ಪ್ರಪಂಚ ಬಿಟ್ಟು ಹೋಗುವ ಮುನ್ನ ಯಾಕೆ ಮಾತನಾಡಬಾರ್ದು; 'ಹಳ್ಳಿಮೇಷ್ಟ್ರು' ನಟಿ ಬಿಂದ್ಯಾ ಬೇಸರ
'ಹಳ್ಳಿಮೇಷ್ಟ್ರು' ಚಿತ್ರದಲ್ಲಿ ನಟಿಸಿದ್ದ ನಟಿ ಬಿಂದ್ಯಾ 34 ವರ್ಷಗಳ ಬಳಿಕ ಕ್ರೇಜಿಸ್ಟಾರ್ ರವಿಚಂದ್ರನ್ ಕ್ಷಮೆ ಕೇಳಿದ್ದಾರೆ. ಅಂದು ರವಿಚಂದ್ರನ್ ನನ್ನ ಮೇಲೆ ಅತ್ಯಾ*ಚಾರಕ್ಕೆ ಯತ್ನಿಸಿದ್ರು ಎಂದು ಆರೋಪಿಸಿ ಆಕೆ ವಿವಾದ ಹುಟ್ಟು ಹಾಕಿದ್ದರು. ಬಳಿಕ ಆಕೆಯ ವಿರುದ್ಧ ಕ್ರೇಜಿಸ್ಟಾರ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಆ ಆರೋಪ ಸಾಬೀತುಪಡಿಸಲು ಸಾಧ್ಯವಾಗದೇ ಬಿಂದ್ಯಾ ಕ್ಷಮೆ ಕೇಳುವಂತಾಗಿತ್ತು. ಇದೇ ವಿಚಾರವಾಗಿ ಇತ್ತೀಚೆಗೆ ಆಕೆ ಪ್ರತಿಕ್ರಿಯಿಸಿದ್ದಾರೆ.
ನಿರ್ದೇಶಕ ರಘುರಾಮ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಬಿಂದ್ಯಾ ಮಾತನಾಡಿದ್ದರು. ಅವತ್ತು ಮಾಡಿದ ತಪ್ಪಿಗೆ ಇವತ್ತಿಗೂ ಪಶ್ಚಾತಾಪಪಡುತ್ತಿದ್ದೀನಿ ಎಂದಿದ್ದರು. ಗೊತ್ತಿಲ್ಲದ ವಯಸ್ಸಿನಲ್ಲಿ ಆ ತಪ್ಪು ಆಗಿಬಿಡ್ತು ಕ್ಷಮಿಸಿ. ನಾನು ಏನೋ ಹೇಳಿದ್ರೆ ಪತ್ರಕರ್ತೆಯೊಬ್ಬರು ತಪ್ಪಾಗಿ ಅದನ್ನು ಮ್ಯಾಗಜೀನ್‌ನಲ್ಲಿ ಬರೆದುಬಿಟ್ಟಿದ್ದರು ಎಂದು ಬೇಸರ ವ್ಯಕ್ತಪಡಿಸಿದ್ದರು. ಬಹಿರಂಗವಾಗಿ ಕ್ರೇಜಿಸ್ಟಾರ್ ಕ್ಷಮೆ ಕೇಳಿ ಕಣ್ಣೀರಾಗಿದ್ದರು. ಆದರೆ ಕೆಲವರು ಆಕೆಯನ್ನು ಟ್ರೋಲ್ ಮಾಡಿದ್ದರು. ಇಷ್ಟು ವರ್ಷಗಳ ಬಳಿಕ ಈ ನಾಟಕ ಯಾಕೆ? ಸಿನಿಮಾ ಅವಕಾಶಗಳಿಗಾಗಿ ಹೀಗೆ ಮಾಡ್ತಿದ್ದಾರಾ? ಎಂದು ವ್ಯಂಗ್ಯವಾಡಿದ್ದರು. ಈ ಬಗ್ಗೆ ಬಿಂದ್ಯಾ ಮತ್ತೆ ಪ್ರತಿಕ್ರಿಯಿಸಿದ್ದಾರೆ.

ನನಗೆ ಯಾವುದೇ ಸಿನಿಮಾ ಅವಕಾಶ ಬೇಕಿಲ್ಲ. ನನ್ನಿಂದ ತಪ್ಪಾಗಿತ್ತು. ಅದಕ್ಕೆ ಸ್ಪಷ್ಟೀಕರಣ ಕೊಡಬೇಕಿತ್ತು. ಯಾರೋ ಮಾಡಿದ ತಪ್ಪಿಗೆ ಅಂದು ರವಿಚಂದ್ರನ್ ರೀತಿಯ ವ್ಯಕ್ತಿಗೆ ಅವಮಾನವಾಗಿತ್ತು. ಬಳಿಕ ನನಗೆ ಈ ಬಗ್ಗೆ ಮಾತನಾಡಲು ಅವಕಾಶ ಸಿಕ್ಕಿರಲಿಲ್ಲ. ಇವತ್ತಿನ ರೀತಿ ಅವತ್ತು ಸೋಶಿಯಲ್ ಮೀಡಿಯಾ ಇರಲಿಲ್ಲ. ನಿರ್ದೇಶಕ ರಘುರಾಮ್ ಸಂದರ್ಶನ ಮಾಡಿದ್ದಾಗ ಮಾತನಾಡಲು ಅವಕಾಶ ಸಿಕ್ಕಿತ್ತು. ಹಾಗಾಗಿ ಕ್ಷಮೆ ಕೇಳಿದೆ. ನನಗೆ ಮದುವೆಯಾಗಿದೆ. ಮಕ್ಕಳು ದೊಡ್ಡವರಾಗಿದ್ದಾರೆ. ಜೀವನದಲ್ಲಿ ಸೆಟ್ಲ್ ಆಗಿದ್ದೀನಿ. ಈಗ ಸಿನಿಮಾಗಳಲ್ಲಿ ನಟಿಸುವ ಅವಶ್ಯಕತೆ ನನಗಿಲ್ಲ. ಅವಕಾಶಕ್ಕಾಗಿ 34 ವರ್ಷಗಳ ಬಳಿಕ ಕ್ಷಮೆ ಕೇಳಿ ಸುದ್ದಿ ಆಗುವ ಅವಶ್ಯಕತೆ ಕೂಡ ನನಗಿಲ್ಲ ಎಂದು ಬಿಂದ್ಯಾ ಹೇಳಿದ್ದಾರೆ.
'ಹಳ್ಳಿಮೇಷ್ಟ್ರು' ಬಳಿಕ ನನಗೆ ಕನ್ನಡದಲ್ಲಿ ಅಷ್ಟಾಗಿ ಅವಕಾಶಗಳು ಸಿಗಲಿಲ್ಲ. ಯಾರು ಕೂಡ ಆ ವಿಚಾರದ ಬಗ್ಗೆ ನನ್ನ ಬಳಿ ಕೇಳಲಿಲ್ಲ. ರಘುರಾಮ್ ಅವರ ಸಂದರ್ಶನದಲ್ಲಿ ಮಾತನಾಡುವ ಅವಕಾಶ ಸಿಕ್ಕಿತ್ತು. ನಾನು ಯಾಕೆ ಮಾತನಾಡಬಾರದು. ನಾನು ರವಿಚಂದ್ರನ್ ಸರ್ ಬಗ್ಗೆ ಆ ರೀತಿ ಹೇಳಿದ್ದಕ್ಕೆ ಆ ಪತ್ರಕರ್ತೆ ಬಳಿ ಯಾವುದೇ ಆಧಾರ ಇರಲಿಲ್ಲ. ಆದರೆ ಅಹಿತಕರ ಘಟನೆ ನಡೆಯಿತು. ಈ ಪ್ರಪಂಚ ಬಿಟ್ಟು ಹೋಗುವ ಮುನ್ನ ಮಾಡಿದ ತಪ್ಪಿಗೆ ಕ್ಷಮೆ ಕೇಳುವ ಅವಕಾಶ ಸಿಕ್ಕಾಗ ಯಾಕೆ ಮಾತನಾಡಬಾರದು. ಆಗ ನಾನು ಚಿಕ್ಕ ಹುಡುಗಿ. ಈ ಇಬ್ಬರು ಮಕ್ಕಳ ತಾಯಿ. ಈ ನನಗೆ ಎಲ್ಲಾ ಗೊತ್ತಾಗ್ತಿದೆ. ಆದರೆ ಅವತ್ತು ರವಿಚಂದ್ರನ್ ಸರ್‌ಗೆ ಆ ಘಟನೆಯಿಂದ ಯಾವ ರೀತಿ ಸಮಸ್ಯೆ ಆಗಿರಬೇಡ, ಅದು ನನಗೆ ಗೊತ್ತು. ಅವ್ರು ಯಾವುದೇ ತಪ್ಪು ಮಾಡ್ಲಿಲ್ಲ, ಅಂತ ವ್ಯಕ್ತಿ ಅಲ್ಲ, ನಾನು ನ್ಯಾಯಾಲಯದಲ್ಲಿ ಅದನ್ನು ಸಾಬೀತು ಮಾಡೋಕು ಸಾಧ್ಯವಾಗಲಿಲ್ಲ ಎಂದು ಬಿಂದ್ಯಾ ಹೇಳಿದ್ದಾರೆ.
ಆಗ ರವಿಚಂದ್ರನ್ ಸರ್ ಒಬ್ಬ ತಂದೆ, ಒಬ್ಬ ಪತಿ ಆಗಿದ್ದರು. ಆದ್ರೆ ನನಗೆ ಸಂಬಂಧಗಳ ಬಗ್ಗೆ ಗೊತ್ತಿರಲಿಲ್ಲ. ಈಗ ಆ ಆರೋಪದ ಪರಿಣಾಮ ಹೇಗಿರಬಹುದು ಎಂದು ಗೊತ್ತಾಗುತ್ತಿದೆ. ಹಾಗಾಗಿ ರವಿಚಂದ್ರನ್ ಅವ್ರ ಅಭಿಮಾನಿಗಳಿಗೆ ಕನ್ನಡ ಚಿತ್ರರಂಗಕ್ಕೆ ನಾನು ಕ್ಷಮೆ ಕೇಳಿದ್ದು. ನನಗೆ ಯಾವುದೇ ಸಿನಿಮಾ ಅವಕಾಶ ಬೇಡ. ನನಗೆ 54 ವರ್ಷ ವಯಸ್ಸು ಈಗ. ನನ್ನನ್ನು ಟ್ರೋಲ್ ಮಾಡುವವರಿಗೆ ಒಂದೇ ಪ್ರಶ್ನೆ, ನಾನು ಯಾಕೆ ಮಾತನಾಡಬಾರದು, ಕ್ಷಮೆ ಕೇಳಬಾರದು ಎಂದು ನಟಿ ಬಿಂದ್ಯಾ ಪ್ರಶ್ನಿಸಿದ್ದಾರೆ. 'ಹಳ್ಳಿಮೇಷ್ಟ್ರು' ಬಳಿಕ 'ರಾಯರು ಬಂದರು ಮಾವನ ಮನೆಗೆ' ಹಾಗೂ 'ಶಿವ' ಎಂಬ ಕನ್ನಡ ಸಿನಿಮಾಗಳಲ್ಲಿ ಆಕೆ ನಟಿಸಿದ್ದರು.


Click it and Unblock the Notifications