For Quick Alerts
  ALLOW NOTIFICATIONS  
  For Daily Alerts

  'ಸಿನಿಮಾರಂಗ ಅಂದ್ರೆ ಕಲೆ, ಸಾಹಿತ್ಯ, ಮೋಜು-ಮಸ್ತಿನೂ ಇದೆ': ಎಚ್ ವಿಶ್ವನಾಥ್

  |

  ಕನ್ನಡ ಚಲನಚಿತ್ರ ನಟ ದರ್ಶನ್‌ಗೆ ಸಂಬಂಧಿಸಿದಂತೆ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಎಂಎಲ್‌ಸಿ ಎಚ್‌ ವಿಶ್ವನಾಥ್ ''ಟಿವಿಗಳಲ್ಲಿ ಬರಿ ಮೋಜು ಮಜಾ ಮಸ್ತಿಯನ್ನೇ ತೋರಿಸಲಾಗ್ತಾ ಇದೆ. ಅದೇನಾದ್ರು ಇದ್ದರೆ ಅವರ ಪಾಡಿಗೆ ಸರಿ ಮಾಡಿಕೊಳ್ಳುತ್ತಾರೆ ಬಿಡಿ'' ಎಂದಿದ್ದಾರೆ.

  ''ನಟ ದರ್ಶನ್ ಕನ್ನಡನಾಡಿನ ಪ್ರಸಿದ್ಧ ಚಲನಚಿತ್ರ ನಟರು ಹಾಗೂ ಮೈಸೂರಿನವರು. ಅವರ ತಂದೆ ತೂಗುದೀಪ ಶ್ರೀನಿವಾಸ್ ಸಹ ಮೈಸೂರಿನವರು. ಬಹಳ ದೊಡ್ಡದಾಗಿ ಬೆಳೆದಿದ್ದಾರೆ. ಕಳೆದ ಮೂರು ದಿನಗಳಿಂದ ಮಾಧ್ಯಮಗಳಲ್ಲಿ ಬರಿ ದರ್ಶನ್, ದರ್ಶನ್ ಅಂತ ಬರ್ತಿದೆ. ಅದೇನೋ ನನಗೂ ಅರ್ಥ ಆಗ್ತಿಲ್ಲ'' ಎಂದು ಬೇಸರ ವ್ಯಕ್ತಪಡಿಸಿದರು.

  'ಕ್ಷಮೆ ಕೇಳಿ, ಇಲ್ಲ ಅಂದ್ರೆ ಇನ್ನು ತೇಜೋವಧೆ ಆಗುತ್ತೆ'- ಇಂದ್ರಜಿತ್ 'ಕ್ಷಮೆ ಕೇಳಿ, ಇಲ್ಲ ಅಂದ್ರೆ ಇನ್ನು ತೇಜೋವಧೆ ಆಗುತ್ತೆ'- ಇಂದ್ರಜಿತ್

  ''ಚಿತ್ರರಂಗ ಅಂದ್ಮೇಲೆ ಕಲೆ ಇದೆ, ಸಾಹಿತ್ಯ ಇದೆ. ಮೋಜು-ಮಜಾ-ಮಸ್ತಿಯನ್ನೇ ತೋರಿಸಲಾಗ್ತಾ ಇದೆ. ಅದೇನಾದ್ರು ಇದ್ದರೆ ಅವರ ಪಾಡಿಗೆ ಅದನ್ನ ಸರಿ ಮಾಡಿಕೊಳ್ಳುತ್ತಾರೆ ಬಿಡಿ'' ಎಂದು ಪ್ರತಿಕ್ರಿಯಿಸಿದ್ದಾರೆ.

  ಹೊಡೆದಿಲ್ಲ ಎಂದ ಗಂಗಾಧರ್

  ಸಂದೇಶ್ ಪ್ರಿನ್ಸ್ ಹೋಟೆಲ್‌ನಲ್ಲಿ ಸಪ್ಲೈಯರ್ ಗಂಗಾಧರ್ ಮೇಲೆ ನಟ ದರ್ಶನ್ ಹಲ್ಲೆ ಮಾಡಿದ್ದರು ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪಿಸಿದ್ದರು. ಆದ್ರೆ, ಪೊಲೀಸರ ಮುಂದೆ ಹೇಳಿಕೆ ನೀಡಿದ ಗಂಗಾಧರ್, ದರ್ಶನ್ ನನ್ನನ್ನು ಹೊಡೆದಿಲ್ಲ, ರೇಗಾಡಿದರು ಅಷ್ಟೇ ಎಂದಿದ್ದಾರೆ.

  ಕ್ಷಮೆ ಕೇಳಿ, ಇಲ್ಲಿಗೆ ಬಿಟ್ಟು ಬಿಡೋಣ

  ಗಂಗಾಧರ್ ಹೇಳಿಕೆ ಬಳಿಕ ಪ್ರೆಸ್‌ಮೀಟ್ ಮಾಡಿದ ಇಂದ್ರಜಿತ್ ಲಂಕೇಶ್, ಶೋಷಣೆಗೆ ಒಳಗಾದವರು ಬಡವರು. ಅವರು ಕೆಲಸ ಹೋಗುತ್ತೆ, ಸಮಾಜದಲ್ಲಿ ಹೇಗೆ ಎನ್ನುವ ಭಯದಿಂದ ಹಾಗೆ ಹೇಳುತ್ತಿದ್ದಾರೆ. ಸಾಮಾಜಿಕ ಹಿತದೃಷ್ಟಿ, ಕಳಕಳಿಯಿಂದ ನಾನು ಈ ಹೋರಾಟ ಮುಂದುವರಿಸುತ್ತೇನೆ ಎಂದರು.

  ವೈರಲ್ ಆಯ್ತು ಕುಮಾರಸ್ವಾಮಿ, ಇಂದ್ರಜಿತ್ ಲಂಕೇಶ್ ಫೋಟೋ | Darshan Hotel Controversy | Filmibeat Kannada

  ''ನಟ ದರ್ಶನ್ ಮಾಡಿದ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಲಿ, ಅವರಿಗೆ ನ್ಯಾಯ ಒದಗಿಸಲಿ. ಇದನ್ನು ಇಲ್ಲಿಗೆ ಬಿಟ್ಟು ಬಿಡೋಣ. ಹಿಂದೆ-ಮುಂದೆ ತಳ್ಳಿದರೆ ಮತ್ತಷ್ಟು ತೇಜೋವಧೆ ಆಗುತ್ತದೆ'' ಎಂದು ಎಚ್ಚರಿಕೆ ಕೊಟ್ಟರು.

  English summary
  BJP MLC H Vishwanath Reaction about Darshan assaulting Waiter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X