'ಉಪೇಂದ್ರ' ಜೊತೆಗೆ ಈ ವಾರ ಯಾವೆಲ್ಲಾ ಕನ್ನಡ ಚಿತ್ರಗಳು ತೆರೆಗೆ ಬಂದಿದೆ?

ದೊಡ್ಡ ಸಿನಿಮಾಗಳಿಗಾಗಿ ಕನ್ನಡ ಪ್ರೇಕ್ಷಕರು ಇನ್ನು ಕೆಲ ದಿನ ಕಾಯಲೇಬೇಕು. ತಿಂಗಳ ಹಿಂದೆ 'ಭೀಮ' ಹಾಗೂ 'ಕೃಷ್ಣ ಪ್ರಣಯ ಸಖಿ' ಚಿತ್ರಗಳು ತೆರೆಕಂಡು ಯಶಸ್ವಿ ಪ್ರದರ್ಶನ ಕಂಡಿವೆ. ಹೊಸಬರ 'ಇಬ್ಬನಿ ತಬ್ಬಿದ ಇಳೆಯಲಿ' ಹಾಗೂ 'ಶಾಲಿವಾಹನ ಶಕೆ' ಸಿನಿಮಾಗಳು ಇತ್ತೀಚೆಗೆ ಬಂದು ಪ್ರೇಕ್ಷಕರ ಮನಗೆದ್ದಿವೆ.

ಈ ವಾರ ಹೊಸ ಸಿನಿಮಾಗಳ ಜೊತೆಗೆ ಹಳೇ ಸೂಪರ್ ಹಿಟ್ ಸಿನಿಮಾಗಳು ರೀ-ರಿಲೀಸ್ ಆಗಿವೆ. ರಿಯಲ್ ಸ್ಟಾರ್ ನಿರ್ದೇಶಿಸಿ ನಟಿಸಿದ 'ಉಪೇಂದ್ರ' ಸಿನಿಮಾ 25 ವರ್ಷಗಳ ಬಳಿಕ ತೆರೆಗೆ ಬಂದಿದೆ. ಇತ್ತೀಚೆಗೆ ಉಪೇಂದ್ರ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಅದರ ಬೆನ್ನಲ್ಲೇ ಸಿನಿಮಾ ರಾಜ್ಯಾದ್ಯಂತ ದೊಡ್ಡಮಟ್ಟದಲ್ಲಿ ರೀ-ರಿಲೀಸ್ ಆಗಿದೆ.

Hagga to Upendra kannada Movies Released In Theatres This Week

ಸೆಪ್ಟೆಂಬರ್ 18ಕ್ಕೆ ಉಪೇಂದ್ರ ಜೊತೆಗೆ ಸಾಹಸಸಿಂಹ ವಿಷ್ಣವರ್ಧನ್ ಹಾಗೂ ನಟಿ ಶ್ರುತಿ ಹುಟ್ಟುಹುಟ್ಟುಹಬ್ಬ ಸಹ ಇತ್ತು. ದಾದಾ ನಟನೆಯ ಸೂಪರ್ ಹಿಟ್ 'ಖೈದಿ' ಚಿತ್ರವನ್ನು ಕೆಲವೆಡೆ ರೀ-ರಿಲೀಸ್ ಮಾಡುವ ಪ್ರಯತ್ನ ನಡೀತು. ಚಿತ್ರಮಂದಿರದಲ್ಲಿ ಸಾಹಸಸಿಂಹನ ಅಭಿಮಾನಿಗಳು ಕೇಕ್ ಕತ್ತರಿಸಿ ಸಿನಿಮಾ ನೋಡಿ ಸಂಭ್ರಮಿಸಿದ್ದಾರೆ.

ಉಪೇಂದ್ರ

1998ರಲ್ಲಿ ಬಂದಿದ್ದ 'ಉಪೇಂದ್ರ' ಸಿನಿಮಾ ಹೊಸ ರೂಪದಲ್ಲಿ ರಾಜ್ಯಾದ್ಯಂತ ತೆರೆಕಂಡಿದೆ. ಉಪ್ಪಿ ಜೊತೆ ರವೀನಾ ಟಂಡನ್, ಪ್ರೇಮಾ ಹಾಗೂ ದಾಮಿನಿ ನಟಿಸಿದ್ದ ಸಿನಿಮಾ ಆ ಕಾಲಕ್ಕೆ ದಾಖಲೆಯ ಪ್ರದರ್ಶನ ಕಂಡಿತ್ತು. ಡಿಜಿಟಲ್ 4K ವರ್ಷನ್‌ನಲ್ಲಿ 'ಉಪೇಂದ್ರ' ಸಿನಿಮಾ ಮತ್ತೆ ತೆರೆಗೆ ಬಂದಿದೆ. ಪ್ರಸನ್ನ ಹಾಗೂ ನರ್ತಕಿ ಚಿತ್ರಮಂದಿರಗಳಲ್ಲಿ ಬೆಳಗ್ಗೆ 6 ಗಂಟೆ ಶೋ ಹೌಸ್‌ಫುಲ್ ಆಗಿತ್ತು. ಉಪ್ಪಿ ಕೂಡ ಅಭಿಮಾನಿಗಳ ಜೊತೆ ಕೂತು ಸಿನಿಮಾ ನೋಡಿ ಖುಷಿಪಟ್ಟರು.

ಹಗ್ಗ

ಅವಿನಾಶ್ ನಿರ್ದೇಶನದ 'ಹಗ್ಗ' ಸಿನಿಮಾ ಈ ವಾರ ತೆರೆಗೆ ಬಂದಿದೆ. ಅನು ಪ್ರಭಾಕರ್ ಈ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇದೊಂದು ಹಾರರ್ ಥ್ರಿಲ್ಲರ್ ಸಿನಿಮಾ ಆಗಿದ್ದು ಪ್ರೇಕ್ಷಕರಿಗೆ ವಿಭಿ ಅನುಭವ ನೀಡುತ್ತದೆ. ವಸಂತ ಸಿನಿ ಕ್ರಿಯೇಷನ್ಸ್ ಬ್ಯಾನರಿನಡಿಯಲ್ಲಿ ರಾಜ್ ಭಾರದ್ವಾಜ್ ಚಿತ್ರಕ್ಕೆ ಹಣ ಹೂಡಿದ್ದಾರೆ. ವೇಣು ಮತ್ತು ಹರ್ಷಿಕಾ ಪುಣಚ್ಚ ಕೂಡ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

Hagga to Upendra kannada Movies Released In Theatres This Week

ರಮ್ಮಿ ಆಟ

ಉಮರ್ ಷರೀಫ್ ನಿರ್ದೇಶನದ 'ರಮ್ಮಿ ಆಟ' ಚಿತ್ರಕ್ಕೂ ಈ ವಾರ ಬಿಡುಗಡೆ ಭಾಗ್ಯ ಸಿಕ್ಕಿದೆ. ಆನ್‌ಲೈನ್ ಜೂಜಿನಿಂದ ಆಗುವ ಸಮಸ್ಯೆಗಳ ಬಗ್ಗೆ ಚಿತ್ರದಲ್ಲಿ ಚರ್ಚಿಸಲಾಗಿದೆ. ರಾಘವ ಸೂರ್ಯ, ಸಯ್ಯದ್ ಇರ್ಫಾನ್, ವಿನ್ಯಾ ಶೆಟ್ಟಿ, ಸ್ನೇಹರಾವ್ ಚಿತ್ರದಲ್ಲಿ ನಟಿಸಿದ್ದಾರೆ.

ಲಂಗೋಟಿಮ್ಯಾನ್

ವಿಭಿನ್ನ ಟೈಟಲ್‌ನಿಂದಲೇ ಗಮನ ಸೆಳೆದಿರದ್ದ 'ಲಂಗೋಟಿಮ್ಯಾನ್' ಸಿನಿಮಾ ಕೂಡ ಈ ವಾರ ಪ್ರೇಕ್ಷಕರ ಮುಂದೆ ಬಂದಿದೆ. ನಿರ್ದೇಶಕಿ ಸಂಜೋತ ಭಂಡಾರಿ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಅಂಡರ್‌ವೇರ್ ಹಾಕಿಕೊಳ್ಳಬೇಕು ಎನ್ನುವ ಮೊಮ್ಮಗ, ಆದರೆ ತನ್ನ ಮೊಮ್ಮಗ ಲಂಗೋಟಿ ಹಾಕಿಕೊಳ್ಳಬೇಕು ಎನ್ನುವುದು ತಾತನ ಆಸೆ. ಇದನ್ನು ತಮಾಷೆಯಾಗಿ ಈ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ.

ಕರ್ಕಿ

ತಮಿಳಿನ 'ಪರಿಯೇರು ಪೆರುಮಾಳ್' ಚಿತ್ರದ ರೀಮೆಕ್ 'ಕರ್ಕಿ'. ಕೆಲ ತಮಿಳು ಸಿನಿಮಾಗಳನ್ನು ನಿರ್ದೇಶಿಸಿರುವ ಪವಿತ್ರನ್ ಈ ಚಿತ್ರದ ಸಾರಥಿ. ಜಯಪ್ರಕಾಶ್ ರೆಡ್ಡಿ, ಮೀನಾಕ್ಷಿ, ಸಾಧು ಕೋಕಿಲ, ಬಲ ರಾಜವಾಡಿ ಚಿತ್ರದ ಪ್ರಧಾನ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.

ಧ್ರುವತಾರೆ

ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡಿ ಜನಪ್ರಿಯರಾಗಿರುವ ಪ್ರತೀಕ್ ಹಾಗೂ ಪತ್ನಿ ಮೌಲ್ಯ ಜೋಡಿಯ 'ಧ್ರುವತಾರೆ' ಚಿತ್ರ ಬಿಡುಗಡೆ ಆಗಿದೆ. ಸ್ವತಃ ಪ್ರತೀಕ್ ಆಕ್ಷನ್ ಕಟ್ ಹೇಳಿದ್ದಾರೆ.ಜಿ. ಪಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಗಣೇಶ್ ಕುಮಾರ್ ಚಿತ್ರಕ್ಕೆ ಹಣ ಹೂಡಿದ್ದಾರೆ. ರಮೇಶ್ ಭಟ್, ಸುಮನ್ ನಗರ್ಕರ್ ಚಿತ್ರದ ತಾರಾಗಣದಲ್ಲಿದ್ದಾರೆ. 'ದಿ ಜರ್ನಲಿಸ್ಟ್' ಎನ್ನುವ ಮತ್ತೊಂದು ಸಿನಿಮಾ ಕೂಡ ಲಿಸ್ಟ್‌ನಲ್ಲಿದೆ.

More from Filmibeat

English summary
Here's a list of kannada movies released in theatres this week near you;
Read more about: upendra anu prabhakar sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X