಿಗೆ ಎಚ್. ವಾಸು ನಾಲ್ಕು ಸಿನಿಮಾಗಳನ್ನು ನಿರ್ದೇಶನ ಮಾಡಿದವರು. ಲಾಲಿ ಹಾಡು', 'ಇಂದ್ರ', 'ವಿರಾಟ್' ಮತ್ತು ಭಗವಾನ್ ಅಂತಹ ಚಿತ್ರಗಳ ಮೂಲಕ ದರ್ಶನ್ ವೃತ್ತಿ ಜೀವನಕ್ಕೆ ತಮ್ಮದೇ ಕಾಣಿಕೆಯನ್ನು ಕೊಟ್ಟವರು ಎಚ್. ವಾಸು. ಇಂತಹ ಎಚ್, ವಾಸು ತಮ್ಮ ಮತ್ತು ದರ್ಶನ್ ನಡುವೆ ಇದ್ದ ಒಡನಾಟವನ್ನು ಅನೇಕ ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ. 'ಮನುಷ್ಯ ಒಂದು ತಪ್ಪು ಮಾಡಿದ ತಕ್ಷಣ ಒಂದಕ್ಕೊಂದು ಲಿಂಕ್ ಆಗುತ್ತದೆ. ಅದು ಸಹಜ. ಎಲ್ಲರೂ ಮಾತನಾಡುತ್ತಾರೆ. ಚೆನ್ನಾಗಿದ್ದಾಗ ಯಾರೂ ಆ ವಿಚಾರಗಳ ಬಗ್ಗೆ ಮಾತನಾಡುವುದೇ ಇಲ್ಲ ಎಂದು ತಮ್ಮ ಮನದ ನೋವುಗಳನ್ನು ಹಂಚಿಕೊಂಡಿದ್ಧಾರೆ ಎಚ್.ವಾಸು.


Click it and Unblock the Notifications











